Asianet Suvarna News Asianet Suvarna News

ರಾಯಚೂರು: ಸಾಲಬಾಧೆ ತಾಳದೆ ವಿಷ ಕುಡಿದಿದ್ದ ರೈತ ಸಾವು

ಸೋಮವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಬಸವರಾಜ ಅವರನ್ನು ಸ್ಥಳೀಯ ರಿಮ್ಸ್‌ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರೈತ ಕೊನೆಯುಸಿರೆಳೆದಿದ್ದಾರೆ. 

Farmer Committed Suicide due to Loan in Raichur grg
Author
First Published Nov 16, 2023, 10:15 PM IST

ರಾಯಚೂರು(ನ.16):  ಸಾಲಬಾಧೆ ತಾಳದೆ ವಿಷ ಕುಡಿದು ಅಸ್ವಸ್ಥಗೊಂಡಿದ್ದ ರೈತ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾನೆ. ತಾಲೂಕಿನ ಗೋನಾಳ ಗ್ರಾಮದ ರೈತ ಬಸವರಾಜ (55) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ರೈತ ಬಸವರಾಜ ಐದು ಎಕರೆ ಜಮೀನಿನಲ್ಲಿ ತೊಗರಿ ಬಿತ್ತನೆ ಮಾಡಿದ್ದರು. ಲಕ್ಷಾಂತರ ರುಪಾಯಿ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಡೆತ್‌ನೋಟ್ ಬರೆದಿಟ್ಟು ಬ್ರಹ್ಮಕುಮಾರಿ ಆಶ್ರಮದಲ್ಲಿ ಸಾವಿಗೆ ಶರಣಾದ ಸೋದರಿಯರು 

ಸೋಮವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಬಸವರಾಜ ಅವರನ್ನು ಸ್ಥಳೀಯ ರಿಮ್ಸ್‌ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರೈತ ಕೊನೆಯುಸಿರನ್ನೆಳೆದಿದ್ದು, ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow Us:
Download App:
  • android
  • ios