ಬಿಎಂಟಿಸಿ ಬಸ್ ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್!
ಬಿಎಂಟಿಸಿ ಬಸ್ ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ರೋಚಕ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರು (ಮಾ.23): ಬಿಎಂಟಿಸಿ ಬಸ್ ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ರೋಚಕ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರ ತನಿಖೆ ವೇಳೆ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಯಾಗಿದೆ. ಬ್ಯಾಡರಹಳ್ಳಿ ಡಿ ಗ್ರೂಪ್ ಬಸ್ ನಿಲ್ದಾಣದಲ್ಲಿ ಸುಮ್ಮನಹಳ್ಳಿ ಡಿಪೋ 31ಕ್ಕೆ ಸೇರಿದ್ದ ಬಸ್ ಮಾರ್ಚ್ 9 ರಂದು ಈ ಘಟನೆ ನಡೆದಿತ್ತು. ಇದೀಗ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಆತ್ಮಹತ್ಯೆಗೆ ಯತ್ನಿಸಿದ್ರಾ ಎಂದು ಶಂಕಿಸಲಾಗಿದೆ.
ಕಾರವಾರ: ಅರಣ್ಯದಲ್ಲಿ ಅಡಗಿಟಿಸಿದ್ದ ಅಕ್ರಮ ಗೋವಾ ಮದ್ಯ ಪತ್ತೆ, ಮೂವರ ಬಂಧನ
ಪೊಲೀಸರ ಗುಮಾನಿಗೆ ಕಾರಣಗಳೇನು ಗೊತ್ತಾ?
- ಬಸ್ ಹಾಲ್ಟ್ ಆದ ನಂತರ ಹೊರ ಹೋಗಿ ಬಂದಿರುವ ಮುತ್ತಯ್ಯ
- ಡ್ರೈವರ್ ಪ್ರಕಾಶ್ ನನ್ನ ಮಲಗುವಂತೆ ಹೇಳಿ ಕಳುಹಿಸಿದ್ದ ಕಂಡಕ್ಟರ್
- ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್ ನಿಂದ ಹೊರ ಹೋಗಿ ಬಂದಿರುವ ಮಾಹಿತಿ ಪತ್ತೆ
- ರಾತ್ರಿಯಲ್ಲಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆ
- ಸುಮಾರು 700 ರೂಪಾಯಿ ಹಣ ವರ್ಗಾವಣೆ ಬೆಳಕಿಗೆ
- ಹಣ ವರ್ಗಾವಣೆಯಾಗಿರುವುದು ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್ ಖಾತೆಗೆ
- ಈ ಬಗ್ಗೆ ಮೊಬೈಲ್ ಹಾಗೂ ಯುಪಿಐ ಐಡಿ ಪರಿಶೀಲನೆ ನಡೆಸಿದ ಬ್ಯಾಡರಹಳ್ಳಿ ಪೊಲೀಸರು
- ಪೆಟ್ರೋಲ್ ಬಂಕ್ ಗೆ ಹಣ ಪಾವತಿಸಿ ಪೆಟ್ರೋಲ್, ಡಿಸೇಲ್ ಖರೀದಿ
- ಪೆಟ್ರೋಲ್, ಡಿಸೇಲ್ ಖರೀದಿ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದ ಮಾಹಿತಿ
- ಎರಡು ಲೀಟರ್ ಪೆಟ್ರೋಲ್, ಐದು ಲೀಟರ್ ಡಿಸೇಲ್ ತಂದು ಬೆಂಕಿ ಹಚ್ಚಿಕೊಂಡಿರುವ ಶಂಕೆ
- ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಅನ್ನೋ ಬಗ್ಗೆ ಕೆಲವು ಪೂರಕ ಅಂಶಗಳು ಪತ್ತೆ
- ಯುಪಿಐ ಐಡಿ ಮೂಲಕ ಹಣ ವರ್ಗಾವಣೆ, ಪೆಟ್ರೋಲ್ ಬಂಕ್ ಸಿಸಿಟಿವಿ ವಿಡಿಯೋ ಸಂಗ್ರಹಿಸಿದ ಪೊಲೀಸರು
- ಬಸ್ ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಲಾಗಿದೆ
- ಬೆಂಕಿ ಹೊತ್ತಿಕೊಂಡ ನಂತರ ಬೆಂಕಿಯ ತೀವ್ರತೆ ಮತ್ತು ಹೊಗೆಯಿಂದಾಗಿ ಕಿಟಕಿ ಗಾಜುಗಳು ಸ್ಪೋಟಗೊಂಡಿರುವ ಶಂಕೆ
- ಸದ್ಯ ಹಲವು ಆಯಾಮಗಳಲ್ಲಿ ತನಿಖೆ ನಡೆಸಿರೋ ಪೊಲೀಸರು
ಪೊಲೀಸರಿಂದಲೇ ಆರೋಪಿ ಕಿಡ್ನಾಪ್: ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ ತಗಲಾಕಿಕೊಂಡ ಪೊಲೀಸರು!
ಆದ್ರೆ ಈ ಎಲ್ಲದಕ್ಕೂ ಎಫ್ಎಸ್ಎಲ್ ರಿಪೋರ್ಟ್ ನಿಂದ ಅಂತಿಮ ಸತ್ಯ ತಿಳಿಯಲಿದೆ. ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ, ಕಾರಣ ಏನು ಎಂಬುದು ತಿಳಿಯಬೇಕು. ಇದಲ್ಲದೆ ಕೆಲವು ತಾಂತ್ರಿಕ ಮತ್ತು ವೈಜ್ಞಾನಿಕ ಎವಿಡೆನ್ಸ್ ಕಲೆ ಹಾಕುತ್ತಿರುವ ಪೊಲೀಸರು. ಇನ್ನೂ ಹಣಕಾಸು ತೊಂದರೆಗೆ ಸಿಲುಕಿದ್ದ ಕಂಡಕ್ಟರ್ ಮುತ್ತಯ್ಯ. ಹೀಗಾಗಿ ಮುತ್ತಯ್ಯ ಹಣಕಾಸು ವಿಚಾರದ ಬಗ್ಗೆ ಸಂಬಂಧಪಟ್ಟವರನನ್ನು ಪೊಲೀಸರು ವಿಚಾರಣೆ ನಡೆಸಿದರು.