Asianet Suvarna News Asianet Suvarna News

Missing: ಕಾಣೆಯಾದ ಮಗನ ಕೊರಗಲ್ಲಿ ತಂದೆ ಸಾವು, ಪತಿಗಾಗಿ ಪತ್ನಿಯ ಹುಡುಕಾಟ

ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ವಾಪಸ್ ಬರದ ಪತಿ, ಮಗನ ಚಿಂತೆಯಲ್ಲೇ ಕೊನೆ ಉಸಿರೆಳೆದ ತಂದೆ, ಅಪ್ಪನ ಬರುವಿಕೆಗಾಗಿ ಕಾಯುತ್ತಿರುವ ಪುಟಾಣಿಗಳು. ಕಾಣೆಯಾದ ಮಧು ಅವರ ಚಹರೆ ಹೀಗಿದೆ. ವಯಸ್ಸು 35, ಅಂದಾಜು 4 1/2 ಅಡಿ, ಗೋಧಿ ಮೈಬಣ್ಣ, ಕಪ್ಪು ಪ್ಯಾಂಟ್, ಬಿಳಿ ಶರ್ಟ್ ಎರಡು ಕಾಲಿನ ಪಾದಗಳು ಅಂಗವಿಕಲವಾಗಿವೆ. ಇವರ ಗುರುತು ಪತ್ತೆಯಾದರೆ, ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಮನವಿ.

Father dies in lamentation of missing son at honnavararav
Author
First Published Dec 5, 2022, 8:13 AM IST

ಬೆಂಗಳೂರು (ಡಿ.5) : ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ವಾಪಸ್ ಬರದ ಪತಿ, ಮಗನ ಚಿಂತೆಯಲ್ಲೇ ಕೊನೆ ಉಸಿರೆಳೆದ ತಂದೆ, ಅಪ್ಪನ ಬರುವಿಕೆಗಾಗಿ ಕಾಯುತ್ತಿರುವ ಪುಟಾಣಿಗಳು. ಇಂತದ್ದೊಂದು ಕರುಣಾಜನಕ ಘಟನೆ ನಡೆದಿದ್ದು, ನಾಗಮಂಗಲ ತಾಲ್ಲೂಕಿನ ಬಿಂಡಿಗ ನವಿಲೆ ಹೋಬಳಿಯಲ್ಲಿ. 

ಇಲ್ಲಿನ ನಿವಾಸಿಯಾದ ಮಧು ಕೆ.ಎಸ್ ಎನ್ನುವವರು ಕಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಮನೆಯಲ್ಲಿ ಬಡತನವಿದ್ದು, ಊರಿನಲ್ಲಿ ಕೂಲಿ ನಾಲಿ ಮಾಡಿ, ಜೀವನ ನಡೆಸುತ್ತಿದ್ದಾರೆ. 

ಮಧು ಅವರ ತಂದೆ - ತಾಯಿ ಬೆಂಗಳೂರಿನ ಅಂಚೆಪಾಳ್ಯದಲ್ಲಿ ವಾಸವಿದ್ದಾರೆ. 01/09/2022  ರಂದು ತಾಯಿ ನಾಗಮ್ಮ ಅವರು, ಸೊಸೆ ನಂದಿನಿಗೆ ಕರೆ ಮಾಡಿ ಮಧು ಅವರನ್ನು ತುರ್ತಾಗಿ ಬೆಂಗಳೂರಿಗೆ ಕಳಿಸಲು ತಿಳಿಸುತ್ತಾರೆ. ಆಗ ನಂದಿನಿ ಅವರು, ಪತಿಯನ್ನು ಹೊನ್ನಾವರ ಬಸ್ ಸ್ಟ್ಯಾಂಡ್ ಗೆ ಬಿಟ್ಟು, ಬೆಂಗಳೂರಿನ ಬಸ್ ಹತ್ತಿಸುತ್ತಾರೆ. ಸಂಜೆ ವೇಳೆಗೆ ಪತಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬರುತ್ತದೆ. ಗಾಬರಿಯಾಗಿ ಅತ್ತೆ ನಾಗಮ್ಮರಿಗೆ ಕರೆ ಮಾಡಿ ವಿಚಾರಿಸಿದರೆ, ಇಲ್ಲಿಗೆ ಬಂದೇ ಇಲ್ಲ ಎನ್ನುತ್ತಾರೆ. 

ಹಾವೇರಿಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮಿಸ್ಸಿಂಗ್‌ ಕೇಸ್‌!

ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ. ಮಧುಗಾಗಿ ಹುಡುಕಾಟ ಶುರುವಾಗುತ್ತದೆ. ಆದರೆ ಸುಳಿವು ಸಿಗುವುದಿಲ್ಲ.‌ ವಾರ ಕಳೆದರೂ ಮಗನ ಸುಳಿವು ಸಿಗದಿದ್ದರಿಂದ ತಂದೆ ಹಾಸಿಗೆ ಹಿಡಿದು; ಅದೇ ಕೊರಗಿನಲ್ಲಿ ದಿನೇ ದಿನೇ ಆರೋಗ್ಯ ಕ್ಷೀಣಿಸಿ ಇಹಲೋಕ ತ್ಯಜಿಸಿದರು. ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. 

ಮಧು ಅವರ ಪತ್ನಿ ನಂದಿನಿ, ಪತಿಗಾಗಿ ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲಿಯೂ ಪತಿಯ ಸುಳಿವು ಸಿಗದಿದ್ದರಿಂದ ಕಂಗಾಲಾಗಿದ್ದಾರೆ. ಇವರಿಗೆ ನೆರವಿನ ಅಗತ್ಯವಿದೆ. ‌

ಕಾಣೆಯಾದ ಮಧು ಅವರ ಚಹರೆ ಹೀಗಿದೆ. ವಯಸ್ಸು 35, ಅಂದಾಜು 4 1/2 ಅಡಿ, ಗೋಧಿ ಮೈಬಣ್ಣ, ಕಪ್ಪು ಪ್ಯಾಂಟ್, ಬಿಳಿ ಶರ್ಟ್ ಧರಿಸುತ್ತಾರೆ. ಎರಡು ಕಾಲಿನ ಪಾದಗಳು ಅಂಗವಿಕಲವಾಗಿವೆ. ಇವರ ಗುರುತು ಪತ್ತೆಯಾದರೆ, ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಮನವಿ ಮಾಡುತ್ತೇವೆ. ಕುಡಿದು ಕಾಟ ಕೊಡುತ್ತಿದ್ದ ನೇಪಾಳಿ; ಕೊಂದು ರಾಜಕಾಲುವೆಗೆ ಎಸೆದರು!...

Follow Us:
Download App:
  • android
  • ios