ಸೂರತ್(ಡಿ.  28)  ಈತ ಕಿಲಾಡಿ ಕೆಲಸ ಒಂದನ್ನು ಮಾಡಿದ್ದಾನೆ. ತನ್ನ ಮಾಜಿ ಗೆಳತಿ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ತೆರೆದು ಆಕೆಯದ್ದೆ ತಿರುಚಿದ ಅಶ್ಲೀಲ ಪೋಟೋಗಳನ್ನು ಆ ಖಾತೆಯ ಮೂಲಕ ಶೇರ್ ಮಾಡಿಕೊಂಡಿದ್ದಾನೆ.

ಮಾಜಿ ಗೆಳತಿ ನೀಡಿದ ದೂರಿನ ಆಧಾರದ ಮೇಲೆ ಪ್ರಯೋಗಾಲಯ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ 26 ವರ್ಷದ ಪಾರ್ಥ್ ನಾಯ್  ನನ್ನು ಬಂಧಿಸಲಾಗಿದೆ.

ಮಕ್ಕಳ ಮೊಬೈಲ್‌ಗೆ ಅಮ್ಮನ ಖಾಸಗಿ ಚಿತ್ರಗಳು

 32 ವರ್ಷದ ಸಂತ್ರಸ್ತೆ ಆಟೋಮೊಬೈಲ್ ಕಂಪನಿಯ ಕಚೇರಿಯಲ್ಲಿ ಟೆಲಿಮಾರ್ಕೆಟಿಂಗ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.  ಮಹಿಳೆ ಮತ್ತು ರಾಯ್ ಐದು ವರ್ಷಗಳ ಕಾಲ ಸಲುಗೆಯಿಂದ ಇದ್ದರು. ಇಬ್ಬರ ನಡುವಿನ ಸಂಬಂಧ ಮುರಿದು ಬಿದ್ದು ವರ್ಷ ಕಳೆದಿತ್ತು. ಇತ್ತೀಚೆಗೆ ಮಹಿಳೆ  ಸಹೋದ್ಯೋಗಿಗಳು ನಿನ್ನ ಹೆಸರಿನ ಖಾತೆಯಲ್ಲಿ ಇಂಥನ ಪೋಟೋಗಳು ಬಂದಿವೆ ಎಂದು ತಿಳಿಸಿದ್ದಾರೆ.

ಸೈಬರ್ ಪೊಲೀಸರು ಪ್ರಕರಣದ ಬೆನ್ನು ಹತ್ತಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಹೇಳುವಂತೆ ಆತನಿಒಗೆ ಸಂಬಂಧ ಮುಂದುವರಿಸುವ ಆಸೆ ಇತ್ತಂತೆ.