ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ಬೆದರಿಕೆ, ಗೂಗಲ್ ಪೇ‌ ಮೂಲಕ ಹಣಕ್ಕೆ ಬೇಡಿಕೆ

* ರಾಯಚೂರಿನಲ್ಲಿ ನಕಲಿ ಎಸಿಬಿ ಹಾವಳಿ 
* ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ಬೆದರಿಕೆ
* ಎಸಿಬಿ ಹೆಸರಲ್ಲಿ ಬೆದರಿಕೆ ‌ಹಾಕಿ ಹಣ ಗೂಗಲ್ ಪೇ‌ ಮಾಡಲು ಸೂಚನೆ

fake ACB officials calls To Govt officer And Demand for Money at Raichuru rbj

ವರದಿ : ಜಗನ್ನಾಥ ಪೂಜಾರ್, ಏಷ್ಯಾ ನೆಟ್ ಸುವರ್ಣನ್ಯೂಸ್

ರಾಯಚೂರು, (ಏ.30):
ರಾಜ್ಯದಲ್ಲಿ ಮೇಲಿಂದ ಮೇಲೆ ಎಸಿಬಿ ದಾಳಿ ನಡೆದು ಭ್ರಷ್ಟರ ಬೇಟೆ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ನಕಲಿ ಎಸಿಬಿ ಹಾವಳಿ ಶುರುವಾಗಿದೆ. ರಾಯಚೂರು ಸೇರಿ ಹಲವೆಡೆ ಎಸಿಬಿ ಅಧಿಕಾರಿಗಳ ಹೆಸರಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಹಣ ನೀಡಿದ್ರೆ ಕೇಸ್ ಕ್ಲೋಸ್ ಮಾಡುತ್ತೇವೆ. ಹಣ ನೀಡದಿದ್ದರೆ ನಿಮ್ಮ ಮೇಲೆ ದಾಳಿ ಮಾಡಬೇಕಾಗುತ್ತೆ ಅಂತ ಭಯವನ್ನು ಹುಟ್ಟಿಸುವ ಗ್ಯಾಂಗ್ ಒಂದು ಕಾರ್ಯ ನಿರ್ವಹಿಸಲು ಶುರು ಮಾಡಿದೆ.  ಭಯಗೊಂಡ ಕೆಲ ಅಧಿಕಾರಿಗಳು ಹಣಕೊಟ್ಟರೆ, ಅನುಮಾನ ಬಂದವರು ಪೊಲೀಸ್ ಕೇಸ್ ದಾಖಲು ಮಾಡಲು ಮುಂದಾಗಿದ್ದಾರೆ.

ಎಸಿಬಿ ಹೆಸರು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಗೆ  ಬೆದರಿಕೆ!
ಭ್ರಷ್ಟ ಅಧಿಕಾರಿಗಳ ನಿದ್ದೆಕೆಡಿಸುವ ಎಸಿಬಿಯನ್ನೇ ಬಂಡವಾಳ ಮಾಡಿಕೊಂಡ ನಕಲಿ ಎಸಿಬಿ ಗ್ಯಾಂಗ್ ರಾಯಚೂರು ಸೇರಿ ರಾಜ್ಯದ ಯಾದಗಿರಿ, ಬೀದರ್ ಹಾಗೂ ಇತರೆಡೆ ದಾಳಿಯ ಬೆದರಿಕೆ ಹಾಕಿ ಹಣ ವಸೂಲಿ‌ ದಂಧೆ ನಡೆಸಿದೆ.ನೇರವಾಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ಮಾಡುವ ಈ ನಕಲಿ ಎಸಿಬಿ ಗ್ಯಾಂಗ್, ನಿಮ್ಮ ಇಲಾಖೆಯ ಅಧೀನ ಕಚೇರಿಯ ಇಂತಹ ಅಧಿಕಾರಿ ವಿರುದ್ದ ಎಸಿಬಿಗೆ ದೂರು ಬಂದಿದೆ.ಅವರನ್ನು ವಿಚಾರಣೆ ಮಾಡಬೇಕು ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಹೇಳಿ ಅಂತ ಹೇಳುತ್ತೆ. ಬಳಿಕ ಟಾರ್ಗೆಟ್ ಮಾಡಿರುವವರಿಗೆ ಕರೆ ಮಾಡಿ ಬಿ ರಿಪೋರ್ಟ್ ಹಾಕಲು ಹಣದ ಬೇಡಿಕೆ ಇಡುತ್ತೆ. 

ACB Raids: ಲಂಚಕ್ಕೆ ಬೇಡಿಕೆ: ಭೋವಿ ನಿಗಮದ ಅಧಿಕಾರಿಗಳಿಗೆ ಎಸಿಬಿ ಬಿಸಿ

ರಾಯಚೂರು ಎಸಿಬಿ ಡಿವೈಎಸ್ ಪಿ ವಿಜಯಕುಮಾರ್ ಹೆಸರಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ನೂರ್ ಜಹಾರ್ ಖಾನಂಗೆ ಕರೆ ಮಾಡಿ ನಿಮ್ಮ ಅಧೀನದ ಜಿ.ಪಂ. ಯೋಜನಾಧಿಕಾರಿ ರೋಹಿಣಿ ಹಾಗೂ ರಾಯಚೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ವಿರುದ್ಧ ದೂರು ಬಂದಿದೆ ಅಂತ ತಿಳಿಸಿದೆ.  ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ನಾಯಕ್‌ಗೆ ಕರೆ ಮಾಡಿ ರಾಯಚೂರು ವಲಯದ ಅಬಕಾರಿ ನಿರೀಕ್ಷಕ ಹಣಮಂತ ಗುತ್ತೆದಾರ ವಿರುದ್ಧ ಎಸಿಬಿಗೆ ದೂರು ಬಂದಿದೆ ಅವರನ್ನ ವಿಚಾರಣೆ ಮಾಡಬೇಕು. ನನ್ನ ನಂಬರ್ ಗೆ ಕರೆ ಮಾಡಲು ಹೇಳಿ ಅಂತ ತಿಳಿಸಿದ್ದಾರೆ.ಬಳಿಕ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ.

ನಿಮಗೆ ಸಹಾಯ ಮಾಡಲು ಕರೆ ಮಾಡಿದ್ದೇನೆ. ಹಣ ಫೋನ್ ಪೇ ಇಲ್ಲಾ ಗೂಗಲ್ ಪೇ ಮಾಡದಿದ್ದರೆ ನಿಮ್ಮಿಷ್ಟ. ನಿಮ್ಮ ಮನೆ- ಕಚೇರಿ ಮೇಲೆ ದಾಳಿ ಮಾಡಲು ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ. ದಸ್ತಗಿರಿ ಮಾಡುತ್ತೇವೆ, ಇದು ಬೇಕಾ ನಿನಗೆ. ಇಬ್ಬರು ಎಸಿಬಿ ಅಧಿಕಾರಿಗಳು ಶ್ರೀಲಂಕಾ ಮಾನಸ ಸರೋವರ ಟ್ರಿಪ್ ಹೋಗ್ತಾಯಿದಾರೆ ಹಾಗಾಗಿ ತಲಾ 75 ಸಾವಿರ ಒಟ್ಟು 1 ಲಕ್ಷ 50 ಸಾವಿರ ಹಣ ಹಾಕಿ.ಕೇಂದ್ರ ಕಚೇರಿ ಸ್ಟೆನೋ ನವೀನ್ ಕುಮಾರ್ , ಉಮೇಶ್ ಕುಮಾರ್ ನಂ. ಗೆ ಫೋನ್ ಪೇ, ಗೂಗಲ್ ಪೇ ಮಾಡಿ. ಮಾಡದಿದ್ದರೆ ಮುಂದಿನ ಪರಿಣಾಮ ಎದುರಿಸುತ್ತೀರಿ ಅಂತ ಬೆದರಿಕೆ ಹಾಕಿದ್ದಾರೆ.

ನಕಲಿ ಎಸಿಬಿ ಬೆದರಿಕೆ ಕರೆಗೆ ಹೆದರಿ ಕೆಲ ಅಧಿಕಾರಿಗಳು ಹಣವನ್ನ ನೀಡಿದ್ದಾರೆ ಅನ್ನೋ ಮಾಹಿತಿಯಿದೆ. ಆದ್ರೆ ಅನುಮಾನ ಬಂದಿರುವ ರಾಯಚೂರಿನ ಅಧಿಕಾರಿಗಳು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಸೈಬರ್ ಕ್ರೈಮ್ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Latest Videos
Follow Us:
Download App:
  • android
  • ios