ಮಾಜಿ ಸಚಿವ ಜಯಚಂದ್ರ ಹೆಸರಿನಲ್ಲಿ ನಕಲಿ ಖಾತೆ,  ಹಣ ಕೀಳುವ ಜಾಲ!

* ಮಾಜಿ ಸಚಿವ ಟಿ.ಬಿ ಜಯಚಂದ್ರ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆ ಸೃಷ್ಟಿ.
* ಫೇಸ್ ಬುಕ್ ಖಾತೆ ತೆರೆದು ಹಣದ ಬೇಡಿಕೆ ಇಟ್ಟ ವಂಚಕರು.
* ಜಯಚಂದ್ರ ಆಪ್ತರಿಗೆ ಹಾಗೂ ಬೆಂಬಲಿಗರಿಗೆ ಫ್ರೆಂಡ್ ಶಿಫ್ಟ್ ರಿಕ್ವೆಸ್ಟ್ ಕಳುಹಿಸಿದ ವಂಚಕರು. 
* ರಿಕ್ವೆಸ್ಟ್ ಸ್ವೀಕರಿಸಿದವರ ಬಳಿ ಹಣಕ್ಕೆ ಬೇಡಿಕೆ ಇಟ್ಟ ವಂಚಕರು.‌

fake fb account of Former minister TB Jayachandra created and sought money mah

ತುಮಕೂರು(ಜೂ.  18)  ಕೊರೋನಾದೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳ ಹಾವಳಿ ಜೋರಾಗಿದೆ. ಗಣ್ಯವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದದು ಹಣಕ್ಕೆ ಬೇಡಿಕೆ ಇಡುವ ಪ್ರಕರಣಗಳು ಒಂದಾದ ಮೇಲೊಂದು ವರದಿಯಾಗುತ್ತಲೇ ಇವೆ.

ಕನ್ನಡಪ್ರಭ, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ ಹೆಸರಿನಲ್ಲಿಯೂ ನಕಲಿ ಖಾತೆ

ಇದೀಗ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಟಿಬಿ ಜಯಚಂದ್ರ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ.  ಮಾಜಿ ಸಚಿವ ಟಿ.ಬಿ ಜಯಚಂದ್ರ ಹೆಸರಿನಲ್ಲಿ ಫೇಸ್ ಬುಕ್  ನಕಲಿ ಖಾತೆ ಸೃಷ್ಟಿ ಮಾಡಿರುವ ವಂಚಕರು ಜಯಚಂದ್ರ ಆಪ್ತರಿಗೆ ಹಾಗೂ ಬೆಂಬಲಿಗರಿಗೆ ಫ್ರೆಂಡ್ ಶಿಫ್ಟ್ ರಿಕ್ವೆಸ್ಟ್ ಕಳುಹಿಸಿದ್ದಾರೆ.  ರಿಕ್ವೆಸ್ಟ್ ಸ್ವೀಕರಿಸಿದವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ..

ಜಯಚಂದ್ರ ಅವರೇ ತಮ್ಮ ಅಧಿಕೃತ ಖಾತೆಯಲ್ಲಿ ನಕಲಿ ಖಾತೆಯಿಂದ ಎಚ್ಚರವಾಗಿರಿ ಎಂದು ಬರೆದುಕೊಂಡಿದ್ದಾರೆ. ನಕಲಿ ಖಾತೆ ತೆರೆದಿದ್ದಾರೆ ಯಾರು ಹಣ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

 

Latest Videos
Follow Us:
Download App:
  • android
  • ios