ಮಂಜೇಶ್ವರ(ಆ.  04)   ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಲಾಗಿದೆ.  ಸದಾಶಿವ (54), ವಿಠ್ಠಲ(52) ,ಬಾಬು (50), ಮತ್ತು ರೇವತಿ (58) ಕೊಲೆಯಾಗಿ ಹೋಗಿದ್ದಾರೆ.

ರಾತ್ರಿ ಊಟ ಮಾಡಿ ಇನ್ನೇನು ಮಲಗಬೇಕು ಎನ್ನೋವಷ್ಟರಲ್ಲೇ ಹರಿತವಾದ ಆಯುಧ ಹಿಡಿದು ಬಂದ  ಹತ್ತಿರದ ಸಂಬಂಧಿ ಮನೆಯಲ್ಲಿದ್ದ ನಾಲ್ವರನ್ನೂ ಕತ್ತರಿಸಿ ಕೊಲೆ ಮಾಡಿದ್ದಾನೆ.  ಭೀಕರ ಘಟನೆಗೆ ಕೇರಳದ ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಸಾಕ್ಷಿಯಾಗಿದೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.

10  ಜನರನ್ನು ಸಾಯಿಸಿ ಮೊಸಳೆಗೆ ತಿನ್ನಿಸಿದ ಕಿಲ್ಲರ್

ಕೊಲೆ ಮಾಡಿದ ಉದಯ್ ಮಾನಸಿಕ ಅಸ್ವಸ್ಥ ಎಂದು ಗ್ರಾಮಸ್ಥರು ಹೇಳಿದ್ದಾರೆ.  ಕೊಲೆ ಮಾಡಿದ ಉದಯ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.  ಮಂಜೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ನಾಲ್ವರನ್ನು ಕೊಲೆ ಮಾಡುವ ನಿರ್ಧಾರ ಯಾಕೆ ಮಾಡಿದ? ಘಟನೆ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ? ಕೊಲೆಗೆ ಪ್ರೇರಣೆ ನೀಡಿದ್ದು ಯಾರು? ಎಂಬೆಲ್ಲ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.