ರಾಯಚೂರು(ಮಾ.08): ನಿನ್ನೆ(ಭಾನುವಾರ) ನಾಪತ್ತೆಯಾಗಿದ್ದ  ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಇಬ್ಬರು ಮೊಮ್ಮಕ್ಕಳು ಇಂದು(ಸೋಮವಾರ) ಶವವಾಗಿ ಪತ್ತೆಯಾಗಿದ್ದಾರೆ.

ಜಿಲ್ಲೆಯ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ವರುಣ್(9) ಹಾಗೂ ಸಣ್ಣಯ್ಯ(5) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿನ್ನೆ ಮಧ್ಯಾಹ್ನ ಆಟವಾಡಲು ಹೋದಾಗ ಬಾಲಕರು ನಾಪತ್ತೆಯಾಗಿದ್ದರು.

ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಸಚಿವ ಮುರುಗೇಶ್ ನಿರಾಣಿಗೆ ಘೇರಾವ್

ಬಾಲಕನಿಗಾಗಿ ನಿನ್ನೆಯಿಂದ ಸಿರವಾರ ಹಾಗೂ ಕವಿತಾಳ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಇಂದು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ಬಾಲಕರು ಶವವಾಗಿ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಸಿರವಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.