Asianet Suvarna News Asianet Suvarna News

ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು, ಆತ್ಮಹತ್ಯೆ ಶರಣಾದ ಮನೆ ಮಾಲಕಿ

ಮನೆ ಬಾಡಿಗೆಗೆ ಬಂದಿದ್ದ ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು ಮನೆ ಮಾಲಕಿಯೇ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಹಾಸನ ನಗರದಲ್ಲಿ ನಡೆದಿದೆ. 

Hassan house owner upset and self death due to tenant harassment sat
Author
First Published Jun 22, 2023, 12:22 PM IST

ಹಾಸನ (ಜೂ.22): ಸಾಮಾನ್ಯವಾಗಿ ಯಾವುದೇ ಬಾಡಿಗೆ ಮನೆಯನ್ನು ಮಾಡಿಕೊಂಡರೂ ಮನೆ ಮಾಲೀಕರಿಂದ ಬಾಡಿಗೆದಾರರಿಗೆ ಕಿರಿಕುಳ ಆಗುವುದುನ್ನು ನಾವು ಕೇಳಿರುತ್ತೇವೆ. ಆದರೆ, ಇಲ್ಲಿ ಬಾಡಿಗೆದಾರರು ಪ್ರತನಿತ್ಯ ಕಿರುಕುಳ ನೀಡುತ್ತಿದ್ದುದಕ್ಕೆ ಬೇಸತ್ತು ಮನೆಯ ಮಾಲಕಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಮನೆ ಮಾಲಕಿಯ ಸಾವಿನ ಸುದ್ದಿ ಕೇಳಿ ಅವರ ತಾಯಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬಾಡಿಗೆದಾರರ ಕಿರುಕುಳದಿಂದ ಬೇಸತ್ತು ಮನೆ ಮಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ. ಇನ್ನು ಮನೆ ಮಾಲಕಿಯಾಗಿದ್ದ ಮಗಳ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಆಕೆಯ ತಾಯಿಯೂ ಸಾವನ್ನಪ್ಪಿದ್ದಾರೆ. ಬಾಡಿಗೆಯವರ ಕಿರುಕುಳದಿಂದ ಬೇಸತ್ತಿದ್ದ ಮನೆ ಮಾಲಕಿ ಲಲಿತಾ(55) ಎರಡು ದಿನಗಳ ಹಿಂದೆ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಮಗಳು ಸಾವಿನ ಸುದ್ದಿ ಕೇಳಿ ಅಘಾತದಿಂದ ತಾಯಿ ಲಕ್ಣ್ಮಮ್ಮ(75) ಸಾವಿಗೀಡಾಗಿದ್ದಾರೆ.

ಕೆಜಿಎಫ್‌ ರೀತಿ ಸುತ್ತಿಗೆಯಿಂದ ಹೊಡೆದು ಮಕ್ಕಳನ್ನು ಕೊಂದ ಅಪ್ಪ

ಮನೆ ಮಾಲಕರ ಮೇಲೆ ಹಲ್ಲೆಗೆ ಯತ್ನ:  ದಾಸರಕೊಪ್ಪಲಿನಲ್ಲಿ ಮನೆ ಹೊಂದಿದ್ದ ಲಲಿತಮ್ಮ ಹಾಗೂ ಪತಿ ನಾಗರಾಜ್, ಮನೆ ಮೇಲ್ಭಾಗದಲ್ಲಿದ್ದ ಮನೆಗಳನ್ನು ಬಾಡಿಗೆ ನೀಡಿದ್ದರು. ಇದರಲ್ಲಿ ಕೆಲವು ಮನೆಗಳನ್ನು ಬಾಡಿಗೆ ಮತ್ತು ಭೋಗ್ಯಕ್ಕೆ ನೀಡಿದ್ದರು. ಮನೆ ಮಾಲಕಿ ಲಲಿತಾ ಎರಡು ವರ್ಷದ ಹಿಂದೆ ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ- ನಟರಾಜ ದಂಪತಿಗೆ 5 ಲಕ್ಷ ರೂ.ಗೆ ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಿದ್ದರು. ಆದರೆ, ವಿನಾಃ ಕಾರಣ ಲಲಿತಾ ಅವರೊಂದಿಗೆ ಸುದಾರಾಣಿ ಮತ್ತು ನಟರಾಜ್ ಜಗಳ ಮಾಡುತ್ತಿದ್ದರು.

ಮನೆಯಲ್ಲಿ ಚಿನ್ನದ ಸರ ಕದ್ದಿದ್ದೀಯಾ ಎಂದು ಆರೋಪ:  ಮನೆ ಮಾಲಕಿಯೊಂದಿಗೆ ಹಣದ ವಿಚಾರಕ್ಕೆ ಒಮ್ಮೆ ನಾಗರಾಜ ಮತ್ತು ಲಲಿತಾ ಅವರ ಮೇಲೆ ಭೋಗ್ಯಕ್ಕೆ ಇರುವ ದಂಪತಿ ಸುಧಾರಾಣಿ ಮತ್ತು ನಟರಾಜ ಹಲ್ಲೆಗೆ ಮಾಡಲು ಮುಂದಾಗಿದ್ದರು. ಆಗ, ಅಕ್ಕಪಕ್ಕದ ಜನರೇಢ ಜಗಳವನ್ನು ಬಿಡಿಸಿದ್ದರು. ಬಾಡಿಗೆಗೆ ಇದ್ದ ಸುಧಾರಾಣಿ ಜೂ.16 ರಂದು ಸರ ಕದ್ದಿದ್ದೀಯಾ ಕಳ್ಳಿ ಮನೆ ಒಡತಿ ಲಲಿತಾಳೊಂದಿಗೆ ಜಗಳ ತೆಗೆದು ಬಾಯಿಗೆ ಬಂದಂತೆ ಬೈಯ್ದಿದ್ದಳು. ಇದರಿಂದ ಬೇಸರಗೊಂಡ ಮಾಲಕಿ ಮನೆ ಬಿಟ್ಟು ಹೋಗಿದ್ದಳು.

ಮಾದಕ ವ್ಯಸನಿ ಯುವಕನನ್ನು ಕೊಲೆ ಮಾಡಿ ದೇವರಮನೆಯಲ್ಲಿ ಎಸೆದ ದುಷ್ಕರ್ಮಿಗಳು

ವಿಷ ಸೇವಿಸಿ ಮಗಳು ಸಾವು, ಆಘಾತದಿಂದ ತಾಯಿ ಸಾವು: ಜೂ.17 ರಂದು ಬೆಳಿಗ್ಗೆ ನಂಜದೇವರಕಾವಲು ಗ್ರಾಮದ ಅವರ ಜಮೀನಿನಲ್ಲಿ ಕಳೆನಾಶಕ ಕುಡಿದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದಳು. ಕೂಡಲೇ ಅವರನ್ನು ಪತಿ ನಾಗರಾಜು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂ.20 ರಂದು ರಾತ್ರಿ ಲಲಿತಾ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಮಗಳ ಸಾವಿನ ಸುದ್ದಿ ಕೇಳಿ ಲಲಿತಾ ತಾಯಿ ಲಕ್ಷಮ್ಮ ನಿನ್ನೆ ಸಾವಿಗೀಡಾಗಿದ್ದಾರೆ. ಈ ಘಟನೆ ಕುರಿತಂತೆ ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Follow Us:
Download App:
  • android
  • ios