Asianet Suvarna News Asianet Suvarna News

ಕುಡಿದು ಕಾಟ ಕೊಡುತ್ತಿದ್ದ ನೇಪಾಳಿ; ಕೊಂದು ರಾಜಕಾಲುವೆಗೆ ಎಸೆದರು!

 ಕ್ಷುಲ್ಲಕ ಕಾರಣಕ್ಕೆ ಆಗಾಗ ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ಸಿಗರೆಟ್‌ ಕೊಡಿಸುವುದಾಗಿ ಉಪಾಯ ಮಾಡಿ ಹೊರಗೆ ಕರೆದೊಯ್ದು ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ರಾಜಕಾಲುವೆಗೆ ಎಸೆದಿದ್ದ ನೇಪಾಳ ಮೂಲದ ಅಪ್ರಾಪ್ತ ಸೇರಿ ಐವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

A Nepali who was drunk Killed and thrown into the rajakaluve bengaluru rav
Author
First Published Dec 5, 2022, 7:44 AM IST

ಬೆಂಗಳೂರು (ಡಿ.5) : ಕ್ಷುಲ್ಲಕ ಕಾರಣಕ್ಕೆ ಆಗಾಗ ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ಸಿಗರೆಟ್‌ ಕೊಡಿಸುವುದಾಗಿ ಉಪಾಯ ಮಾಡಿ ಹೊರಗೆ ಕರೆದೊಯ್ದು ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ರಾಜಕಾಲುವೆಗೆ ಎಸೆದಿದ್ದ ನೇಪಾಳ ಮೂಲದ ಅಪ್ರಾಪ್ತ ಸೇರಿ ಐವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಬುಸಾಬ್‌ ಪಾಳ್ಯದ ದಿನೇಶ್‌ ಸಿಂಗ್‌ ದಾಮಿ(19), ಶೇರ್‌ಸಿಂಗ್‌ ದಾಮಿ(20), ದೀಪಕ್‌(19), ನರೇಂದ್ರ(20) ಬಂಧಿತರು. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಕಾನೂನು ಪ್ರಕಾರ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಆರೋಪಿಗಳು ನ.30ರಂದು ನೇಪಾಳ ಮೂಲದ ದನ್‌ಸಿಂಗ್‌ ದಾಮಿ(23) ಎಂಬಾತನನ್ನು ಕೊಲೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ಹೋದವನು ಹೆಣವಾಗಿ ಪತ್ತೆ: ಜಯನಗರ ಪೊಲೀಸರ ವಿರುದ್ಧ ಗಂಭೀರ ಆರೋಪ

ಭಾನುವಾರ ಸಂಜೆ 4ರ ಸುಮಾರಿಗೆ ಬಾಬುಸಾಬ್‌ ಪಾಳ್ಯದ ರಾಜಕಾಲುವೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಹೊರತೆಗೆದು ಪರಿಶೀಲಿಸಿದಾಗ ಹಲ್ಲೆ ಮಾಡಿ ಆತನನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಾಗ ಕೊಲೆಯಾದ ದನ್‌ಸಿಂಗ್‌ ದಾಮಿ ಪಿಜಿಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಬಳಿಕ ಅದೇ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ.

ಕಾಟ ತಾಳಲಾರದೆ ಕೊಲೆಗೆ ಸ್ಕೆಚ್‌

ಕೊಲೆಯಾದ ದನ್‌ಸಿಂಗ್‌ ದಾಮಿ ಹಾಗೂ ಬಂಧಿತ ಆರೋಪಿಗಳು ನೇಪಾಳ ಮೂಲದವರು. ನಾಲ್ಕು ತಿಂಗಳ ಹಿಂದೆ ಭಾರತಕ್ಕೆ ಬಂದು ಎರಡು ತಿಂಗಳಿಂದ ನಗರದ ಬಾಬುಸಾಬ್‌ ಪಾಳ್ಯದ ಎಸ್‌.ಎಸ್‌.ಪಿಜಿಯಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಕೊಲೆಯಾದ ದನ್‌ ಸಿಂಗ್‌ ದಾಮಿ ಆರೋಪಿಗಳಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದು, ಇವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಮದ್ಯ ಕುಡಿಸಿ, ಸಿಗರೆಟ್‌ ಕೊಡಿಸಿ ಎಂದು ಪೀಡಿಸುತ್ತಿದ್ದ. ಹಲವು ಬಾರಿ ಕೆಲವರ ಮೇಲೆ ಹಲ್ಲೆಯನ್ನೂ ಮಾಡಿದ್ದ. ಈತನ ಕಾಟದಿಂದ ಬೇಸತ್ತಿದ್ದ ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದರು.

Belagavi: ಪತ್ನಿಯೊಂದಿಗೆ ಅಕ್ರಮ ಸಂಬಂಧ ಸಂಶಯಕ್ಕೆ ಅಣ್ಣನನ್ನೇ ಕೊಂದ ತಮ್ಮ

ಬೆಲ್ಟಿಂದ ಕುತ್ತಿಗೆ ಬಿಗಿದು ಕೊಲೆ

ನ.30ರಂದು ರಾತ್ರಿ 11.30ರ ಸಮಾರಿಗೆ ಮದ್ಯ ಸೇವಿಸಿ ಪಿಜಿಗೆ ಬಂದಿದ್ದ ದನ್‌ ಸಿಂಗ್‌ ದಾಮಿ, ಸಿಗರೆಟ್‌ ಕೊಡಿಸುವಂತೆ ಆರೋಪಿಗಳನ್ನು ಪೀಡಿಸಿದ್ದಾನೆ. ಅಷ್ಟರಲ್ಲಿ ಈತನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು, ಸಿಗರೆಟ್‌ ಕೊಡಿಸುವುದಾಗಿ ಉಪಾಯ ಮಾಡಿ ದನ್‌ಸಿಂಗ್‌ ದಾಮಿಯನ್ನು ಬಾಬುಸಾಬ್‌ ಪಾಳ್ಯದ ರಾಜಕಾಲುವೆ ಬಳಿ ಕರೆತಂದಿದ್ದಾರೆ. ಬಳಿಕ ಐವರು ಸೇರಿಕೊಂಡು ದನ್‌ ಸಿಂಗ್‌ ಮೇಲೆ ಹಲ್ಲೆ ಮಾಡಿ, ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios