ಹಾಸನ: ಹೊಸ ವರ್ಷದ ಪಾರ್ಟಿ ವೇಳೆಯೇ ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಹಾಸನ(ಜ.02): ಕಾಲೇಜಿನ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಪ್ರೇಮಿಗಳು ಸಲ್ಪ ದಿನಗಳು ದೂರವಾಗಿದ್ದು, ಹೊಸ ವರ್ಷದ ಆಚರಣೆ ವೇಳೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಪ್ರಿಯಕರನ ಬಳಿ ಹೋಗಿ ಗಲಾಟೆ ತೆಗೆದು ಮೊದಲೆ ನಿರ್ಧರಿಸಿದಂತೆ ಚಾಕುವಿನಿಂದ ಹಿರಿದ ಘಟನೆ ಹೊಸ ವರ್ಷದ ಹಿಂದಿನ ದಿವಸ ತಡರಾತ್ರಿಯಲ್ಲಿ ನಡೆದಿದೆ.
ಹಾಸನ ತಾಲೂಕಿನ ಎ. ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (24) ಎಂಬುವರೇ ಪ್ರಿಯತಮೆಯಿಂದ ಚಾಕು ಇರಿತಕ್ಕೆ ಒಳಗಾದವನು. ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್‌ನಲ್ಲಿ ತಡರಾತ್ರಿ ಈ ದುರ್ಘಟನೆ ನಡೆದಿದೆ. ಸುಧಾ(ಹೆಸರು ಬದಲಾಯಿಸಲಾಗಿದೆ) ಎಂಬುವಳು ಮನುಕುಮಾರ್ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು. ಈ ವೇಳೆ ಇವರಿಬ್ಬರಲ್ಲಿ ಪ್ರೀತಿ ಪ್ರೇಮ ನಡೆಯುತಿತ್ತು. ಏಕೋ ಕೆಲ ದಿನಗಳಿಂದ ಇಬ್ಬರೂ ಬೇರೆಯಾಗಿದ್ದರು. ಯಾವ ಕರೆ ಕೂಡ ಮಾಡಿರಲಿಲ್ಲ. ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಬಂದಿದ್ದ ಮನುಕುಮಾರ್ ವಿಚಾರ ತಿಳಿದುಕೊಂಡು ಪದೇ ಪದೇ ಮನುಕುಮಾರ್ಗೆ ಸುಧಾ ಫೋನ್ ಮಾಡಿದರೂ ಏಕೋ ರಿಸಿವ್ ಮಾಡಲಿಲ್ಲ.
ಬೆಂಗ್ಳೂರಿನ ಅತುಲ್ ರೀತಿ ಪತ್ನಿಯ ಹಿಂಸೆಗೆ ವ್ಯಕ್ತಿ ಬಲಿ: ನದಿಗೆ ಹಾರಿ ಆತ್ಮಹತ್ಯೆ
ತಡರಾತ್ರಿ ೧೨.೩೦ಕ್ಕೆ ಹೋಟೆಲ್ ಬಳಿ ಬಂದ ಸುಧಾ ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಹೋದಳು. ಅಷ್ಟರಲ್ಲಿ ಮನುಕುಮಾರ್ ಗೇಟ್ ಬಳಿ ಬಂದನು. ಈ ವೇಳೆ ಸುಧಾ ಹಾಗೂ ಮನುಕುಮಾರ್ ನಡುವೆ ಜಗಳ ಶುರುವಾಯಿತು. ತಕ್ಷಣ ಜಗಳವನ್ನು ಮನುಕುಮಾರ್ ಸ್ನೇಹಿತರು ಬಿಡಿಸಲು ಮುಂದಾದರು. ನೋಡುತಿದ್ದಂತೆ ಈ ವೇಳೆ ಮನುಕುಮಾರ್‌ಗೆ ಸುಧಾ ಏಕಾಏಕಿ ಚಾಕುವಿನಿಂದ ಇರಿದಳು. ಕೂಡಲೇ ಮನುಕುಮಾರ್‌ನನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದರು. ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿದೆ.
ಮನುಕುಮಾರ್ ಹಾಸನದಲ್ಲಿ ಹಾರ್ಡ್ವೇರ್ ಮತ್ತು ಪ್ಲೇವುಡ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ವೇಳೆ ಚಾಕು ಇರಿತಕ್ಕೆ ಒಳಗಾದ ಸಂಬಂಧಿಕರು ಮಾಧ್ಯಮದ ಮುಂದೆ ಘಟನೆ ಬಗ್ಗೆ ತಿಳಿಸಿ ತಮ್ಮ ಅಳಲು ತೋಡಿಕೊಂಡರು.
ಹೊಸ ವರ್ಷದ ಪಾರ್ಟಿ ದುರಂತ: ಕೆರೆಗೆ ಬಿದ್ದು ಇಬ್ಬರು ಯುವಕರ ಸಾವು
ಹಾಸನ: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಫಾರ್ಮ್ ಹೌಸ್‌ಗೆ ತೆರಳಿ ರಾತ್ರಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಇಬ್ಬರು ಯುವಕರು ಕೆರೆಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿತ್ತು.
ಹಾಸನ: ಕಾರು-ಲಾರಿ ನಡುವೆ ಅಪಘಾತ, ಇಬ್ಬರು ಯುವಕರ ದುರ್ಮರಣ
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕಾನನಹಳ್ಳಿ ಗ್ರಾಮದಲ್ಲಿ ಹೊಸ ವರ್ಷಾಚರಣೆ ವೇಳೆ ಅವಘಡ ಸಂಭವಿಸಿದೆ. ಕುಡಿದ ಮತ್ತಿನಲ್ಲಿ ಕೆರೆಗೆ ಬಿದ್ದು ಮುಳುಗಿ ಇಬ್ಬರು ಯುವಕರು ಧಾರುಣ ಸಾವಿಗೀಡಾಗಿದ್ದಾರೆ. ಮೃತರನ್ನು ಅಜಿತ್ (37) ಹಾಗೂ ಅಶೋಕ್ (35) ಎಂದು ಗುರುತಿಸಲಾಗಿದೆ. ಮೃತ ಅಶೋಕ್ ಆಟೋ ಚಾಲಕನಾಗಿದ್ದರೆ, ಅಜಿತ್ ಕೃಷಿಕನಾಗಿದ್ದನು. ಇವರಿಬ್ಬರೂ ಸ್ನೇಹಿತರಾಗಿದ್ದು, ಕಾನನಹಳ್ಳಿ ಗ್ರಾಮದ ಕೆರೆಯ ಬಳಿ ನ್ಯೂ ಇಯರ್ ಪಾರ್ಟಿ ಮಾಡುತ್ತಿದ್ದರು. ಬೆಳಗ್ಗೆಯಾದರೂ ಯುವಕರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರು.
ಇಬ್ಬರು ಯುವಕರನ್ನು ಪೋಷಕರು ಹಾಗೂ ಗ್ರಾಮಸ್ಥರು ಇಡೀ ಊರಿನಲ್ಲಿ ಹುಡುಕಾಡಿದ್ದಾರೆ. ಎಲ್ಲೂ ಸಿಗದಿದ್ದಾಗ ಕಾನನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬುವವರಿಗೆ ಸೇರಿದ ಕೆರೆಯ ಬಳಿ ಚಪ್ಪಲಿ ಹಾಗೂ ಮದ್ಯದ ಬಾಟಲ್ ಬಿದ್ದಿರುವುದನ್ನು ಕೆಲವರು ನೋಡಿದ್ದಾರೆ. ಅನುಮಾನಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕೆರೆಯಲ್ಲಿ ಶವಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ. ಇಂದು ಸಂಜೆ ಇಬ್ಬರು ಯುವಕರ ಶವಗಳು ಕೆರೆಯಲ್ಲಿ ಪತ್ತೆಯಾಗಿದ್ದವು.