ಆನ್‌ಲೈನ್ ಜೂಜು, ಆನ್‌ಲೈನ್ ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದೆ. ಈ ಕುರಿತು ಮಾಹಿತಿ ಪಡೆದ ಇಡಿ ಅಧಿಕಾರಿಗಳು ಮೊಬೈಲ್ ಗ್ಯಾಂಬ್ಲಿಂಗ್ ಅಪ್ಲಿಕೇಶನ್ ಅಡ್ಡೆಗಳ ಮೇಲೆ ದಾಳಿ ಮಾಡಿದ್ದಾರೆ. 6 ಕಡೆಗಳಲ್ಲಿನ ದಾಳಿಯಲ್ಲಿ 7 ಕೋಟಿ ರಾಪಾಯಿಗೂ ಹೆಚ್ಚು ನಗದು ಹಣ ಪತ್ತೆಯಾಗಿದೆ. ಇನ್ನೂ ಉಳಿದ ಹಣ ಕೌಂಟಿಂಗ್ ಮಾಡಲಾಗುತ್ತಿದೆ.

ಕೋಲ್ಕತಾ(ಸೆ.10): ಆನ್‌ಲೈನ್ ಗ್ಯಾಂಬ್ಲಿಂಗ್ ಇದೀಗ ಅತೀ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಪೊಲೀಸರು ಅದೆಷ್ಟೆ ನಿಗಾವಹಿಸಿದರೂ ಆನ್‌ಲೈನ್ ಜೂಜು ನಿಯಂತ್ರಣಕ್ಕೆ ಬರುತ್ತಿಲ್ಲ. ಇದೀಗ ಇಡಿ ಅಧಿಕಾರಿಗಳು ಕೋಲ್ಕತಾದ 6 ಕಡೆಗಳಲ್ಲಿ ಮೊಬೈಲ್ ಗ್ಯಾಂಬ್ಲಿಂಗ್ ಆ್ಯಪ್ಲಿಕೇಶನ್ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಪಿಎಂಎಲ್ಎ ಕಾಯ್ದೆ ಅಡಿ ಸ್ಥಳಗಳ ಶೋಧ ನಡೆಸಿರುವ ಇಡಿ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಾರೆ. ಕಾರಣ 7 ಕೋಟಿ ರೂಪಾಯಿಗೂ ಹೆಚ್ಚು ನಗದ ಹಣ ಪತ್ತೆಯಾಗಿದೆ. ಪತ್ತೆಯಾಗಿರುವ ಹಣದ ಕೌಂಟಿಂಗ್ ನಡೆಯುತ್ತಿದ್ದು 10 ಕೋಟಿ ದಾಟುವ ಎಲ್ಲಾ ಸಾಧ್ಯತೆಗಳಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ಕುರಿತು ಮಾಹಿತಿ ಪಡೆದ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಈ ವೇಳೆ ಅತೀ ದೊಡ್ಡ ಮೊಬೈಲ್ ಗ್ಯಾಂಬ್ಲಿಂಗ್ ಆ್ಯಪ್ಲಿಕೇಶನ್ ಜಾಲ ಪತ್ತೆಯಾಗಿದೆ. ಈ ಜಾಲ ಕೋಲ್ಕತಾದಲ್ಲಿ ಮಾತ್ರವಲ್ಲ, ಇತರ ಕಡೆಗಳಲ್ಲೂ ಈ ರೀತಿ ಗ್ಯಾಂಬ್ಲಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇಡಿ ಅಧಿಕಾರಿಗಳು ಅಡ್ಡೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಈ ಮೊಬೈಲ್ ಗ್ಯಾಂಬ್ಲಿಂಗ್ ಆ್ಯಪ್ಲಿಕೇಶನ್ ಹಾಗೂ ಚೀನಾದ ಕೆಲ ಆ್ಯಪ್‌ಗಳಿಗೂ ಸಂಬಂಧ ಇದೆಯಾ ಅನ್ನೋ ಕುರಿತು ತನಿಖೆ ನಡೆಸುತ್ತಿದೆ. ಆ್ಯಪ್ ಅಭಿವೃದ್ಧಿಪಡಿಸಿ ಹಾಗೂ ಅಡ್ಡೆ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದೆ. 

ರಾಜಸ್ಥಾನಕ್ಕೆ ಹೋಗಿ ಜೂಜಾಟ: ರಾಜ್ಯದ ತಹಶೀಲ್ದಾರ್‌, SI, ಪ್ರೊಫೆಸರ್‌ ಬಂಧನ

ಕೋಲ್ಕತಾದ ಖ್ಯಾತ ಸ್ಥಳಗಳಲ್ಲಿ ಈ ಅಡ್ಡೆಗಳು ಕಾರ್ಯನಿರ್ವಹಿಸುತ್ತಿತ್ತು. ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಅಡ್ಡೆಗಳ ಕುರಿತು ಇಡಿ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಇಷ್ಟೇ ಅಲ್ಲ ಈ ಅಡ್ಡೆಗಳಿಂದ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗುತ್ತಿದೆ ಅನ್ನೋ ಆರೋಪಗಳು ಇವೆ. 

ಜೂಜು ಅಡ್ಡೆ ಮೇಲೆ ದಾಳಿ; 7 ಮಂದಿ ಬಂಧನ
ಕುಣಿಗಲ್‌ ತಾಲೂಕಿನ ಅಮೃತೂರು ಹೋಬಳಿ ಹುಲಿಯೂರುದುರ್ಗ ಪೊಲೀಸ್‌ ಠಾಣಾ ವ್ಯಾಪ್ತಿಯ ಪಡುಗೆರೆ ಗ್ರಾಮದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಸುಮಾರು 10 ರಿಂದ 12 ಜನ ಜೂಜು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ಡಿವೈಎಸ್‌ಪಿ ಜಿ.ಆರ್‌.ರಮೇಶ್‌, ಸಿಪಿಐ ಅರುಣ್‌ ಸಾಲುಂಕಿ, ಪಿಎಸ್‌ಐ ಟಿ ವೆಂಕಟೇಶ್‌ ನೇತೃತ್ವದಲ್ಲಿ ಪೊಲೀಸ್‌ ತಂಡ ದಾಳಿ ನಡೆಸಿತ್ತು. ಪೊಲೀಸರನ್ನು ನೋಡಿದ ಹಲವು ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದು, ಏಳು ಮಂದಿ ಜೂಜುಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 1,51200 ರು. ಹಾಗೂ ಎರಡು ಕಾರು, ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರಿಸಿಕೊಂಡ ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

ಅಂದರ್ ಬಾಹರ್ ಕಾರ್ಪೋರೇಟರ್ ಗಣೇಶ ಮುಧೋಳ್ ಸೇರಿ 10 ಜನರ ಬಂಧನ

ಜೂಜು ಅಡ್ಡೆಮೇಲೆ ದಾಳಿ: 5 ಮಂದಿ ಬಂಧನ
ತಾಲೂಕಿನ ಬೇಗೂರು ಪೋಲಿಸ್‌ ಠಾಣೆ ವ್ಯಾಪ್ತಿಯ ರಂಗೂಪುರ ಗ್ರಾಮದಲ್ಲಿ ಜೂಜು ಅಡ್ಡೆಮೇಲೆ ಪೋಲಿಸರು ದಾಳಿ ನಡೆಸಿ 5 ಮಂದಿಯನ್ನು ಪೋಲಿಸರ ಬಂಧಿಸಿದ್ದಾರೆ. ತಾಲೂಕಿನ ಬೇಗೂರು ಪೋಲಿಸ್‌ ಠಾಣೆಯ ಸರ್ಕಲ್‌ ಇನ್ಸ್‌ ಪೆಕ್ಟರ್‌ ಕಿರಣ್‌ ಕುಮಾರ್‌ ನೇತೃತ್ವದಲ್ಲಿ ದಾಳಿ ಕಮರಹಳ್ಳಿ ಮಹದೇವಸ್ವಾಮಿ ಆಲಿಯಾಸ್‌ ಕಪಾಲಿ, ಗುರುಸ್ವಾಮಿ, ಹುಚ್ಚನಾಯಕ, ರೇಚಣ್ಣ, ಸಂಜಯ್‌ ಬಂಧಿತರು. ಬಂಧಿತರಿಂದ ಒಂದು ಕಾರು, ಐದು ಬೈಕ್‌ ವಶ ಪಡಿಸಿಕೊಂಡಿದ್ದು,ಆರು ಮಂದಿ ಪರಾರಿಯಾಗಿದ್ದಾರೆ. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 25910 ರು.ಗಳನ್ನು ವಶ ಪಡಿಸಿಕೊಂಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ಸಿಪಿಐ ಕಿರಣ್‌ ಕುಮಾರ್‌ ತಿಳಿಸಿದ್ದಾರೆ.