* ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ * ವಿಡಿಯೋ ನಕಲಿ ಎಂದು ತಿಳಿಸಿದ ಸದಾನಂದ ಗೌಡ * ಈ ಬಗ್ಗೆ ಸೈಬರ್ ವಿಭಾಗಕ್ಕೆ ದೂರು ನೀಡಿದ್ದೇನೆ * ಫಾರ್ ವರ್ಡ್ ಮಾಡುವುದು ಶಿಕ್ಷಾರ್ಹ ಅಪರಾಧ

ಬೆಂಗಳೂರು(ಸೆ. 19)  ತಮಗೆ ಸಂಬಂಧಿಸಿದ ಅವಹೇಳನಕಾರಿ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದ್ದು ಈ ಬಗ್ಗೆ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು  ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಸದಾನಂದ ಗೌಡ,  ತಿರುಚಿದ , ನಕಲಿ ವಿಡಿಯೋ ಒಂದು ಹರಿದಾಡುತ್ತಿರುವುದು ತಿಳಿದು ಬಂದಿದೆ.  ಆ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ.  ನನ್ನ ತೇಜೋವಧೆ ಮಾಡಲು ಇಂಥ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜೀನಾಮೆ ಹಿಂದಿನ ಕಾರಣ ತಿಳಿಸಿದ ಸದಾನಂದ ಗೌಡ

ಸೈಬರ್ ಅಪರಾಧ ದಳಕ್ಕೆ ದೂರು ನೀಡಿದ್ದೇನೆ. ಈ ಕೆಲಸ ಮಾಡಿದ ಕಿರಾತಕರ ಬಂಧಿಸಲಾಗುತ್ತದೆ ಎನ್ನುವ ನಂಬಿಕೆ ಇದೆ ಎಂಧು ತಿಳಿಸಿದ್ದಾರೆ.
 
ನ್ಯಾಯಾಲಯದ ಆದೇಶದಂತೆ ಈ ವಿಡಿಯೋ ಅಪ್ ಲೋಡ್ ಮಾಡುವುದು ಮತ್ತು ಫಾರ್ವ್ ವರ್ಡ್ ಮಾಡುವುದು ಸಹ ಶಿಕ್ಷಾರ್ಯ ಅಪರಾಧವಾಗುತ್ತದೆ. ಇಮಥ ಕೃತ್ಯದಲ್ಲಿ ಯಾರಾದಾರೂ ತೊಡಗಿದ್ದು ಕಂಡರೆ ನನಗೆ ಮಾಹಿತಿ ನೀಡಿ ಎಂದು ಕೇಳಿಕೊಂಡಿದ್ದಾರೆ. 

 

Scroll to load tweet…