Asianet Suvarna News Asianet Suvarna News

40 ಅಡಿ ಕಮರಿಗೆ ಬಿದ್ದ ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ: 8 ಮಂದಿ ದುರ್ಮರಣ

ಹೇರ್‌ಪಿನ್ ತಿರುವಿನಲ್ಲಿ ಚಾಲನೆ ಮಾಡುವಾಗ ವ್ಯಾನ್‌ನ ಚಾಲಕನ ನಿಯಂತ್ರಣ ತಪ್ಪಿ ವಾಹನ 40 ಅಡಿ ಕಮರಿಗೆ ಬಿದ್ದಿದೆ. ಕುಮಿಲಿ-ಕಂಬಂ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಸಾಗಿಸುವ ಪೆನ್‌ಸ್ಟಾಕ್ ಪೈಪ್‌ಗೆ ವಾಹನ ಡಿಕ್ಕಿ ಹೊಡೆದಿದೆ ಎಂದೂ ವರದಿಗಳು ಹೇಳಿವೆ.

eight dead as van carrying sabarimala pilgrims falls into 40 foot gorge at tamilnadu ash
Author
First Published Dec 24, 2022, 11:42 AM IST

ಕೇರಳ-ತಮಿಳುನಾಡು ಗಡಿಯ (Kerala - Tamilnadu Border) ಬಳಿ ಅವರು ಪ್ರಯಾಣಿಸುತ್ತಿದ್ದ ವಾಹನವು (Vehicle) ಶುಕ್ರವಾರ, ಡಿಸೆಂಬರ್ 23 ರಂದು ರಾತ್ರಿ 11 ಗಂಟೆ ವೇಳೆಗೆ ಕಮರಿಗೆ (Gorge) ಉರುಳಿ ಕನಿಷ್ಠ 8 ಜನರು ಮೃತಪಟ್ಟಿದ್ದಾರೆ. ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ (Lord Ayyappa Swamy Temple) ಹೋಗಿದ್ದ ಭಕ್ತರು (Devotees), ತಮಿಳುನಾಡಿನ ಥೇಣಿ (Theni) ಜಿಲ್ಲೆಯ ಆಂಡಿಪಟ್ಟಿಗೆ ಹಿಂದಿರುಗುತ್ತಿದ್ದಾಗ ಕುಮಿಲಿ (Kumily) ಬಳಿ ಈ ಅಪಘಾತ (Accident) ಸಂಭವಿಸಿದೆ. ಅಪಘಾತದ ವೇಳೆ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿ.ಮುರಳೀಧರನ್ ಮಾಹಿತಿ ನೀಡಿದ್ದು, ಮೃತಪಟ್ಟವರಲ್ಲಿ ಅಪ್ರಾಪ್ತ ಬಾಲಕನೂ ಸೇರಿದ್ದಾನೆ ಎಂದು ತಿಳಿದುಬಂದಿದೆ. 

ಹೇರ್‌ಪಿನ್ ತಿರುವಿನಲ್ಲಿ ಚಾಲನೆ ಮಾಡುವಾಗ ವ್ಯಾನ್‌ನ ಚಾಲಕನ ನಿಯಂತ್ರಣ ತಪ್ಪಿ ವಾಹನ 40 ಅಡಿ ಕಮರಿಗೆ ಬಿದ್ದಿದೆ. ಕುಮಿಲಿ-ಕಂಬಂ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಸಾಗಿಸುವ ಪೆನ್‌ಸ್ಟಾಕ್ ಪೈಪ್‌ಗೆ ವಾಹನ ಡಿಕ್ಕಿ ಹೊಡೆದಿದೆ ಎಂದೂ ವರದಿಗಳು ಹೇಳಿವೆ. ಈ ವ್ಯಾನ್‌ನಲ್ಲಿದ್ದ 10 ಜನರಲ್ಲಿ 7 ಮಂದಿ ಸ್ಥಳದಲ್ಲೇ ಸಾವಿಗೀಡಾದರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. 

ಇದನ್ನು ಓದಿ: Kalaburagi: ನಿಂತಿದ್ದ ಕಬ್ಬಿನ ಲಾರಿಗೆ ಟಿಟಿ ವಾಹನ ಡಿಕ್ಕಿ: ಇಬ್ಬರು ಸಾವು, ಐವರ ಸ್ಥಿತಿ ಗಂಭೀರ

ಇನ್ನು, ಈ ಅಪಘಾತದಲ್ಲಿ ಒಂದು ಮಗು ಸೇರಿದಂತೆ ಇಬ್ಬರು ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದೂ ಹೇಳಲಾಗಿದೆ. ಗಾಯಗೊಂಡ ಮಗುವನ್ನು ಕುಮಿಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೊಬ್ಬ ಗಾಯಾಳು ತಮಿಳುನಾಡಿನ ಕಂಬಂ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ಯಾತ್ರಾರ್ಥಿಗಳ ಮೃತದೇಹಗಳು ಕೂಡ ಕಂಬಂ ಜನರಲ್ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಇನ್ನು, ಕುಮಳಿ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು ಅಪಘಾತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದೂ ವರದಿಯಾಗಿದೆ.

ಘಟನೆಯ ವಿವರ..
ಮುಲ್ಲಪ್ಪೆರಿಯಾರ್ ಅಣೆಕಟ್ಟಿನಿಂದ ತಮಿಳುನಾಡಿಗೆ ನೀರು ಸಾಗಿಸುವ ಮೊದಲ ಪೆನ್‌ಸ್ಟಾಕ್ ಪೈಪ್ ಬಳಿ ಈ ಘಟನೆ ನಡೆದಿದೆ. ಪೈಪ್‌ಗೆ ವ್ಯಾನ್ ಪಲ್ಟಿಯಾಗಿದ್ದು, ರಸ್ತೆಯಿಂದ ಸುಮಾರು 40 ಅಡಿಗಳಷ್ಟು ಬಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. ವರದಿಗಳ ಪ್ರಕಾರ, ಹೇರ್‌ಪಿನ್ ಕರ್ವ್ ಮೂಲಕ ಬಂದ ವಾಹನವು ಮರಕ್ಕೆ ಡಿಕ್ಕಿ ಹೊಡೆದು ದೈತ್ಯ ಪೈಪ್‌ಗೆ ಬಿದ್ದಿದೆ. ಇನ್ನು, ಘಟನೆ ಸಂಭವಿಸಿದ ಸೇತುವೆಯು ಇತರ ರಸ್ತೆಗಳಿಗಿಂತ ಕಿರಿದಾಗಿದ್ದು, ಒಂದು ಪೆನ್‌ಸ್ಟಾಕ್ ಅನ್ನು ಬದಿಯಲ್ಲಿ ಹಾಕಲಾಗಿದೆ. ಅತಿಯಾದ ವೇಗ ಮತ್ತು ಸಾಹಸಮಯ ಮಾರ್ಗದಲ್ಲಿ ಚಾಲಕನ ಅನುಭವದ ಕೊರತೆಯು ಅಪಘಾತಕ್ಕೆ ಕಾರಣವಾಗಿರಬಹುದು ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್ ಪಲ್ಟಿ: 7 ಮಂದಿಗೆ ಗಾಯ

ಅಪಘಾತ ನಡೆದ ಬಳಿಕ, ಕುಮಳಿ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಮೊದಲು ಸ್ಥಳಕ್ಕೆ ಧಾವಿಸಿದರು. ನಂತರ ಅವರನ್ನು ಕಂಬಂ ಪೊಲೀಸರು ಮತ್ತು ಅಗ್ನಿಶಾಮಕ ಹಾಗೂ ರಕ್ಷಣಾ ಸೇವೆಯ ಸಿಬ್ಬಂದಿ ಸೇರಿಕೊಂಡರು ಎಂದೂ ವರದಿಯಾಗಿದೆ.

ಆಂಧ್ರದಲ್ಲೂ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದರು
ಇದಕ್ಕೂ ಮುನ್ನ ಡಿಸೆಂಬರ್‌ನಲ್ಲೇ, ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು ಮತ್ತು ಕನಿಷ್ಠ 15 ಮಂದಿ ಗಾಯಗೊಂಡಿದ್ದರು. ಸಂತ್ರಸ್ಥರು ಕೃಷ್ಣಾ ಜಿಲ್ಲೆಯ ಪೆಡನಾ ಮಂಡಲದವರಾಗಿದ್ದು, ಶಬರಿಮಲೆಗೆ ಯಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದರು. ವೇಮೂರು ಮಂಡಲದ ಜಂಪಣಿ ಗ್ರಾಮದ ಬಳಿ ಅವರು ಪ್ರಯಾಣಿಸುತ್ತಿದ್ದ ಮಿನಿ ಟ್ರಕ್ ಪಲ್ಟಿಯಾಗಿ ಈ ಅವಘಡ ಸಂಭವಿಸಿದ್ದ ಬಗ್ಗೆ ವರದಿಯಾಗಿತ್ತು. 

ಇದನ್ನೂ ಓದಿ: ಹಾವು ಕಡಿತ, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ ಸಿಗದೆ ಬಾಲಕ ಸಾವು

Follow Us:
Download App:
  • android
  • ios