ಬೆಂಗಳೂರು(ಜ.28): ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ನಕಲಿ ನೋಟು ಪಾವತಿ ಮಾಡಿರುವ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಮ್ಯಾನೇಜರ್‌ ರಾಜೇಶ್‌ ಈ ಸಂಬಂಧ ದೂರು ನೀಡಿದ್ದಾರೆ. ಹೊನ್ನಾವರದ ಸಿಂಡಿಕೇಟ್‌ ಬ್ಯಾಂಕ್‌ ಹಾಗೂ ಮತ್ತಿತರ ಕಡೆಗಳಿಂದ ಆರ್‌ಬಿಐಗೆ ಹಣ ಪಾವತಿಯಾಗಿದೆ. 

ಮಾಸ್ಕ್‌ ಧರಿಸದೇ ಸಿಕ್ಕಿಬಿದ್ದ ನಕಲಿ ನೋಟು ದಂಧೆಕೋರರು..!

ಹಣ ಜಮೆ ಮಾಡಿರುವುದರಲ್ಲಿ ನೂರು ಮುಖ ಬೆಲೆಯ ಒಟ್ಟು 145 ಖೋಟಾ ನೋಟು ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ 14500 ಆಗಿರುತ್ತದೆ. ಖೋಟಾ ನೋಟುಗಳನ್ನು ತಯಾರಿಸಿ ಚಲಾವಣೆ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.