ಧಾರವಾಡ(ಡಿ.28): ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ವಿರಕ್ತಮಠದ ಓಣಿಯ ರೈತ ಜಗದೀಶ ಈರಯ್ಯ ಇಂಚಗೇರಿಮಠ (39) ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ತನ್ನ ಪಾಲಿಗೆ ಬಂದ 4 ಎಕರೆ ಜಮೀನಿನಲ್ಲಿ ಮುಂಗಾರು ಬೆಳೆ ಬರದೇ ನಷ್ಟ ಅನುಭವಿಸಿದ್ದ ಈರಯ್ಯ ಭಾನುವಾರ ನಸುಕಿನಲ್ಲಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. 

ಹಗರಿಬೊಮ್ಮನಹಳ್ಳಿ: ಗ್ರಾಮ ಪಂಚಾ​ಯಿತಿ ಅಭ್ಯ​ರ್ಥಿ ಆತ್ಮ​ಹ​ತ್ಯೆ

ಈರಯ್ಯ ಹೆಸರಿನಲ್ಲಿ 5 ಲಕ್ಷ ಗಳವರೆಗೆ ಸಾಲವಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.