ಡೆತ್‌ನೋಟ್ ಬರೆದಿಟ್ಟು ಬ್ರಹ್ಮಕುಮಾರಿ ಆಶ್ರಮದಲ್ಲಿ ಸಾವಿಗೆ ಶರಣಾದ ಸೋದರಿಯರು

ಇಲ್ಲಿನ ಬ್ರಹ್ಮಕುಮಾರಿ ಆಶ್ರಮದಲ್ಲಿ ವಾಸವಿದ್ದ ಸೋದರಿಯರಿಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಡೆತ್‌ನೋಟ್‌ನಲ್ಲಿ ಸೋದರಿಯರು ಆಶ್ರಮದ ನಾಲ್ವರು ಉದ್ಯೋಗಿಗಳನ್ನು ದೂರಿ ಬರೆದಿದ್ದು, ಬಳಿಕ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

two Sisters surrendered to death in Brahmakumari Ashram at Agra after writing a death note akb

ಆಗ್ರಾ: ಇಲ್ಲಿನ ಬ್ರಹ್ಮಕುಮಾರಿ ಆಶ್ರಮದಲ್ಲಿ ವಾಸವಿದ್ದ ಸೋದರಿಯರಿಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಡೆತ್‌ನೋಟ್‌ನಲ್ಲಿ ಸೋದರಿಯರು ಆಶ್ರಮದ ನಾಲ್ವರು ಉದ್ಯೋಗಿಗಳನ್ನು ದೂರಿ ಬರೆದಿದ್ದು, ಬಳಿಕ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

37 ವರ್ಷ ಪ್ರಾಯದ ಏಕ್ತಾ ಹಾಗೂ 34 ವರ್ಷ ಪ್ರಾಯದ ಸಿಕ್ತಾ ಸಾವಿಗೆ ಶರಣಾದ ಸೋದರಿಯರು. ಇವರಿಬ್ಬರು ಆಗ್ರಾದ ಜಗನೇರ್ ಪ್ರದೇಶದಲ್ಲಿರುವ ಆಶ್ರಮದಲ್ಲಿ ಕಳೆದೊಂದು ವರ್ಷದಿಂದ ವಾಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.  ಸಾವಿಗೂ ಮುನ್ನ ಇವರಿಬ್ಬರೂ ತಮ್ಮ ಡೆತ್‌ನೋಟನ್ನು ಬ್ರಹ್ಮಕುಮಾರಿಯರ ಗ್ರೂಪ್ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ವಾಟ್ಸಾಪ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಹೆಂಡತಿ ಇಬ್ಬರು ಹೆಣ್ಣು ಮಕ್ಕಳಿಗೆ ಗುಂಡಿಕ್ಕಿ ಪೊಲೀಸ್ ಪೇದೆ ಸಾವಿಗೆ ಶರಣು

ಇವರಿಬ್ಬರ ಸೋದರ ಈ ಆಶ್ರಮದಿಂದ 13 ಕಿಲೋ ಮೀಟರ್ ದೂರದಲ್ಲಿ ವಾಸ ಮಾಡುತ್ತಿದ್ದ. ಈತ ಸೋದರಿಯರ ವಾಟ್ಸಾಪ್ ಸಂದೇಶ ನೋಡಿ ಕೂಡಲೇ ಅಲ್ಲಿಗೆ ಹೊರಟು ಬಂದಿದ್ದು, ಅಷ್ಟರಲ್ಲಿ ಸೋದರಿಯರು ಸಾವನ್ನಪ್ಪಿದ್ದಾರೆ. ಈ ಸೋದರಿಯರ ಬಳಿ ಇದ್ದ ಫೋನ್ ಹಾಗೂ ಡೆತ್‌ನೋಟನ್ನು ನಮ್ಮ ಸುಪರ್ದಿಗೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಆಶ್ರಮದ ನಾಲ್ವರು ಉದ್ಯೋಗಿಗಳು ನಮ್ಮ 25 ಲಕ್ಷದಷ್ಟು ಹಣವನ್ನು ಕಸಿದುಕೊಂಡಿದ್ದಾರೆ ಎಂದು ಸೋದರಿಯರು ಆರೋಪಿಸಿದ್ದಾರೆ. 

ಮಹಾರಾಷ್ಟ್ರ: 7 ತಿಂಗಳಲ್ಲಿ 1555 ರೈತರು ಸಾವಿಗೆ ಶರಣು

ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಅಲ್ಲದೇ ಸೋದರಿಯರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ ಆಶ್ರಮದ ಸಿಬ್ಬಂದಿ ವಿರುದ್ಧವೂ ಜಗನೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಎಂದು ತನಿಖೆ ಮಾಡಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಎಸಿಪಿ ಕುಮಾರ್ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios