ಟಿಪ್ಪರ್-ಕಾರು ನಡುವೆ ಭೀಕರ ಅಪಘಾತ: ಇಬ್ಬರು ಸಾವು, ಓರ್ವ ಗಂಭೀರ ಗಾಯ

ರಳಿನ ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತದಿಂದ ಇಬ್ಬರು ಸಾವು ಮತ್ತೋರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ನಿನ್ನೆ ತಡರಾತ್ರಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅಂಕಸಾಪುರ ಗ್ರಾಮದ ಬಳಿ ನಡೆದಿದೆ.

Fatal accident between tipper and car  two dead, one seriously injured at haveri rav

ಹಾವೇರಿ (ಜೂ.5) : ಮರಳಿನ ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತದಿಂದ ಇಬ್ಬರು ಸಾವು ಮತ್ತೋರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ನಿನ್ನೆ ತಡರಾತ್ರಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅಂಕಸಾಪುರ ಗ್ರಾಮದ ಬಳಿ ನಡೆದಿದೆ.

ಮಾಲತೇಶ್ ಕುಂದ್ರಳ್ಳಿ(21), ಮಾಲತೇಶ(24) ವರ್ಷ ಮೃತಪಟ್ಟ ದುರ್ದೈವಿಗಳು. ರಾಣೇಬೆನ್ನೂರಿನ ಲಲಿತಾ ಪಾಟೀಲ ಹಾಗೂ ನಾಗರಾಜ್ ಎಂಬುವರಿಗೆ ಗಾಯಗಳಾಗಿವೆ. 

ರಾಣೇಬೆನ್ನೂರಿನಿಂದ ಅಂಕಸಾಪುರ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ನಡೆದಿರುವ ದುರ್ಘಟನೆ. ಗಂಭೀರವಾಗಿ ಗಾಯಗೊಂಡ ಲಲಿತಾ ಪಾಟೀಲ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ

ಬೆಸ್ಕಾಂನಲ್ಲಿ ಅಧಿಕಾರಿ ಹುದ್ದೆ ತೋರಿಸಿ 20 ಲಕ್ಷ ಟೋಪಿ ಹಾಕಿದ ಖದೀಮರು!

ವಿದ್ಯುತ್‌ ಅವಘಡಕ್ಕೆ 2 ಎತ್ತು ಸಾವು, ಒಂದು ಎಮ್ಮೆ ಗಂಭೀರ ಗಾಯ

ರೋಣ ದನದ ಕೊಟ್ಟಿಗೆಯ ತಗಡಿನ ಚಾವಣಿಗೆ ಮುಖ್ಯ ವಿದ್ಯುತ್‌ ಪ್ರಸರಣ (ಮೇನ್‌ ಲೈನ್‌) ತಂತಿ ಸ್ಪರ್ಶದಿಂದ ಬೆಂಕಿ ಆವರಿಸಿ 2 ಎತ್ತುಗಳು ಅಸು ನೀಗಿದ್ದು, 1 ಎಮ್ಮೆಗೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ಸಂಭವಿಸಿದೆ.

ದನದ (ಜಾನುವಾರು) ಕೊಟ್ಟಿಗೆಗೆ ಸಂಪೂರ್ಣ ಬೆಂಕಿ ಆವರಿಸುತ್ತಿದ್ದಂತೆ ದೌಡಾಯಿಸಿದ ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಗಂಟೆಗೂ ಹೆಚ್ಚು ಕಾಲ ಶ್ರಮಿಸಿದರು.

ದಂಪತಿ ಶನಿವಾರ ಮಧ್ಯರಾತ್ರಿ 12 ಗಂಟೆವರೆಗೂ ಎತ್ತುಗಳಿಗೆ ಮೇವು ಹಾಕಿ, ನೀರುಣಿಸುವುದು, ಮೈಉಜ್ಜುವುದನ್ನು ಮಾಡಿದ್ದಾರೆ. ಬೆಳಗ್ಗೆ ಮೈತೊಳೆದು ಕಾರಹುಣ್ಣಿಮೆ ಹಬ್ಬಕ್ಕೆ ಎತ್ತುಗಳನ್ನು ಅಲಂಕಾರ ಮಾಡಿ ಸಂಭ್ರಮಿಸಬೇಕೆಂದು ಎತ್ತುಗಳ ಅಲಂಕಾರಕ್ಕೆ ಬೇಕಾದ ಜೂಲ, ಕೋಡಂಚು, ಗೆಜ್ಜೆಪಟ್ಟಿ, ಹಣಿಪಟ್ಟಿಮುಂತಾದ ಸಾಮಗ್ರಿ ತಂದಿಟ್ಟುಕೊಂಡಿದ್ದರು. ಆದರೆ ನಸುಕಿನ ಜಾವ ಎತ್ತುಗಳು ಬೆಂಕಿ ಕೆನ್ನಾಲಿಗೆ ಮಧ್ಯೆ ಸಿಲುಕಿ ನರಳುವುದನ್ನು ನೋಡಲಾಗದೇ ದಂಪತಿ ನೆಲಕ್ಕೊರಗಿ ಅಳುತ್ತಾ ಕಣ್ಣೀರು ಹಾಕುವ ದೃಶ್ಯ ಮನ ಕಲಕುವಂತಿತ್ತು.

ಸಾವಿನ ದವಡೆಯಲ್ಲಿದ್ದರೂ ಅಪ್ಪನನ್ನು ಕೇಳುತ್ತಿರುವ ಮಗು, ಅನಾಥನಾದ ಅರಿವೇ ಇಲ್ಲ

ಶೋಕದಲ್ಲಿ ಹುಲ್ಲೂರು:

ಕಾರ ಹುಣ್ಣಿಮೆ ರೈತರಿಗೆ, ಅದರಲ್ಲೂ ಎತ್ತುಗಳನ್ನು ಶೃಂಗರಿಸಿ, ಕರಿ ಹರಿಯಲು ತೆಗೆದುಕೊಂಡು ಹೋಗುವ ತವಕದಲ್ಲಿದ್ದ ರೈತ ಸಮೂಹಕ್ಕೆ ಘಟನೆ ತೀವ್ರ ಆಘಾತ ಉಂಟುಮಾಡಿದೆ. ಎತ್ತುಗಳು ಸತ್ತಿರುವುದನ್ನು ನೆನೆದು ಇಡೀ ಗ್ರಾಮವೇ ಕಣ್ಣೀರು ಹಾಕಿದೆ. ಎತ್ತುಗಳನ್ನು ಗ್ರಾಮದಾದ್ಯಂತ ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಲಾಯಿತು. ಅಂತ್ಯಸಂಸ್ಕಾರದಲ್ಲಿ ಇಡೀ ಗ್ರಾಮವೇ ಭಾಗಿಯಾಗಿ ಅಗಲಿದ ಬಸವಣ್ಣ (ಎತ್ತುಗಳಿಗೆ) ಅಶ್ರುತರ್ಪಣೆಗೈದು ವಿದಾಯ ಹೇಳಿತು. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕ, ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರಕರಣ ರೋಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Latest Videos
Follow Us:
Download App:
  • android
  • ios