*  ಅಬ್ಬರದ ಸಂಗೀತ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಫೈರಿಂಗ್*  ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪಾರ್ಟಿಯಲ್ಲಿದ್ದ ಕೆಲವರು ವಾಗ್ವಾದ*  ದೂರಿನ ಮೇರೆಗೆ ರಾಜೇಶ್‌ ಬಂಧನ  

ಬೆಂಗಳೂರು(ಮಾ.13): ರಾತ್ರಿ ಪಾರ್ಟಿ(Party) ಮಾಡುವಾಗ ಅಬ್ಬರದ ಸಂಗೀತ(Music) ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಬೆದರಿಸಿದ್ದ ನಿವೃತ್ತ ಯೋಧನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಎಸ್‌ ನಿವಾಸಿ ರಾಜೇಶ್‌ ಕುಮಾರ್‌ ಪಾಂಡೆ(44) ಬಂಧಿತ(Arrest). ಆರೋಪಿಯಿಂದ(Accused) ಪಿಸ್ತೂಲ್‌ ಜಪ್ತಿ ಮಾಡಲಾಗಿದೆ. ಮುಂಬೈ ಮೂಲದ ನಿವೃತ್ತ ಯೋಧನಾಗಿರುವ ರಾಜೇಶ್‌, ನಗರದ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಕಚೇರಿಯ ಟೆರೆಸ್‌ ಮೇಲೆ ಪಾರ್ಟಿ ಮಾಡುವಾಗ ಅಬ್ಬರದ ಸಂಗೀತ ಹಾಕಿದ್ದನ್ನು ಸ್ಥಳೀಯ ನಿವಾಸಿ ಸತೀಶ್‌ ರೆಡ್ಡಿ ಎಂಬುವವರು ಪ್ರಶ್ನಿಸಿದ್ದರು. ಈ ವೇಳೆ ರಾಜೇಶ್‌ ಪಿಸ್ತೂಲ್‌ ತೆಗೆದು ಗಾಳಿಯಲ್ಲಿ ಒಂದು ಸುತ್ತು ಗುಂಡು(Firing) ಹಾರಿಸಿ ಬೆದರಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ರಾಜೇಶ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆಯಾಗಿದ್ದೇ ತಪ್ಪಾಯ್ತು.. ಜಿಮ್‌ ತರಬೇತುದಾರನ ಮೇಲೆ ಗುಂಡಿನ ದಾಳಿ!

ಪಿ.ವಿ.ಸುಭೀಶ್‌ ಎಂಬುವರು ಆನಂದ್‌ರಾಮ್‌ ರೆಡ್ಡಿ ಲೇಔಟ್‌ನ ಬಿಜಿನೆಸ್‌ ಎಕ್ಸ್‌ಚೇಂಜ್‌ ಗ್ರೂಪ್‌ ಎಂಬ ಕಂಪನಿ ಆಂಭಿಸಲು ಕಟ್ಟಡವೊಂದನ್ನು ಬಾಡಿಗೆಗೆ ಪಡೆದಿದ್ದರು. ಶುಕ್ರವಾರ ಈ ಕಟ್ಟಡ ಅಗ್ರಿಮೆಂಟ್‌ ಪ್ರಕ್ರಿಯೆ ಮುಗಿಸಲಾಗಿತ್ತು. ಹೀಗಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುಭೀಶ್‌ ಶುಕ್ರವಾರ ರಾತ್ರಿ ಕಟ್ಟಡದ ಟೆರೆಸ್‌ ಮೇಲೆ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ರಾಜೇಶ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅಬ್ಬರ ಸಂಗೀತ ಹಾಕಿಕೊಂಡು ಏರುದನಿಯಲ್ಲಿ ಮಾತನಾಡಿದ್ದರು. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ ಆಗುತ್ತಿತ್ತು.

ಈ ವೇಳೆ ಪಕ್ಕದ ಅಪಾರ್ಟ್‌ಮೆಂಟ್‌ ನಿವಾಸಿ ಸತೀಶ್‌ ರೆಡ್ಡಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪಾರ್ಟಿಯಲ್ಲಿದ್ದ ಕೆಲವರು ವಾಗ್ವಾದಕ್ಕೆ ಇಳಿದಿದ್ದರು. ಅಷ್ಟರಲ್ಲಿ ರಾಜೇಶ್‌ ಏಕಾಏಕಿ ಪಿಸ್ತೂಲ್‌ ತೆಗೆದು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಬೆದರಿಸಿದ್ದರು. ಈ ಸಂಬಂಧ ಶನಿವಾರ ಬೆಳಗ್ಗೆ ಸತೀಶ್‌ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಟೋ ಚಾಲಕನ ಅಪಹರಿಸಿ ಕೊಂದವನ ಮೇಲೆ ಗುಂಡಿನ ದಾಳಿ

ಬೆಂಗಳೂರು: ನಾಲ್ಕು ತಿಂಗಳ ಹಿಂದೆ ಹಣಕ್ಕಾಗಿ ಆಟೋ ಚಾಲಕ(Auto Driver) ವಿಜಯಕುಮಾರ್‌ ಅಪಹರಿಸಿ(Kidnap) ಕೊಲೆಗೈದಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪಹರಣಕಾರನೊಬ್ಬನಿಗೆ ಇಂದಿರಾ ನಗರ ಠಾಣೆ ಪೊಲೀಸರು ಗುಂಡು ಹೊಡೆದು ಡಿ.12 ರಂದು ಬಂಧಿಸಿದ್ದರು.

8 ತಿಂಗಳಿಂದ ತಲೆಮರೆಸಿಕೊಂಡಿದ್ದ ರೌಡಿಗೆ ಗುಂಡು ಹೊಡೆದು ಅರೆಸ್ಟ್‌

ಮೈಕೋ ಲೇಔಟ್‌ ನಿವಾಸಿ ಲೋಹಿತ್‌ ಅಲಿಯಾಸ್‌ ರೋಹಿತ್‌ಗೆ ಗುಂಡೇಟು ಬಿದ್ದಿದ್ದು, ಜೆ.ಬಿ.ನಗರ ಸಮೀಪದ ಚಲ್ಲಘಟ್ಟದಲ್ಲಿ ಶನಿವಾರ ಮುಂಜಾನೆ ಆತನ ಬಂಧನ(Arrest) ಕಾರ್ಯಾಚರಣೆ ವೇಳೆ ಈ ಗುಂಡಿನ ದಾಳಿ(Firing) ನಡೆದಿದೆ. ಈ ವೇಳೆ ಇಂದಿರಾನಗರ ಪೊಲೀಸ್‌ ಕಾನ್‌ಸ್ಟೇಬಲ್‌ ಸೈಯದ್‌ ಮೊಹಿನ್‌ನುಲ್ಲಾ ಅವರಿಗೂ ಪೆಟ್ಟಾಗಿದೆ. ಆಟೋ ಚಾಲಕ ವಿಜಯಕುಮಾರ್‌ ಕೊಲೆ(Murder) ಪ್ರಕರಣದಲ್ಲಿ ತನ್ನ ಸಹಚರರು ಸಿಕ್ಕಿಬಿದ್ದ ಬಳಿಕ ಬಂಧನ ಭೀತಿಯಿಂದ ಲೋಹಿತ್‌ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದರು.

ಕಳೆದ ವರ್ಷದ ಹಿಂದೆ ಕೋಲಾರದಲ್ಲಿ ನಡೆದಿದ್ದ ಮಾಜಿ ಸಚಿವ ಆರ್‌.ವರ್ತೂರು ಪ್ರಕಾಶ್‌(R Vartur Prakash) ಅಪಹರಣ ಪ್ರಕರಣದಲ್ಲಿ ಕೂಡ ಲೋಹಿತ್‌ ಪ್ರಮುಖ ಆರೋಪಿಯಾಗಿದ್ದ. ಮಾಜಿ ಸಚಿವರ ಅಪಹರಣ ಕೃತ್ಯದ ಬಳಿಕ ಹಣಕ್ಕಾಗಿ ಇಂದಿರಾನಗರದಲ್ಲಿ ಆಟೋ ಚಾಲಕ ವಿಜಯ್‌ಕುಮಾರ್‌ ಅವರನ್ನು ಅಪಹರಿಸಿ ಲೋಹಿತ್‌ ಹಾಗೂ ಆತನ ಸಹಚರರು ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ಆತನ 9 ಮಂದಿ ಸಹಚರರ ಬಂಧನವಾಗಿತ್ತು. ಅದರಲ್ಲಿ ಕವಿರಾಜ್‌ ಹಾಗೂ ಅಮರೇಶ್‌ ಎಂಬುವರಿಗೆ ಪೊಲೀಸರು(Police) ಗುಂಡು ಹೊಡೆದಿದ್ದರು. ಆದರೆ ಆಟೋ ಚಾಲಕನ ಹತ್ಯೆ ಬಳಿಕ ನಗರ ತೊರೆದು ಲೋಹಿತ್‌, ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಆ ವೇಳೆ ಬಾಡಿಗೆ ನೆಪದಲ್ಲಿ ಕರೆದೊಯ್ದು ಕ್ಯಾಬ್‌ ಚಾಲಕ ಮೇಲೆ ಹಲ್ಲೆ ನಡೆಸಿ ಆತನಿಂದ ಇನ್ನೋವಾ ಕಾರನ್ನು ಆರೋಪಿ ಕದ್ದಿದ್ದ. ಇದೇ ಕಾರಿನಲ್ಲಿ ಲೋಹಿತ್‌ ಸುತ್ತಾಡುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.