ಧಾರವಾಡ(ಫೆ.09): ಖಾಸಗಿ ಬ್ಯಾಂಕಿನಿಂದ ಸಾಲ ತುಂಬುವಂತೆ ನೋಟಿಸ್‌ ಬಂದ ಹಿನ್ನೆಲೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಾಪುರದಲ್ಲಿ ನಡೆದಿದೆ.

ಮಹಾರುದ್ರಪ್ಪ ಕೋಟಿ (52) ಆತ್ಮಹತ್ಯೆ ಮಾಡಿಕೊಂಡ ರೈತ. ಖಾಸಗಿ ಸಹಕಾರಿ ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡುವಂತೆ ಇತ್ತೀಚೆಗೆ ನೋಟಿಸ್‌ ಬಂದಿತ್ತು.

ಬಳ್ಳಾರಿ: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಕೋ- ಆಪ್‌ ಸೊಸೈಟಿಯಲ್ಲಿ ಅವರು ಸಾಲ ಮಾಡಿದ್ದರು. ಅಲ್ಲಿಂದ ನೋಟಿಸ್‌ ಬಂದಿತ್ತು. ಇಲ್ಲಷ್ಟೇ ಅಲ್ಲದೇ, ವಿವಿಧೆಡ ಸುಮಾರು 5 ಲಕ್ಷ ಸಾಲ ಮಾಡಿದ್ದರು ಎಂದು ಹೇಳಲಾಗಿದೆ. ಊರ ಹೊರಗಿನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.