ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 54 ಲಕ್ಷ ರು. ಬೆಲೆ ಬಾಳುವ ಚಿನ್ನದ ಓಡವೆಗಳನ್ನು ಕದ್ದು ಮಾರಾಟ ಮಾಡಿದ್ದ ಬ್ಯಾಂಕಿನ ನೌಕರ ಮಂಜುನಾಥ್‌ನನ್ನು ಬಂಧಿಸಿದ ಪೊಲೀಸರು. 

ಕೆಜಿಎಫ್‌(ಡಿ.11): ತಾಲೂಕಿನ ಕ್ಯಾಸಂಬಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 54 ಲಕ್ಷ ರುಪಾಯಿಗಳ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಕದ್ದು ಮಾರಾಟ ಮಾಡಿದ್ದ ಬ್ಯಾಂಕಿನ ನೌಕರ ಮಂಜುನಾಥ್‌ನನ್ನು ಕ್ಯಾಸಂಬಳ್ಳಿ ಪೊಲೀಸ್‌ರು ಬಂಧಿಸಿ, ಚಿನ್ನವನ್ನು ಮಾರಟ ಮಾಡಿದ್ದ 945 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಬಂಧಿತ ಆರೋಪಿ ಮುಳಬಾಗಿಲಿನ ಮಂಜುನಾಥ(38) ಬ್ಯಾಂಕಿನಲ್ಲಿ ಒಡವೆಗಳನ್ನು ಕಳ್ಳತನ ಮಾಡಿರುವುದು ನವೆಂಬರ್‌ 2ರಂದು ಬೆಳಕಿಗೆ ಬಂದಿತ್ತು. ಅಂದಿನಿಂದ ಆತ ನಾಪತ್ತೆಯಾಗಿದ್ದ.

ಆರೋಪಿ ನ್ಯಾಯಾಲಯಕ್ಕೆ ಶರಣು

ಡಿ.1ರಂದು ತನ್ನ ವಕೀಲರ ಮೂಲಕ ಮಂಜುನಾಥ್‌ ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿದ್ದು, ಡಿ.2ರಂದು ಆರೋಪಿಯನ್ನು ಕ್ಯಾಸಂಬಳ್ಳಿ ಪೊಲೀಸ್‌ರು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನು 20 ಪ್ಯಾಕೆಟ್‌ ಚಿನ್ನವನ್ನು ಬ್ಯಾಂಕ್‌ನಿಂದ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

Kolar: ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಅನ್‌ಲೈನ್‌ ಗೇಮ್‌ನಿಂದ ಸಾಲಗಾರನಾಗಿ ತನಗೆ ಬರುವ ಸಂಬಳದ ಹಣ ಬಡ್ಡಿಕಟ್ಟಲು ಸಾಲತ್ತಿರಲಿಲ್ಲ ಇದರ ಜೊತೆಗೆ 5 ಲಕ್ಷ ರುಪಾಯಿಗಳ ಚೀಟಿ ವ್ಯವಹಾರ ನಡೆಸುತ್ತಿದ್ದ. ಚೀಟಿ ಹಣಕ್ಕಾಗಿ ಗ್ರಾಹಕರು ಮನೆಯ ಮುಂದೆ ಪ್ರತಿ ದಿನ ಗಲಾಟೆ ಮಾಡುತ್ತಿದ್ದರು. ಸಾಲದಿಂದ ಮುಕ್ತನಾಗಲು ಬ್ಯಾಂಕ್‌ನಲ್ಲಿದ್ದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿ ತನ್ನ ಅತ್ತೆ ಗಜಲಕ್ಷ್ಮೇ ಮುಖಾಂತರ ಮಾರಟ ಮಾಡಿಸಿದ್ದಾಗಿ ವಿವರಿಸಿದ್ದಾನೆ.

ಒಡವೆ ಮಾರಾಟ ಬಳಿಕ ಮಿಕ್ಕ ಒಡವೆಗಳನ್ನು ಅಕ್ಕಸಾಲಿಗ ಅರುಣ್‌ ಮತ್ತು ಆನಂದ್‌ ಎಂಬುವವರಿಗೆ ನೀಡಿ ಒಡವೆಗಳನ್ನು ಕರಗಿಸಿ 535ಗ್ರಾಂ ಚಿನ್ನದ ಗಟ್ಟಿಯನ್ನು ಮಾಡಿಸಿ ಮನೆಯ ಇಟ್ಟುಕೊಂಡಿದ್ದು, ಇದನ್ನು ಮಾರಾಟ ಮಾಡಿ ಮನೆ ಕಟ್ಟಬೇಕೆಂದು ಉದ್ದೇಶಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ. ಡಿ. 6ರಂದು ಆರೋಪಿ ಮಂಜುನಾಥ್‌ನಿಂದ ಒಟ್ಟು 945ಗ್ರಾಂ ಚಿನ್ನವನ್ನು ಪೊಲೀಸ್‌ರು ವಶಪಡಿಸಿಕೊಂಡಿದ್ದಾರೆ.

Kolar: ಹೃದಯ ಫೌಂಡೇಶನ್ ಸಂಸ್ಥೆಯಿಂದ ವಿದ್ಯಾರ್ಥಿನಿಯರಿಗಾಗಿ ಪಿಂಕ್ ರೂಂ ಸ್ಥಾಪನೆ

ಕ್ಯಾಸಂಬಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 54 ಲಕ್ಷ ರೂಪಾಯಿಗಳ ಬೆಲೆ ಬಾಳುವ ಚಿನ್ನದ ಓಡವೆಗಳು ಕಾಣೆಯಾಗಿರುವ ಬಗ್ಗೆ ಕ್ಯಾಸಂಬಳ್ಳಿ ಪೊಲೀಸ್‌ ಠಾಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಪ್ರಾದೇಶಿಕ ವ್ಯವಾಸ್ಥಾಪಕರಾದ ದೇವದಾಸ್‌ ದೂರು ನೀಡಿದ್ದರು.

ಬ್ಯಾಂಕಿನ ಎಲ್ಲ ಸಿಬ್ಬಂದಿ ಅಮಾನತು

ಕ್ಯಾಸಂಬಳ್ಳಿ ಬ್ಯಾಂಕಿನ ವ್ಯವಾಸ್ಥಾಪಕರಾದ ಎಸ್‌.ಎಸ್‌.ನಾಯಕ್‌, ಸಿಬ್ಬಂದಿ ಲತಾ ಸುಂದರ್‌ರಾಜನ್‌, ಬಿ.ವಿ ಮಂಜುನಾಥ್‌, ಬಾಲುಮಹೇಂದ್ರನ್‌ ಸೇರಿದಂತೆ ಎಲ್ಲ ಸಿಬ್ಬಂದಿಗಳ ಅಮಾನತು ಮಾಡಿ ಬ್ಯಾಂಕ್‌ನ ಅಧ್ಯಕ್ಷ ಶ್ರೀನಾಥ್‌ ಜೋಷಿ ಅದೇಶ ಹೊರಡಿಸಿದ್ದಾರೆ. ಈ ಪ್ರಕರಣವನ್ನು ಡಿವೈಎಸ್ಪಿ ವಿ.ಎಲ್‌ ರಮೇಶ್‌ ಮಾರ್ಗದರ್ಶನದಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಶ್ಯಾಮಾಲ ಹಾಗೂ ಸಿಬ್ಬಂದಿ ಕಾರ‍್ಯನಿರ್ವಹಿಸಿದ್ದರು.