ನಿದ್ದೆ ಬರುತ್ತಿದ್ದ ಕಾರಣಕ್ಕೆ ಕಾರ್‌ನ್ನು ರಸ್ತೆ ಬದಿಗೆ ಹಾಕಿ ವಿಶ್ರಾಂತಿ ಪಡೆಯುತ್ತಿದ್ದ ತೆಲಂಗಾಣ ಮೂಲದ ಇಬ್ಬರು ವ್ಯಕ್ತಿಗಳಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಅವರಿಂದ ಹಣ, ಮೊಬೈಲ್‌ ಹಾಗೂ 2 ಚಿನ್ನದ ಸರಗಳನ್ನು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ (ಡಿ.13) : ನಿದ್ದೆ ಬರುತ್ತಿದ್ದ ಕಾರಣಕ್ಕೆ ಕಾರ್‌ನ್ನು ರಸ್ತೆ ಬದಿಗೆ ಹಾಕಿ ವಿಶ್ರಾಂತಿ ಪಡೆಯುತ್ತಿದ್ದ ತೆಲಂಗಾಣ ಮೂಲದ ಇಬ್ಬರು ವ್ಯಕ್ತಿಗಳಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಅವರಿಂದ ಹಣ, ಮೊಬೈಲ್‌ ಹಾಗೂ 2 ಚಿನ್ನದ ಸರಗಳನ್ನು ಕಸಿದುಕೊಂಡು ಪರಾರಿಯಾದ ಘಟನೆ ನಡೆದಿದೆ.

ನಗರದ ಹೊರ ವಲಯದ ಬೆಂಗಳೂರು- ಹೈದ್ರಾಬಾದ್‌ ನಡುವಿನ ರಾಷ್ಟ್ರೀಯ ಹೆದ್ದಾರಿ 44 ರ ಚದಲುಪುರ ಸಮೀಪದ ಕೀರ್ತಿ ಡಾಬಾ ಬಳಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಈ ಕುರಿತು ತೆಲಂಗಾಣ ರಾಜ್ಯದ ಹೈದ್ರಾಬಾದ್‌ ನಿವಾಸಿÜ ಶಂಕರದತ್ತ ಬಿನ್‌ ನರಸಿಂಹಶರ್ಮ ಎಂಬುವರು ನಂದಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ತಾನು ಹಾಗೂ ತನ್ನ ಅಣ್ಣ ಮುರಳಿ ಶರ್ಮ ಕಾರ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿರುವಾಗ ನಿದ್ದೆ ಬಂದಿದ್ದರಿಂದ ಚಿಕ್ಕಬಳ್ಳಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಕೀರ್ತಿ ಡಾಬಾ ಪಕ್ಕದಲ್ಲಿ ವಾಹನವನ್ನು ನಿಲ್ಲಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದೆವು. ಬೆಳಗಿನ ಜಾವ ಸುಮಾರು 4.30 ಗಂಟೆ ಸಮಯದಲ್ಲಿ ಯಾರೋ ಮೂವರು ನಮ್ಮ ಕಾರ್‌ನ ಕಿಟಕಿಯನ್ನು ತಟ್ಟಿನಮ್ಮನ್ನು ಎಬ್ಬಿಸಿ ಚಾಕು ತೋರಿಸಿ ಬೆದರಿಸಿದರು. ಬಳಕ ನನ್ನ ಕತ್ತಿನಲ್ಲಿದ್ದ ಚೈನ್‌, ನನ್ನ ಅಣ್ಣನ ಬಳಿಯಿದ್ದ 6900 ನಗದು ಹಾಗೂ ಪಾಸಿಲ್‌ ಕಂಪನಿಯ ಕೈ ವಾಚ್‌ ಮತ್ತು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ವೇಳೆ ಸ್ವಲ್ಪ ದೂರಿನಲ್ಲಿದ್ದ ಪೊಲೀಸ್‌ ಗಸ್ತು ವಾಹನಕ್ಕೆ ಕಾರು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾರಣೆ ನಡೆಸಿದರೂ ಪತ್ತೆ ಆಗಲಿಲ್ಲ.

ಎಟಿಎಂ ಕಾರ್ಡ್ ಬದಲಿಸಿ ಹಣ ಕದಿಯುತ್ತಿದ್ದ ಕಳ್ಳ ಬಂಧನ