ಬೆಂಗಳೂರಿನಲ್ಲಿ ಹಾಡ ಹಗಲೇ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಕೊಲೆ ನಡೆದಿರುವುದು ದುಡ್ಡು, ವ್ಯವಹಾರ, ಹಳೇ ದ್ವೇಷಕ್ಕಲ್ಲ. ಹುಡುಗಿ ವಿಚಾರಕ್ಕೆ ಅನ್ನೋದು ತನಿಖೆಯಿಂದ ಬಯಲಾಗಿದೆ. 

ಬೆಂಗಳೂರು(ಜು.12) ಸಿಲಿಕಾನ್ ಸಿಟಿಯಲ್ಲಿ ನಡೆದ ಡಬಲ್ ಮರ್ಡರ್ ಮತ್ತೆ ನಗರವನ್ನು ಬೆಚ್ಚಿ ಬೀಳಿಸಿತ್ತು. ಹಾಡಹಗಲೇ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಮಾಜಿ ಸಹದ್ಯೋಗಿ ಹಾಗೂ ಆತನ ಇಬ್ಬರು ಸಹಚರರು ಈ ಕೃತ್ಯ ಎಸಗಿ ಪರರಾಯಿಗಿದ್ದರು. ಇದೀಗ ಪ್ರಮುಖ ಆರೋಪಿ ಫಿಲಿಕ್ಸ್‌ನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಈ ಡಬಲ್ ಮರ್ಡರ್ ಹಿಂದೆ ವ್ಯವಹಾರ, ಹಣದ ವಿಚಾರವಲ್ಲ. ಹುಡುಗಿ ವಿಚಾರಕ್ಕೆ ನಡೆದಿದೆ ಎಂದು ಆರೋಪಿ ಫಿಲಿಕ್ಸ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಏರೋನಾಟಿಕ್ಸ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್‌ (40) ಮೇಲೆ ದಾಳಿ ನಡೆದಿತ್ತು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಹಲವರನ್ನು ವಿಚಾರಣೆ ನಡೆಸಿದ ಪೊಲೀಸರು ಕೊಲೆ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಬನ್ನೇರುಘಟ್ಟದ ಜಿ ನೆಟ್ ಕಂಪನಿಯಲ್ಲಿ ಕೊಲೆಯಾದ ಫಣೀಂದ್ರ ಹಾಗೂ ಆರೋಪಿ ಫಿಲಿಕ್ಸ್ ಕೆಲಸ ಮಾಡುತ್ತಿದ್ದ. ಬಳಿಕ ಫಣೀಂದ್ರ ಸ್ವಂತ ಕಂಪನಿ ಆರಂಭಿಸಿದ್ದರು. ಆರೋಪಿ ಫಿಲಿಕ್ಸ್‌ಗೆ ಜಿ ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಜೊತೆ ಪ್ರೀತಿ ಶುರುವಾಗಿತ್ತು. ಇದೇ ಹುಡುಗಿ ಮೇಲೆ ಫಣೀಂದ್ರ ಕಣ್ಣು ಹಾಕಿದ್ದಾನೆ ಎಂದು ಹಲವು ಭಾರಿ ಇವರಿಬ್ಬರ ನಡುವೆ ಜಗಳ ನಡೆದಿದೆ. ನನ್ನ ಹುಡ್ಗಿ ವಿಚಾರಕ್ಕೆ ಬಂದರೆ ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಫಿಲಿಕ್ಸ್ ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಸಿಲಿಕಾನ್ ಸಿಟಿಯಲ್ಲಿ ಡಬಲ್‌ ಮರ್ಡರ್‌: ವೃತ್ತಿ ವೈಷಮ್ಯಕ್ಕೆ ನಡೆಯಿತಾ ಕೊಲೆ ?

 ಈ ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಅರುಣ್ ಎಂಬಾತನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಫೆಲಿಕ್ಸ್‌ಗೆ ಸುಪಾರಿ ಕೊಟ್ಟಿರುವ ಅನುಮಾನದ ಮೇಲೆ ವಿಚಾರಣೆ ನಡೆಸಲಾಗಿತ್ತು. ಡಬಲ್ ಮರ್ಡರ್ ಬಳಿಕ ಆರೋಪಿಗಳು ಕಾಂಪೌಡ್ ಹಾರಿ ಪರಾರಿಯಾಗಿದ್ದರು. ಮೆಜೆಸ್ಟಿಕ್‌ಗೆ ಕ್ಯಾಬ್ ಮೂಲಕ ತೆರಳಿ ಬಳಿಕ ರೈಲಿನ ಮೂಲಕ ಕುಣಿಗಲ್‌ಗೆ ತೆರಳಿದ್ದರು. ಕೊಲೆ ಬಳಿಕ ಮಾಧ್ಯಮದಲ್ಲಿ ತನ್ನ ಫೋಟೋ ಬಂದ ವರದಿಗಳನ್ನು ಆರೋಪಿ ಫೆಲಿಕ್ಸ್ ಸ್ಟೇಟಸ್ ಹಾಕಿಕೊಂಡಿದ್ದ.

ಫಣೀಂದ್ರ ಬನ್ನೇರುಘಟ್ಟ ರಸ್ತೆಯಲ್ಲಿ ಇಂಟರ್ನೆಟ್ ಪೂರೈಸುವ ಖಾಸಗಿ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. 2022ರಲ್ಲಿ ಏರ್ ಆನ್ ಏರೋನಿಕ್ಸ್ ಮಿಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ತೆರೆದು ವ್ಯವಾಹರ ಆರಂಭಿಸಿದ್ದರು. ಈ ವೇಳೆ ಹಳೇ ಕಂಪನಿಯಲ್ಲಿದ್ದ ಹಲವರು ಫಣೀಂದ್ರ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. 7 ತಿಂಗಳಲ್ಲಿ ಕಂಪನಿ ಲಾಭ ಪಡೆದುಕೊಂಡಿತ್ತು. ಜೊತೆಗೆ ಯಶಸ್ಸಿನ ಮೆಟ್ಟಿಲು ಹತ್ತಿತ್ತು. ಅಸಭ್ಯ ವರ್ತನೆ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಕಾರಣ ನೀಡಿ ಈ ಹಿಂದಿನ ಕಂಂಪನಿಯಿಂದ ಫಿಲಿಕ್ಸ್‌ನನ್ನು ಕೆಲಸದಿಂದ ಫಣೀಂದ್ರ ವಜಾ ಮಾಡಿದ್ದರು.

ಆರೋಪಿಗಳು ಮೂರು ತಿಂಗ್ಳಲ್ಲಿ ಹೊರಬಂದ್ರೆ ಕತ್ತು ಕೊಯ್ದುಕೊಳ್ಳುವೆ: ಮೃತ ವೇಣುಗೋಪಾಲ್‌ ಪತ್ನಿ ಅಳಲು

ಈ ಕಂಪನಿಯಲ್ಲಿ 10 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕೆ.ಆರ್‌.ಪುರದಲ್ಲಿ ಫಣೀಂದ್ರ ಹಾಗೂ ಹೆಬ್ಬಾಳ ಕೆಂಪಾಪುರದಲ್ಲಿ ವಿನು ವಾಸವಾಗಿದ್ದರು. ಏಳೆಂಟು ತಿಂಗಳಲ್ಲಿ ಫಣೀಂದ್ರ ಕಂಪನಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಕಂಡಿತು. ಆದರೆ ಈ ಹಿಂದೆ ಅವರು ಕೆಲಸ ಮಾಡುತ್ತಿದ್ದ ಬ್ರಾಡ್‌ ಬ್ಯಾಂಡ್‌ ಕಂಪನಿಗೆ ಫಣೀಂದ್ರ ಕಂಪನಿ ತೀವ್ರ ಸ್ಪರ್ಧೆವೊಡ್ಡಿದ ಪರಿಣಾಮ ಆ ಕಂಪನಿಗೆ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಕಂಪನಿಗಳ ನಡುವೆ ವೃತ್ತಿ ವೈಷಮ್ಯ ಮೂಡಿತ್ತು.