ಎಟಿಎಂ ಕಾರ್ಡ್ ಬದಲಿಸಿ ಹಣ ಕದಿಯುತ್ತಿದ್ದ ಕಳ್ಳ ಬಂಧನ
ಅಮಾಯಕರನ್ನು ಗುರಿಯಾಗಿಸಿಕೊಂಡು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಗ್ರಾಹಕರ ಎಟಿಎಂ ಕಾರ್ಡ್‌ಗಳನ್ನು ಬದಲಿಸಿ ಬಳಿಕ ಎಟಿಎಂ ಕೇಂದ್ರಗಳಲ್ಲಿ ಹಣ ದೋಚಿ ಪರಾರಿ ಆಗುತ್ತಿದ್ದ ಕುಖ್ಯಾತ ಕಳ್ಳನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ (ಡಿ.13), ಅಮಾಯಕರನ್ನು ಗುರಿಯಾಗಿಸಿಕೊಂಡು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಗ್ರಾಹಕರ ಎಟಿಎಂ ಕಾರ್ಡ್‌ಗಳನ್ನು ಬದಲಿಸಿ ಬಳಿಕ ಎಟಿಎಂ ಕೇಂದ್ರಗಳಲ್ಲಿ ಹಣ ದೋಚಿ ಪರಾರಿ ಆಗುತ್ತಿದ್ದ ಕುಖ್ಯಾತ ಕಳ್ಳನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮೈಸೂರು ಮೂಲದ ಹಾಲನಹಳ್ಳಿಯ ಚಾಮುಂಡೇಶ್ವರಿ ಬ್ಲಾಕ್‌ನ ನಿವಾಸಿ ಬಿ.ಕೆ.ಕಿರಣ್ ಕುಮಾರ್ ಬಿನ್ ಕಾಳೇಗೌಡ (32) ಎಂದು ಗುರುತಿಸಲಾಗಿದೆ. ಬಂಧಿನಿಂದ 2.46 ಲಕ್ಷ ರು, ನಗದು ಹಾಗೂ ವಿವಿಧ ಬ್ಯಾಂಕ್‌ಗಳ 14 ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಶೋಕಿಗೆ ಜೀವನಕ್ಕಾಗಿ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡ್ತಿದ್ದ ಸರ್ಕಾರಿ ಶಾಲೆ ಶಿಕ್ಷಕ!
ರಾಜ್ಯದ ವಿವಿಧಡೆ 8 ಪ್ರಕರಣ ದಾಖಲು:
ಆರೋಪಿ ಬಿ.ಕೆ.ಕಿರಣ್ ಕುಮಾರ್ ವಿರುದ್ದ ಕುಮಟಾ, ಶಿರಾಳಕೊಪ್ಪ, ಉಡುಪಿ, ಕೊಡುಗು, ಹಡಿಯಾಳ, ಮುಂಗೋಡು ಮತ್ತಿತರ ಕಡೆಗಳಲ್ಲಿ ಒಟ್ಟು 8 ಪ್ರಕರಣಗಳು ವರದಿಯಾಗಿ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದೆ. ಅಲ್ಲದೇ ಚಿಕ್ಕಬಳ್ಳಾಪುರ ನಗರದಲ್ಲಿ 2, ದಾವಣಗೆರೆಯ ಬಸವನಗರ ಠಾಣೆ, ರಾಮನಗರ ಐಜೂರು ಠಾಣೆ, ಹೊಸದುರ್ಗ ಪೊಲೀಸ್ ಠಾಣೆ, ಯಾದಗಿರಿ ಪೊಲೀಸ್ ಠಾಣೆ, ಕೊಳ್ಳೆಗಾಲ ಪೊಲೀಸ್ ಠಾಣೆ, ಜಗಲೂರು , ಗದಗ ಹಾಗೂ ಜಮಖಂಡಿ ಠಾಣೆಗಳ ಸರಹದ್ದಿನಲ್ಲಿ ಒಟ್ಟು 11 ಎಟಿಎಂ ಕೇಂದ್ರಗಳ ಬಳಿ ಸಾರ್ವಜನಿಕರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಜೊತೆಗೆ ಹಣ ಡ್ರಾ ಮಾಡುವ ವೇಳೆ ಅವರ ಪಿನ್ ನಂಬರ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಬಳಿಕ ಅವರ ಎಟಿಎಂ ಕಾರ್ಡ್‌ಗಳನ್ನು ಸಿನೀಮಿಯ ರೀತಿಯಲ್ಲಿ ಬದಲಾಯಿಸಿ ಗ್ರಾಹಕರ ಹಣ ದೋಚಿತ್ತಿದ್ದನೆಂದು ಎಸ್ಪಿ ನಾಗೇಶ್ ತಿಳಿಸಿದರು.