ಎಸ್‌ಬಿಐ ಬ್ಯಾಂಕ್‌ನಲ್ಲಿ 4 ಲಕ್ಷ ಮತ್ತು ಗ್ರಾಮದ ಸಹಕಾರಿ ಸಂಘದ ಬ್ಯಾಂಕ್‌ನಲ್ಲಿ 99 ಸಾವಿರ ಹಾಗೂ ಮಕ್ಕಳ ಮದುವೆಗೆಂದು ಗ್ರಾಮದಲ್ಲಿ ಕೈಸಾಲ ತೆಗೆದುಕೊಂಡಿದ್ದ ಇಮಾಮಸಾಬ್‌ ಗೋರಮಿಟಕಲ್‌

ಕಲಬುರಗಿ(ಜೂ.25):  ಮಳೆ, ಬೆಳೆ ಸರಿಯಾಗಿ ಆಗದೇ ಇರುವುದರಿಂದ ಮಾಡಿದ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಬ್‌ ಅರ್ಬನ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅವರಾದ (ಬಿ) ಗ್ರಾಮದಲ್ಲಿ ನಡೆದಿದೆ. ಇಮಾಮಸಾಬ್‌ ಗೋರಮಿಟಕಲ್‌ ಮೃತ​ಪಟ್ಟ ವ್ಯಕ್ತಿ​ಯಾ​ಗಿ​ದ್ದಾರೆ.

ಅವರಾದ (ಬಿ) ಸೀಮಾಂತರದಲ್ಲಿ 4.22 ಗುಂಟೆ ಜಮೀನಿದ್ದು, ಎಸ್‌ಬಿಐ ಬ್ಯಾಂಕ್‌ನಲ್ಲಿ 4 ಲಕ್ಷ ಮತ್ತು ಗ್ರಾಮದ ಸಹಕಾರಿ ಸಂಘದ ಬ್ಯಾಂಕ್‌ನಲ್ಲಿ 99 ಸಾವಿರ ಹಾಗೂ ಮಕ್ಕಳ ಮದುವೆಗೆಂದು ಗ್ರಾಮದಲ್ಲಿ ಕೈಸಾಲ ತೆಗೆದುಕೊಂಡಿದ್ದರು. 

ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು, ಆತ್ಮಹತ್ಯೆ ಶರಣಾದ ಮನೆ ಮಾಲಕಿ

ಮಳೆ, ಬೆಳೆ ಸರಿಯಾಗಿ ಆಗದೇ ಇರುವುದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಇಮಾಮಸಾಬ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.