ಹಗರಿಬೊಮ್ಮನಹಳ್ಳಿ(ಡಿ.25): ತಾಲೂಕಿನ ದಶಮಾಪುರ ಗ್ರಾಪಂ ವ್ಯಾಪ್ತಿಯ ನಾಣ್ಯಪುರದಲ್ಲಿ ಗ್ರಾಮ ಪಂಚಾ​ಯಿತಿ ಚುನಾ​ವ​ಣೆಗೆ ಸ್ಪರ್ಧಿಸಿದ್ದ ಅಭ್ಯ​ರ್ಥಿಯೊಬ್ಬರು ಗುರು​ವಾ​ರ ಹುಣಸೆಮರಕ್ಕೆ ನೇಣು ಹಾಕಿ​ಕೊಂಡು ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದಾರೆ.

ಗ್ರಾಮದ ಮಲಿಯಪ್ಪ ಉಫ್‌ರ್‍ ಮಲ್ಲೇಶ್‌ (40) ಗುರುವಾರ ಸಂಜೆ 4 ಗಂಟೆಯ ಸುಮಾರಿನಲ್ಲಿ ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಅವರ ಹೊಲದ ಹುಣಸೆಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮದ ಎಸ್‌ಸಿ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಮಲಿಯಪ್ಪ ಗ್ರಾಮದ ವಾರ್ಡ್‌ನಲ್ಲಿ ಮತಯಾಚಿಸಿದ್ದಾ​ರೆ.

ತಹಶೀಲ್ದಾರ್‌ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಮುಂಚೆಯೇ ಕಾರಣ ಬಿಚ್ಚಿಟ್ಟ ಶಾಸಕ!

ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೂಡ್ಲಿಗಿ ಪೊಲೀಸ್‌ ಠಾಣೆಗೆ ತಲುಪಿಸಲಾಗಿದೆ. ಪೊಲೀಸರು ರಾತ್ರಿ 8.30ಕ್ಕೆ ಗ್ರಾಮದ ಘಟನಾ ಸ್ಥಳಕ್ಕೆ ಆಗಮಿಸಿ, ಹಗ್ಗದಲ್ಲಿ ನೇತಾಡುತ್ತಿದ ಮಲಿಯಪ್ಪ ಅವರ ಶವ ಕೆಳಗಿಳಿಸಿ ದೂರು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದರು.

ಈ ಬಗ್ಗೆ ಚುನಾವಣಾಧಿಕಾರಿ ಆರ್‌ಒ ರಮೇಶ್‌ ಪ್ರತಿಕ್ರಿಯಿಸಿ, ಈ ಚುನಾವಣೆ ಬಹುತೇಕ ಪಕ್ಷಗಳ ಚಿಹ್ನೆಯ ಮೇಲೆ ನಡೆಯುವುದಿಲ್ಲ. ಪಕ್ಷಾತೀತವಾಗಿದ್ದು, ಅದರಲ್ಲೂ ಎಸ್‌ಸಿ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿರುವುದರಿಂದ ಅದೇ ವಾರ್ಡ್‌ನಲ್ಲಿ ಎಸ್‌ಸಿ ಮಹಿಳಾ ಮೀಸಲಾತಿ ಕೂಡ ಇರುವ ಕಾರಣ ಅವರು ಸಹ ಸ್ಪರ್ಧೆಯಲ್ಲಿ ಎಸ್‌ಸಿ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಗಳಾಗುವ ಹಿನ್ನೆಲೆಯಲ್ಲಿ ಚುನಾವಣೆ ಸ್ಥಗಿತಗೊಳ್ಳುವುದಿಲ್ಲವೆಂದು ಸ್ಪಷ್ಟೀ​ಕ​ರಿ​ಸಿ​ದ​ರು.