ಡಾಕ್ಟರ್​ಗೆ ಫ್ರೆಂಡ್​ ರಿಕ್ವೆಸ್ಟ್​ ಕಳಿಸಿದ್ಲು, ವಿಡಿಯೋ ಕಾಲ್​ ಮಾಡಿ ಬಟ್ಟೆ ಬಿಚ್ಚಿದ್ಲು... ಆಮೇಲೆ... ಘಟನೆ ವಿವರಿಸಿದ ಪೊಲೀಸ್

ಖತರ್ನಾಕ್​  ಲೇಡಿಯೊಬ್ಬಳು ಖ್ಯಾತ ವೈದ್ಯನಿಗೆ ಫೇಸ್​ಬುಕ್​ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿ ವಿಡಿಯೋ ಕಾಲ್​ ಮಾಡಿ ಆ ವೈದ್ಯರಿಗೆ ಹೇಗೆ ಬ್ಲ್ಯಾಕ್​ ಮೇಲ್​ ಮಾಡಿದ್ದಳು ಎನ್ನುವ ಬಗ್ಗೆ ಡಿವೈಎಸ್ಪಿ ರಾಜೇಶ್​ ಮಾತನಾಡಿದ್ದಾರೆ ನೋಡಿ...
 

DySP L Y Rajesh about a lady trapped a  doctor by sending him a Facebook friend request suc

'ಆತ ನನ್ನ ಕ್ಲೋಸ್​ ಫ್ರೆಂಡು, ಖ್ಯಾತ ವೈದ್ಯ ಬೇರೆ. 47 ವರ್ಷ. ಒಳ್ಳೆ ಫ್ಯಾಮಿಲಿನೂ ಇದೆ. ಒಂದು ದಿನ ಆತ ನನ್ನನ್ನು ನೋಡಲು ಪೊಲೀಸ್​ ಠಾಣೆಗೆ ಬಂದ. ಮಾತನಾಡ್ತಾ ವಿಷಯ ಕೇಳಿದೆ. ಸುಮ್ಮನೇ ಬಂದೆ ಅಂದ. ಪೊಲೀಸ್​  ಠಾಣೆಗೆ ಯಾರೂ ಸುಮ್ಮನೇ ಬರಲ್ಲ ಎನ್ನೋದು ನನಗೆ ಗೊತ್ತು. ಅದಕ್ಕಾಗಿ ಏನೋ ಇದೆ ಅಂತ ಗೊತ್ತಾಯ್ತು. ನಿಧಾನಕ್ಕೆ ಬಾಯಿ ಬಿಡಿಸಿದೆ, ಅವನು ಹೇಳ್ತಿರುವಾಗಲೇ ಬೇಕಿತ್ತಾ ನಿನಗೆ ಇದು ಎಂದು ಮಧ್ಯೆ ಬಾಯಿ ಹಾಕುವ ಮನಸ್ಸಾಯ್ತು. ಆದರೆ ಈ ವಿಷಯವನ್ನು ಕೆದಕಿ ಕೆದಕಿ ಕೇಳಿದ್ದಾಗ ಬಾಯಿ ಬಿಟ್ಟಿದ್ದ. ಮತ್ತೆ ನಾನು ಮಧ್ಯೆ ಬಾಯಿ ಹಾಕಿದ್ರೆ ಅವನು ಮುಂದೆ ಏನೂ ಹೇಳಲ್ಲ ಎನ್ನೋದು ಗೊತ್ತಾಗಿ, ಅವನು ಹೇಳ್ತಿರೋದನ್ನೆಲ್ಲಾ ಕೇಳಿಸಿಕೊಂಡು ಶಾಕ್​ ಆದೆ...' ಎನ್ನುತ್ತಲೇ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ ಡಿವೈಎಸ್ಪಿ ಎಲ್​.ವೈ. ರಾಜೇಶ್​. 

ರಾಜೇಶ್​ ಗೌಡ ಯೂಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ, ಫೇಸ್​ಬುಕ್​ನಲ್ಲಿ ಗೊತ್ತಿಲ್ಲದೇ ಇರುವವರ ಫ್ರೆಂಡ್​ ರಿಕ್ವೆಸ್ಟ್ ಅಕ್ಸೆಪ್ಟ್​ ಮಾಡಿದ್ರೆ ಏನಾಗುತ್ತೆ ಎನ್ನುವುದನ್ನು ಈ ಘಟನೆಯ ಉದಾಹರಣೆ ಕೊಟ್ಟು ವಿವರಿಸಿದ್ದಾರೆ. ಆತ ನನಗೆ ಹೇಳಿದ್ದಿಷ್ಟು ಎನ್ನುತ್ತಲೇ ಆ ಘಟನೆ ವಿವರಿಸಿದ್ದಾರೆ. 'ಮಕ್ಕಳು ಎಲ್ಲಾ ಊರಿಗೆ ಹೋಗಿದ್ರು,  ನಾನು ಒಬ್ಬನೇ  ಮನೆಯಲ್ಲಿ ಇದ್ದೆ. ಆಸ್ಪತ್ರೆಯಿಂದ ವಾಪಸ್​ ಬಂದ ಮೇಲೆ ಸುಮ್ಮನೇ ಫೇಸ್​ಬುಕ್​  ನೋಡ್ತಾ ಇದ್ದೆ. ಒಬ್ಬಳು ಸುಂದರ ಹುಡುಗಿಯ ಫ್ರೆಂಡ್​ ರಿಕ್ವೆಸ್ಟ್​ ಬಂತು. ಅವಳು ಯಾರು ಅಂತ ನನಗೆ ಗೊತ್ತಿರಲಿಲ್ಲ. ಹುಡುಗಿ ತುಂಬಾ ಚೆನ್ನಾಗಿ ಕಾಣಿಸ್ತಿದ್ದಳು ಅಂತ ರಿಕ್ವೆಸ್ಟ್​ ಅಕ್ಸೆಪ್ಟ್​ ಮಾಡಿಬಿಟ್ಟೆ. ನಂತರ ಮೆಸೆಂಜರ್​ನಲ್ಲಿ ಮೆಸೇಜ್​ ಕಳಿಸಿ ಫೋನ್​ ನಂಬರ್​ ಕೊಡಲು ಹೇಳಿದಳು. ನನ್ನ ತಲೆಗೆ ಅದೇನಾಗಿತ್ತೋ ಗೊತ್ತಿಲ್ಲ. ನಾನು ನನ್ನ ಫೋನ್​ ನಂಬರ್​ ಕೊಟ್ಟೆ. ಅವಳೂ ಅವಳ ಫೋನ್​ ನಂಬರ್​ ಕೊಟ್ಟಳು. ಮುಂದೆ ಆದದ್ದೇ ದುರಂತ' ಎಂದು ವೈದ್ಯರು ಡಿವೈಎಸ್ಪಿ ರಾಜೇಶ್​ಗೆ ಹೇಳಿದ್ದಾರೆ.

ಸೈಬರ್​ ಕ್ರೈಂಗೆ ಬಲಿಯಾಗಬಾರ್ದಾ? ದುಡ್ಡು ಸೇಫ್​ ಆಗಿರ್ಬೇಕಾ? ಹಾಗಿದ್ರೆ ಕನ್ನಡದಲ್ಲಿ ಮಾತನಾಡಿ! ಪೊಲೀಸ್​ ಅಧಿಕಾರಿ ಮಾತು ಕೇಳಿ

'ವಾಟ್ಸ್​ಆ್ಯಪ್​ ನಂಬರ್​ ಪಡೆದುಕೊಂಡ ಆಕೆ ಮೊದಲು ಹಾಗೆ ಕರೆ ಮಾಡಿದಳು. ಆಮೇಲೆ ವಿಡಿಯೋ ಕಾಲ್​ ಮಾಡಿದಳು. ನಾನು ಸುಮ್ಮನೇ ಇರದೆ ಆ ಕಾಲ್​ ಪಿಕ್​ ಮಾಡಿದೆ. ಅವಳು ತನ್ನ ಒಂದೊಂದೇ ಬಟ್ಟೆ ಬಿಚ್ಚಳು ಶುರು ಮಾಡಿದಳು. ನನಗೂ ಅದನ್ನು ನೋಡಿ ಏನೇನೋ ಆಯಿತು. ಕೊನೆಗೆ ನನ್ನನ್ನೂ ಬೆತ್ತಲಾಗುವಂತೆ ಹೇಳಿದಳು. ನನ್ನ ತಲೆ ನನ್ನ ಸ್ವಾಧೀನದಲ್ಲಿ ಇರಲಿಲ್ಲ. ಕೊನೆಗೆ  ಆಕೆ ನನ್ನ ಬೆತ್ತಲೆಯ ದೇಹದ ಸ್ಕ್ರೀನ್​ ರಿಕಾರ್ಡ್​  ಮಾಡಿಕೊಂಡಿದ್ದಾಳೆ. ಅದನ್ನು ನನಗೆ ಕೊನೆಗೆ ಕಳಿಸಿದ್ಲು. ನನ್ನ ಎಫ್​ಬಿಯಿಂದ ನಾನು ಬರೆದ ಸಿಸ್ಟರ್​, ಬ್ರದರ್​ ಎಲ್ಲಾ ಸಂಬಂಧ ನೋಡಿಕೊಂಡಿದ್ದಾಳೆ. ನನ್ನ ಸ್ನೇಹಿತನೊಬ್ಬನಿಗೆ ವಿಡಿಯೋ ಕಳುಹಿಸಿದ್ದಾಳೆ. ಆತ ನನಗೆ ಕಾಲ್​  ಮಾಡಿ ಏನಪ್ಪಾ ಇದು ಎಂದಾಗಲೇ ನಾನು ಮೋಸ ಹೋಗಿದ್ದು ತಿಳಿಯಿತು' ಎಂದು ವೈದ್ಯರು ರಾಜೇಶ್​ಗೆ ಹೇಳಿದ್ದಾರೆ.

'ನಂತರ ಆಕೆ ಕಾಲ್​ ಮಾಡಿ ಹಣದ ಬೇಡಿಕೆ ಇಟ್ಟಳು. ಇಲ್ಲದಿದ್ದರೆ ಸಂಬಂಧಿಕರಿಗೆ ಕಳಿಸುತ್ತೇನೆ, ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುತ್ತೇನೆ ಎಂದುಬಿಟ್ಟಳು. ದುಡ್ಡಿನ ಬೇಡಿಕೆ ಹೆಚ್ಚುತ್ತಲೇ ಹೋಯಿತು. ಈ ವಿಡಿಯೋ ಏನಾದ್ರೂ ನನ್ನ ಹೆಂಡತಿ ಕೈಗೆ ಸಿಕ್ಕರೆ ಅಷ್ಟೇ ಕಥೆ ಎಂದು ಭಯಪಟ್ಟುಕೊಂಡೆ. ಏನು ಮಾಡಬೇಕು ಎಂದು ಗೊತ್ತಾಗ್ತಿಲ್ಲ. ಏನಾದ್ರೂ ಮಾಡು' ಎಂದು ಡಿವೈಎಸ್ಪಿ ರಾಜೇಶ್​  ಮುಂದೆ ವೈದ್ಯ ಗೋಳು ತೋಡಿಕೊಂಡಿದ್ದಾರೆ. ಆ ಬಳಿಕ, ದೂರು ಕೊಟ್ಟಿರುವುದಾಗಿ ಆಕೆಗೆ ತಿಳಿಸು ಎಂದೆಲ್ಲಾ ನಾನು ಹೇಳಿದೆ. ಆತ ಹಾಗೇ ಮಾಡಿದ. ನಂತರ ಅವಳು ಕಾಂಟಾಕ್ಟ್​ ಮಾಡಲಿಲ್ಲ. ಆದರೆ ಆಕೆ ಮಹಾನ್​ ಕಳ್ಳಿ.ಮೊಬೈಲ್​ ನಂಬರ್​ ಸುಲಭದಲ್ಲಿ ಸಿಗುವ ರೀತಿಯಲ್ಲಿ ಈ ವ್ಯವಹಾರ ಮಾಡಿರಲಿಲ್ಲ. ಬೇರೆ ಬೇರೆ ಯಾವುದೊ ನಂಬರ್​ಗೆ ಕನೆಕ್ಟ್​ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದಳು ಎಂದಿರುವ ರಾಜೇಶ್​ ಅವರು, ಯಾವುದೇ ಗೊತ್ತಿಲ್ಲದ ವ್ಯಕ್ತಿಯ ಫ್ರೆಂಡ್​ ರಿಕ್ವೆಸ್ಟ್​ ಅಕ್ಸೆಪ್ಟ್​ ಮಾಡುವಾಗ ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಮಾಹಿತಿ ನೀಡಿದ್ದಾರೆ.  
ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್‌ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್‌

 

Latest Videos
Follow Us:
Download App:
  • android
  • ios