Asianet Suvarna News Asianet Suvarna News

Ramanagara: ಬ್ಯಾಂಕ್‌ ನೋಟಿಸ್‌ಗೆ ಹೆದರಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಬ್ಯಾಂಕ್‌ ನೋಟಿಸ್‌ಗೆ ಹೆದರಿ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೆಂಡಗೋಡು ಗ್ರಾಮದಲ್ಲಿ ಶುಕ್ರ​ವಾ​ರ ನಡೆದಿದೆ. ರಾಮನಾಯ್ಕ (80) ಆತ್ಮಹತ್ಯೆ ಮಾಡಿಕೊಂಡಿರುವ ರೈತ. 

farmer commits suicide in ramanagara due to bank loan notice gvd
Author
First Published Feb 11, 2023, 2:40 AM IST

ರಾಮನಗರ (ಫೆ.11): ಬ್ಯಾಂಕ್‌ ನೋಟಿಸ್‌ಗೆ ಹೆದರಿ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೆಂಡಗೋಡು ಗ್ರಾಮದಲ್ಲಿ ಶುಕ್ರ​ವಾ​ರ ನಡೆದಿದೆ. ರಾಮನಾಯ್ಕ (80) ಆತ್ಮಹತ್ಯೆ ಮಾಡಿಕೊಂಡಿರುವ ರೈತ. 5 ವರ್ಷಗಳ ಹಿಂದೆ ಯೂಕೋ ಬ್ಯಾಂಕ್‌ನ ದೊಡ್ಡ ಆಲಹಳ್ಳಿ ಶಾಖೆಯಲ್ಲಿ ರಾಮನಾಯ್ಕ ಅವ​ರು ಬೆಳೆ ಸಾಲ ಪಡೆದಿದ್ದರು. ಕಾರ​ಣಾಂತ​ರ​ಗ​ಳಿಂದಾಗಿ ಅವರು ಸರಿ​ಯಾ​ಗಿ ಸಾಲ ತೀರಿ​ಸಲು ಸಾಧ್ಯ​ವಾ​ಗ​ಲಿಲ್ಲ. ಇದೀಗ ಏಕಾಏಕಿ ಬ್ಯಾಂಕಿನಿಂದ ಸಾಲ ತೀರಿಸುವಂತೆ ಮನೆಗೆ ನೋಟಿಸ್‌ ಕಳು​ಹಿ​ಸ​ಲಾ​ಗಿತ್ತು. ನೋಟಿಸ್‌ ನೋಡು​ತ್ತಿ​ದ್ದಂತೆ ಆತಂಕ​ಕ್ಕೊ​ಳ​ಗಾದ ರಾಮನಾಯ್ಕ ಸಾಲ ತೀರಿಸುವ ಮಾರ್ಗ ತಿಳಿ​ಯದೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಸಾತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ಠಾಣೆಗೆ ಬಂದ ಭೂಪ: ಪರಿಚಿತ ಮಹಿಳೆಯೊಬ್ಬಳು ತನ್ನ ವಿರುದ್ಧ ದೂರು ನೀಡಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಗುರುವಾರ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಗೆ ಬಂದಿದ್ದ ಘಟನೆ ನಡೆದಿದೆ. ಚಂದ್ರಾಲೇಔಟ್‌ ನಿವಾಸಿ ಅನಿಲ್‌( 30) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ವಿಷ ಕುಡಿದಿರುವ ವಿಚಾರ ಹೇಳುತ್ತಿದ್ದ ಪೊಲೀಸರು ಕೆಂಪೇಗೌಡ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಅನಿಲ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಅನಿಲ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮೋದ್ ಮುತಾಲಿಕ್ ವಿರುದ್ಧ ತಿರುಗಿ ಬಿದ್ದ ಮಂಗಳೂರು ವಿಭಾಗ ಶ್ರೀರಾಮ ಸೇನೆ

ಅನಿಲ್‌ ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಕೆಲ ವರ್ಷಗಳಿಂದ 40 ವರ್ಷದ ಮಹಿಳೆ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ಆಕೆಯ ಪತಿ ಇತ್ತೀಚೆಗೆ ಮಹಿಳೆಯನ್ನು ಠಾಣೆಗೆ ಕರೆತಂದು ಅನಿಲ್‌ ವಿರುದ್ಧ ದೂರು ಕೊಡಿಸಿದ್ದ. ಈ ವೇಳೆ ಅನಿಲ್‌ನನ್ನು ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಈ ನಡುವೆ ಅನಿಲ್‌ ಮಹಿಳೆಗೆ ಅಕ್ರಮ ಸಂಬಂಧ ಮುಂದುವರೆಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಮಹಿಳೆ ಮತ್ತೆ ಅನಿಲ್‌ ವಿರುದ್ಧ ದೂರು ನೀಡಲು ಚಂದ್ರಾಲೇಔಟ್‌ ಪೊಲೀಸ್‌ ಠಾಣೆಗೆ ಬಂದಿದ್ದಳು.

ಪೊಲೀಸರ ಕಿರುಕುಳ ಆರೋಪ: ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಯತ್ನ

ಈ ವಿಚಾರ ತಿಳಿದ ಅನಿಲ್‌, ವಿಷ ಸೇವಿಸಿ ನೇರ ಪೊಲೀಸ್‌ ಠಾಣೆಗೆ ಬಂದು ಮಹಿಳೆ ನನಗೆ ಕಿರಕುಳ ನೀಡುತ್ತಿದ್ದಾಳೆ. ಪದೇ ಪದೇ ನನ್ನ ವಿರುದ್ಧ ಠಾಣೆಗೆ ದೂರು ನೀಡುತ್ತಿದ್ದಾಳೆ. ಹೀಗಾಗಿ ನಾನು ವಿಷ ಕುಡಿದು ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಪೊಲೀಸರು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅನಿಲ್‌ ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios