ಇಂಗ್ಲೆಂಡ್ ಪ್ರಜೆಯೊಬ್ಬರು ಏಳು ಅಂತಸ್ಥಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಫಿಯೋನ್ ಶೆಫರ್ಡ್ ಜನವರಿ 16, 2020ರಲ್ಲಿ ಆಶ್ರಮಕ್ಕೆ ಬಂದಿದ್ದರು. ಮೃತದೇಹವನ್ನು ಶವ ಪರೀಕ್ಷೆ ನಡೆಸಲು ಕರುನಾಗಪಲ್ಲಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಆಶ್ರಮದಲ್ಲಿ ಪ್ರತಿಬಾರಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ಲಾಕ್‌ಡೌನ್‌ನಿಂದಾಗಿ ಇಂಗ್ಲೆಂಡ್ ಮರಳಲು ಸಾದ್ಯವಾಗದಿದ್ದರಿಂದ ಮಹಿಳೆ ಸಾಕಷ್ಟು ಖಿನ್ನತೆಗೊಳಗಾಗಿದ್ದರು ಎಂದು ಪೊಲೀಸ್ ಮೂಲಗಳು ಅಂದಾಜಿಸಿವೆ.