Asianet Suvarna News Asianet Suvarna News

ಊರನ್ನೇ ಕತ್ತಲೆಗೆ ದೂಡಿ ಗೆಳತಿಯೊಂದಿಗೆ ಕಷ್ಟ-ಸುಖ... ಪೆಟ್ಟು ಬಿದ್ರೂ ಮದುವೆಯಾಯ್ತು!

*  ಗೆಳತಿಯ ಭೇಟಿ ಮಾಡಲು ಊರನ್ನೇ ಕತ್ತಲೆಯಲ್ಲಿ ಮುಳುಗಿಸುತ್ತಿದ್ದ
* ಬಿಹಾರದ ಪೂರ್ನಿಯಾ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ಘಟನೆ
* ಯಾವ ಸಿನಿಮಾದ ಹಳ್ಳಿ ಲವ್ ಸ್ಟೋರಿಗೆ ಕಡಿಮೆ ಇಲ್ಲ
* ವಿದ್ಯುತ್ ಕಡಿತ ಮಾಡಿ ಕತ್ತಲಲ್ಲಿ ಪ್ರೇಯಸಿಯನ್ನು ಭೇಟಿ ಮಾಡುತ್ತಿದ್ದ ಭೂಪ

Electrician cuts power supply to Bihar village to meet girlfriend under cover of darkness mah
Author
Bengaluru, First Published Oct 15, 2021, 6:07 PM IST
  • Facebook
  • Twitter
  • Whatsapp

ಪಾಟ್ನಾ(ಅ. 15) ಪ್ರೀತಿ (Love) ಯೆ ಹುಷಾರು ಎನ್ನುವ ಮಾತು ಸದಾ ಸತ್ಯ.  ಗೆಳತಿಯನ್ನು (Girl Friend) ಭೇಟಿ ಮಾಡಲು.. ಒಂದಿಷ್ಟು ಮಾತಾಡಲು..ಕಷ್ಟ ಸುಖ ಹಂಚಿಕೊಳ್ಳಲು ಈ ಪುಣ್ಯಾತ್ಮ ಮಾಡ್ತಿದ್ದ  ಕೆಲಸ ಮಾತ್ರ ಅಂತಿಂಥದ್ದಲ್ಲ... ಸಿಕ್ಕಾಕಿಕೊಂಡ ಮೇಲೆ ಗ್ರಾಮಸ್ಥರಿಂದ ಸರಿಯಾಗಿ ಬೂಸಾ ತಿಂದಿದ್ದಾನೆ. ಆದರೆ ಜತೆಗೆ ಮದುವೆಯೂ(Marriage)  ಆಗಿ ಹೋಗಿದೆ!

ಲವ್ ಸ್ಟೋರಿ (Love Story) ಶುರುವಾಗೋದು ಬಿಹಾರದ (Bihar) ಪಾಟ್ನಾ (Patna) ಸಮೀಪ.  ಪೂರ್ವ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿನ ಗಣೇಶಪುರ ಗ್ರಾಮದಲ್ಲಿನ ನಿವಾಸಿಗಳಿಗೆ ಪ್ರತಿದಿನ ರಾತ್ರಿಯಾದರೆ ಸಾಕು ಕರೆಂಟ್ (Electricity) ಕೈ ಕೊಡ್ತಿತ್ತು. ಎರಡು ಮೂರು ಗಂಟೆ ಕರೆಂಟ್ ಸಮಸ್ಯೆಯಾಗುತ್ತಿತ್ತು. ಕಲ್ಲಿದ್ದಲು ಕೊರತೆಯೂ ಇರಲಿಲ್ಲ..  ಗಾಳಿ ಮಳೆ ಲೋಡ್ ಶೆಡ್ಡಿಂಗ್ ಏನೂ ಇರಲಿಲ್ಲ. ಆದರೆ ಕರೆಂಟ್ ಮಾತ್ರ ಇರ್ತಿರಲಿಲ್ಲ..

ಸಂಜೆ ವೇಳೆ ವಿದ್ಯುತ್ ಕಡಿತದ ಸಮಸ್ಯೆ ಕಾಡುತ್ತಿತ್ತು. ಅತಿ ಅಗತ್ಯವಿರುವ ಸಂಜೆ ವೇಳೆ ಸರಿಯಾಗಿ ಎರಡು ಮೂರು ಗಂಟೆ ವಿದ್ಯುತ್ ಕಡಿತವಾಗುವುದೆಂದರೆ ಸಾಮಾನ್ಯವೇನಲ್ಲ. ಇದು ವಿದ್ಯುತ್ ಇಲಾಖೆಯವರು ಲೋಡ್ ಶೆಡ್ಡಿಂಗ್ ಮಾಡುತ್ತಿರಬಹುದು ಎಂದು ಆರಂಭದಲ್ಲಿ ಭಾವಿಸಿದ್ದರು. ಆದರೆ ಪಕ್ಕದ ಹಳ್ಳಿಗಳಲ್ಲಿ ಯಾವ ವಿದ್ಯುತ್ ಕಡಿತವೂ ಇರಲಿಲ್ಲ. ಗ್ರಾಮಸ್ಥರಿಗೆ ತಲೆಬಿಸಿ  ಜೋರಾಗಿ ಕರೆಂಟ್ ಕೋತಾದ ಮೂಲ ಹುಡುಕಲು ಮುಂದಾದಾಗ ಲವ್ ಸ್ಟೋರಿ ಬೆಳಕಿಗೆ ಬಂತು. ಪಕ್ಕದ ಊರಿನಲ್ಲಿ ಕರೆಂಟ್ ಇದ್ದರೂ ಇವರ ಊರಲ್ಲಿ ಮಾತ್ರ ಕತ್ತಲೆ ಬರೀಯ ಕತ್ತಲೆ!

ಪಂದ್ಯ ಸೋತರೂ ಪ್ರೀತಿ ಗೆದ್ದ ಸಿಎಸ್‌ಕೆ ಬೌಲರ್..ವಿಡಿಯೋ ವೈರಲ್

ಈ ಕತ್ತಲೆ ಲೋಕ ನಿರ್ಮಾಣ ಮಾಡುತ್ತಿದ್ದವ ಅದೇ ಗ್ರಾಮದ ಇಲೆಕ್ಟ್ರಿಶಿಯನ್...  ತನ್ನ ಗೆಳತಿಯನ್ನು ಭೇಟಿ ಮಾಡಿ ಕಷ್ಟ ಸುಖ ಹಂಚಿಕೊಳ್ಳಲು ಇಡೀ ಊರನ್ನು ಕತ್ತಲೆಗೆ ದೂಡುತ್ತಿದ್ದ. ತಾನು ಊರಿನ ಒಳಕ್ಕೆ ಪ್ರವೇಶ ಮಾಡುವ ಮುನ್ನ ಕರೆಂಟ್ ಕಟ್ ಮಾಡುವವ ಗೆಳತಿಯನ್ನು ಭೇಟಿ ಮಾಡಿದ  ತನ್ನೆಲ್ಲ ಕಷ್ಟ ಸುಖ ತೋಡಿಕೊಂಡ ನಂತರ ಸಾವಧಾನವಾಗಿ ತೆರಳಿ ಕರೆಂಟ್ ಹಾಕುತ್ತಿದ್ದ.

ಇದನ್ನು  ಪತ್ತೆಮಾಡಿದ ಗ್ರಾಮಸ್ಥರು ಜೋಡಿಯನ್ನು ಹಿಡಿಯಬೇಕು ಎಂದು ಪ್ಲಾನ್ ರೂಪಿಸಿದರು. ಕರೆಂಟ್ ಯಾವಾಘ ಕಟ್ ಆಯಿತೋ ಗ್ರಾಮಸ್ಥರ ತಂಡ ಹತ್ತಿರದ ಶಾಲೆಬಳಿ ದೌಡಾಯಿಸಿತು. ಅಲ್ಲಿ ಮಾತುಕತೆಯಲ್ಲಿ ತೊಡಗಿದ್ದ ಜೋಡಿ ಸಿಕ್ಕಿಬಿತ್ತು.

ಸಿಕ್ಕಾಕಿಕೊಂಡ ಮೇಲೆ ಗ್ರಾಮಸ್ಥರು ಬಿಡ್ತಾರೆಯೇ!... ಎಲೆಕ್ಟ್ರಿಶಿಯನ್ ಗೆ ಸರಿಯಾಗಿ ಬಾರಿಸಿದ್ದಾರೆ. ಆತನನ್ನು ಊರಿನ ತುಂಬಾ ಮೆರವಣಿಗೆ ಮಾಡಲಾಗಿದೆ.  ಇಷ್ಟಕ್ಕೆ ಬಿಟ್ಟಿಲ್ಲ.. ಗೆಳತಿಯ ಜತೆಗೆ ಆತನ ಮದುವೆಯನ್ನು ಮಾಡಿ ಮುಗಿಸಿದ್ದಾರೆ.

ಪೊಲೀಸರಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ದೂರು ಬಂದಿಲ್ಲ.  ಒಟ್ಟಿನಲ್ಲಿ ಗೆಳತಿಯನ್ನು ಕದ್ದು ಮುಚ್ಚಿ ಭೇಟಿ ಮಾಡುತ್ತಿದ್ದವ ಈಗ ಆಕೆಯನ್ನು ಸತಿಯಾಗಿ ಸ್ವೀಕರಿಸಿದ್ದಾನೆ. ಕರೆಂಟ್ ತೆಗೆದು ಏಟು ತಿಂದರೆ ಏನಾಯಿತು.. ಯಾವುದೆ ವಘನಗಳಿಲ್ಲದೆ ಮದುವೆ ಸಾಂಗವಾಗಿ ನೆರವೇರಿದೆ. 

Follow Us:
Download App:
  • android
  • ios