ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಸ್ಫೋಟಕ ಸಂಗ್ರಹಿಸಿಟ್ಟಿದ್ದ ಆರೋಪಿ| ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು| ಮಾಲು ಸಹಿತ ಆರೋಪಿ ವಶಕ್ಕೆ| ಆರೋಪಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಪೊಲೀಸರು| 

ಆನೇಕಲ್‌(ಮಾ.03): ಅಕ್ರಮವಾಗಿ ಸ್ಫೋಟಕಗಳನ್ನು ದಾಸ್ತಾನು ಮಾಡಿದ್ದ ವ್ಯಕ್ತಿಯೋರ್ವನನ್ನು ಮಾಲು ಸಹಿತ ಬಂಧಿಸಿರುವ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಮಹಂತಲಿಂಗಾಪುರದಲ್ಲಿ ನಡೆದಿದೆ.

ತಮಿಳುನಾಡಿನ ಕಾರಮಂಗಲದ ನಿವಾಸಿ ವೆಂಕಟೇಶ್‌ ಬಂಧಿತ. ಈತ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ಸ್ಫೋಟಕವನ್ನು ಸಂಗ್ರಹಿಸಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ತೆರಳಿದ ಇನ್‌ಸ್ಪೆಕ್ಟರ್‌ ಶೇಖರ್‌ ಹಾಗೂ ತಂಡದವರು ಮಾಲು ಸಹಿತ ವೆಂಕಟೇಶ್‌ನನ್ನು ವಶಕ್ಕೆ ಪಡೆದರು.

ಹಿಂದೂ ನಾಯಕರ ಹತ್ಯೆಗೆ PFI ಸದಸ್ಯರ ಸಂಚು!

ಸಾಮಗ್ರಿಗಳನ್ನು ಸಮೀಪದ ಬಾಲಾರ ಬಂಡೆ ಕ್ವಾರಿಯಲ್ಲಿ ಕಲ್ಲು ಒಡೆಯಲು ಸಂಗ್ರಸಿರುವುದಾಗಿ ಹೇಳಿಕೆ ನೀಡಿದ್ದಾನೆ. ದಾಳಿ ಸಮಯದಲ್ಲಿ 84 ಬಂಡಲ್‌ ಸೇಫ್ಟಿಫಯಸ್‌ಗಳು, 440 ತೋಟಾಗಳು, ಗನ್‌ಪೌಡರ್‌ ಮತ್ತು ಅಮೋನಿಯಂ ಅನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಬಂಡೆ ಒಡೆಯುವ ಕೆಲಸಗಳು ಸ್ಥಗಿತವಾಗಿದ್ದರೂ ಅಲ್ಲಲ್ಲಿ ಅಕ್ರಮ ದಾಸ್ತಾನು ಇರುವುದು ಕಂಡು ಬಂದಿದೆ. ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.