Vijayapura; ಗಿಡಮೂಲಿಕೆ ಹೆಸ್ರಲ್ಲಿ ಮಹಾಮೋಸದ ದಂಧೆ, ವಯಸ್ಸಾದ ಶ್ರೀಮಂತರೇ ಇವ್ರ ಟಾರ್ಗೆಟ್!
ಜನರಿಗೆ ಆಯುರ್ವೇದ, ಗಿಡಮೂಲಿಕೆಗಳ ಮೇಲೆ ನಂಬಿಕೆ ಹುಟ್ಟಿದೆ. ಆದ್ರೆ ಕೆಲ ದುರುಳರು ಇದನ್ನೆ ಬಂಡವಾಳ ಮಾಡಿಕೊಂಡು ಜನರನ್ನ ಯಾಮಾರಿಸುತ್ತಿದ್ದಾರೆ. ವಿಜಯಪುರ ನಗರದಲ್ಲೂ ಇಂಥದ್ದೆ ಒಂದು ಗ್ಯಾಂಗ್ ಕಾರ್ಯನಿರ್ವಹಿಸುತ್ತಿದ್ದು, ನಿವೃತ್ತ ಅಧಿಕಾರಿಗಳನ್ನ, ವಯಸ್ಸಾದ ಶ್ರೀಮಂತರನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ನ.15): ಸದ್ಯ ಜನರಿಗೆ ಆಯುರ್ವೇದ, ಗಿಡಮೂಲಿಕೆಗಳ ಮೇಲೆ ನಂಬಿಕೆ ಹುಟ್ಟಿದೆ. ಆಲೋಪತಿಕ್ ಮೆಡಿಸಿನ್ ಗಳಿಂದ ಸೈಡ್ ಎಫೆಕ್ಟ್ ಜಾಸ್ತಿ ಅನ್ನೋ ಕಾರಣಕ್ಕೆ ಜನರು ಆಯುರ್ವೇದದ ಮೊರೆ ಹೋಗ್ತಿದ್ದಾರೆ. ಆದ್ರೆ ಕೆಲ ದುರುಳರು ಇದನ್ನೆ ಬಂಡವಾಳ ಮಾಡಿಕೊಂಡು ಜನರನ್ನ ಯಾಮಾರಿಸುತ್ತಿದ್ದಾರೆ. ವಿಜಯಪುರ ನಗರದಲ್ಲೂ ಇಂಥದ್ದೆ ಒಂದು ಗ್ಯಾಂಗ್ ಕಾರ್ಯನಿರ್ವಹಿಸುತ್ತಿದ್ದು, ನಿವೃತ್ತ ಅಧಿಕಾರಿಗಳನ್ನ, ವಯಸ್ಸಾದ ಶ್ರೀಮಂತರನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದೆ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಹಿತಿ ಕೆದಕಿದಾಗ ಭಯಾನಕ ಸಂಗತಿಗಳು ಹೊರ ಬಿದ್ದಿವೆ. ಮಂಡಿ ನೋವಿನಿಂದ ಬಳಲುತ್ತಿದ್ದ ನಗರದ ಭೀಮು ಚೌಹಾನ್ ಎನ್ನುವ ನಿವೃತ್ತ ಇಂಜಿನಿಯರ್ ಗು ಈ ಗ್ಯಾಂಗ್ ಮೋಸ ಮಾಡಿ ಹಣ ಸುಲಿಗೆ ಮಾಡಿದೆ. ಆಯುರ್ವೇದ, ನಾಟಿ ಔಷಧಿ, ಗಿಡಮೂಲಿಕೆ ಹೆಸ್ರಲ್ಲಿ ಮೋಸ ಮಾಡುವ ಖತರ್ನಾಕ್ ಗ್ಯಾಂಗ್ ವೊಂದು ಗುಮ್ಮಟನಗರಿ ವಿಜಯಪುರದಲ್ಲಿ ಹುಟ್ಟಿಕೊಂಡಂತೆ ಕಾಣ್ತಿದೆ. ಮೆಡಿಕಲ್ ಸ್ಟೋರ್ ಗಳಿಗೆ ಕುಂಟುತ್ತ ಸಾಗುವವರನ್ನ ಟಾರ್ಗೆಟ್ ಮಾಡ್ತಿರೋ ಈ ಗ್ಯಾಂಗ್ ಅವರನ್ನ ಆಯುರ್ವೇದದ ಹೆಸ್ರಲ್ಲಿ ಯಾಮಾರಿಸುತ್ತಿದೆ. ಕಾಲು ನೋವು, ಮಂಡಿ ನೋವು ಅಂತಾ ಕುಂಟುತ್ತ ಮೆಡಿಕಲ್ ಸ್ಟೋರ್ ಗಳಿಗೆ ಬರುವವರನ್ನ ಈ ಖತರ್ನಾಕ್ ಗ್ಯಾಂಗ್ ಕಾಯ್ತಿರುತ್ತೆ. ಅಂತ ವ್ಯಕ್ತಿಗಳು ಬಂದಲ್ಲಿ ಅವರನ್ನ ಸರ್ಪ್ರೈಜ್ ಅನ್ನೋ ರೀತಿಯಲ್ಲಿ ದಾರಿಯಲ್ಲಿ ಮಾತನಾಡಿಸಿ ಯಾಮಾರಿಸಿ ಬಿಡುತ್ತೆ.
"ನಮ್ಮ ಅಪ್ಪನಿಗೂ ಇದೆ ಸಮಸ್ಯೆ ಇತ್ತು, ನಾನು ಪರಿಹಾರ ಹೇಳ್ತೀನಿ"!
ಮೆಡಿಕಲ್ ಸ್ಟೋರ್ ಗಳಿಗೆ ಬಂದು ವಾಪಾಸ್ ಆಗುವ ವಯಸ್ಸಾದವರನ್ನ ದಾರಿಯಲ್ಲಿ ತಡೆಯುವ ಈ ತಂಡದ ಸದಸ್ಯ ಪರಿಚಯ ಇರುವಂತೆ ಮಾತನಾಡಿಸ್ತಾನೆ. ಬಳಿಕ ಕಾಲು-ಮಂಡಿ ನೋವು, ಇನ್ನು ಇತರೆ ಯಾವುದೆ ಸಮಸ್ಯೆ ಇದ್ದರು ಅನ್ನ ಕೇಳಿಸಿಕೊಳ್ತಾರೆ. ಬಳಿಕ ಇದೆ ರೀತಿ ಮನೆಯಲ್ಲಿ ನಮ್ಮ ತಂದೆಗು ಆಗ್ತಿತ್ತು. ಒಳ್ಳೆಯ ಆಯುರ್ವೇದ ಟ್ರೀಟ್ಮೇಂಟ್ ಕೊಡಿಸಿದೆ ಈಗ ಪುಲ್ ಗುಣಮುಖರಾಗಿ ಓಡಾಡ್ತಿದ್ದಾರೆ ಅಂತಾ ಸುಳ್ಳು ಹೇಳ್ತಾನೆ. ಖತರ್ನಾಕ್ ಗ್ಯಾಂಗ್ ನ ಈ ಸದಸ್ಯನ ಮಾತು ಕೇಳಿದ್ರೆ ಮುಗಿದೆ ಹೋಯ್ತು, ನಮ್ಮ ಅಪ್ಪನಿಂದಲೇ ನಿಮಗೆ ಕಾಲ್ ಮಾಡಸ್ತೀನಿ ಎಂದು ಅದೆ ಗ್ಯಾಂಗಿನ ಮತ್ತೊಬ್ಬ ಸದಸ್ಯನಿಂದ ಕರೆ ಮಾಡಿಸ್ತಾರೆ. ಬಳಿಕ ನಂಬಿಸಿ ನಕಲಿ ಆಯುರ್ವೇದ ಅಂಗಡಿಯೊಂದಕ್ಕೆ ಕರೆದೊಯ್ತಾರೆ. ಅಲ್ಲಿ ನೋಡಿ ಹಣ ವಸೂಲಿಯಾಗೋದು..
ನಕಲಿ ಆಯುರ್ವೇದ ಅಂಗಡಿಗೆ ಕರೆದೊಯ್ತು ಸುಲಿಗೆ!
ಇಷ್ಟು ಪರಿಚಯವಾದ್ರೆ ಸಾಕು, ಮರುದಿನವೇ ಆಯುರ್ವೇದ ಔಷಧಿ ಕೊಡಿಸೋದಾಗಿ ಹೇಳಿ ಬರೋವಾಗ ಮನೆಯಿಂದ ಅರ್ಧ ಲೀಟರ್ ಕೊಬ್ಬರಿ ಎಣ್ಣೆ ತಗೊಂಡು ಬನ್ನಿ ಅಂತಾ ಹೇಳ್ತಾರೆ. ಅಪ್ಪ ಹಾಗೂ ಮಗನ ವೇಷದಲ್ಲಿ ಬರುವ ಗ್ಯಾಂಗ್ ಸದಸ್ಯರು ತಮ್ಮದೆ ಗ್ಯಾಂಗ್ ಸದಸ್ಯನ ನಕಲಿ ಆಯುರ್ವೇದ ಅಂಗಡಿಗೆ ಕರೆದೊಯ್ದು ಔಷಧಿ ಕೊಡಿಸಿದಂತೆ ನಾಟಕವಾಡ್ತಾರೆ. ಅಲ್ಲಿ ಔಷಧಿ ಬಿಲ್ ಅನ್ನೆ 60 ಸಾವಿರ ರೂಪಾಯಿ ಹೇಳ್ತಾರೆ. ಆಗಲೇ ಜೊತೆಗೆ ಹೋದ ವಯಸ್ಸಾದವರು ಗಾಭರಿಯಾಗೋದು. ಇಷ್ಟು ಔಷಧಿಗೆ 60 ಸಾವಿರಾನಾ? ನಮ್ಮ ಬಳಿ ಹಣವಿಲ್ಲ ಅಂದಾಗ ಅದೇ ಗ್ಯಾಂಗ್ ನ ಸದಸ್ಯರು ಡಿಸ್ಕೌಂಟ್ ಮಾಡ್ತಾರೆ. ಬೇಕಿದ್ರೆ ಕಂತಿನ ಮೇಲೆ ತೆಗೆದುಕೊಳ್ಳಿ ತಿಂಗಳಿಗೆ 10 ಸಾವಿರದಂತೆ ಕಟ್ಟಿ ಅಂತಾ ಯಾಮಾರಿಸಿ 10 ಸಾವಿರ ವಸೂಲಿ ಮಾಡಿಯೇ ಬಿಡ್ತಾರೆ.
ಮನೆಗೆ ಬಂದ ಮೇಲೆ ಅಸಲಿಯತ್ತು ಬಯಲು!
10 ಸಾವಿರ ಕೊಟ್ಟು ಮನೆಗೆ ಬಂದ ಮೇಲೆ ಗೊತ್ತಾಗೋದು ಮೋಸ ಹೋಗಿದ್ದೇವೆ ಅನ್ನೋದು. ಯಾಕಂದ್ರೆ ಕೊಬ್ಬರಿ ಎಣ್ಣೆಯಲ್ಲಿ ಗಿಡಮೂಲಿಕೆ ಮಿಕ್ಸ್ ಮಾಡಿಕೊಡುವುದಾಗಿ ಹೇಳಿ, ಬರಿ ಕರಬೇವು ಪುಡಿ ಹಾಗೂ ಇತರೆ ಕೆಲ ವಸ್ತುಗಳನ್ನ ಹಾಕಿ ಕೊಟ್ಟು ಕಳಿಸ್ತಾರಂತೆ.
ವಿಜಯಪುರದ ನಿವೃತ್ತ ಇಂಜಿನಿಯರ್ ಗೆ ಮೋಸ!
ಇನ್ನು ಇದೆ ರೀತಿ ಮಂಡಿ ಹಾಗೂ ಕೀಲು ನೋವಿನಿಂದ ಬಳಲುತ್ತಿದ್ದ ವಿಜಯಪುರ ನಗರದ ಗೋಳಗುಮ್ಮಟ ಬ್ಯಾಕ್ ರೋಡ್ ನಿವಾಸಿ ಭೀಮು ಚೌಹಾನ್ ಎಂಬುವರಿಗೆ ಇದೆ ಗ್ಯಾಂಗ್ ಮೋಸ ಮಾಡಿದೆ. ಭೀಮು ಚೌಹಾನ್ ಕುಂಟುತ್ತ ಮೆಡಿಕಲ್ ಶಾಪ್ ಗೆ ಹೋಗಿದ್ದಾಗ ಸಂತೋಷ ಗಾಯಕವಾರ್ (ದೊಡಮನಿ) ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ ಈ ರೀತಿ ತಮ್ಮ ಅಪ್ಪನು ಮಂಡಿ ನೋವಿನಿಂದ ಕುಂಟುತ್ತಿದ್ದ. ಆಯುರ್ವೇದ ಔಷಧಿ ನೀಡಿದ ಮೇಲೆ ಆರಾಮಾಗಿದ್ದಾರೆ ಅಂತಾ ಯಾಮಾರಿಸಿದ್ದಾರೆ. ಮರುದಿನ ನಗರದ ಮಿನಾಕ್ಷಿ ಚೌಕ್ ಬಳಿ ಇದ್ದ ಪರಂಪರಾ ಆಯುರ್ವೇದ ಅಂಗಡಿಗೆ ಕರೆದೊಯ್ದು 10 ಸಾವಿರ ಸುಲಿಗೆ ಮಾಡಿ ಮೋಸ ಮಾಡಿದ್ದಾರೆ.
ಕಾಲು ನೋವಿರುವ ವೃದ್ಧರೇ ಇವರ ಟಾರ್ಗೆಟ್: ನಕಲಿ ಆಯುರ್ವೇದ ಶಾಪ್‌ನಲ್ಲಿ ವಂಚನೆ
ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಅಂಗಡಿಯೇ ಕ್ಲೋಸ್!
ನಿವೃತ್ತ ಇಂಜಿನಿಯರ್ ಭೀಮು ಚೌಹಾನ್ ಮೂಲಕ ಪ್ರಕರಣ ಹೊರ ಬೀಳ್ತಿದ್ದಂತೆ ಪರಂಪರಾ ಅನ್ನೋ ಆಯುರ್ವೇದ ಮೆಡಿಕಲ್ ಶಾಪ್ ಬಂದ್ ಆಗಿದೆ. ಅಲ್ಲಿ ಯಾರಿಗು ಮಾಹಿತಿ ನೀಡದೆ ಅಂಗಡಿಯ ಬ್ಯಾನರ್ ಕಿತ್ತುಕೊಂಡ ಖದೀಮರು ಪರಾರಿಯಾಗಿದ್ದಾರೆ.
ಈ ಎಲೆಯ ರಸ ಶ್ವಾಸಕೋಶ ಸಮಸ್ಯೆ ಸೇರಿ ಹಲವಾರು ರೋಗಗಳಿಗೆ ರಾಮಬಾಣ
ದೂರು ಕೊಡಲು ಮುಂದಾದ ನಿವೃತ್ತ ಇಂಜಿನೀಯರ್!
ಮಂಡಿ ನೋವಿನಿಂದ ಬಳಲುತ್ತಿರುವ ಭೀಮು ಚೌಹಾನ್ ಗೆ ಮೋಸ ಆಗಿದೆ. ಹೀಗಾಗಿ ತನಗೆ ಮೋಸ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಈ ರೀತಿಯ ಮೊಸದ ದಂಧೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಅಂತಾ ಆಗ್ರಹಿಸಿದ್ದಾರೆ.