Bengaluru Crime: ಮದ್ಯದ ಅಮಲಿನಲ್ಲಿ ಪೊಲೀಸರಿಗೇ ಗುದ್ದಿದ ಬೈಕ್ ಸವಾರ..!

*  ಬೆಂಗಳೂರಿನ ಪೀಣ್ಯ ಫ್ಲೈ ಓವರ್ ಬಳಿ ನಡೆದ ಘಟನೆ
*  ಬೈಕ್‌ ನಿಲ್ಲಿಸಲು ಹೋದಾಗ ಎಎಸ್‌ಐಗೆ ಡಿಕ್ಕಿ ಹೊಡೆದ ಬೈಕ್
*  ಎಎಸ್‌ಐ ರಾಜಶೇಖರಯ್ಯ ಕೈಗೆ ಗಂಭೀರವಾದ ಗಾಯ

Drunken Man Collision Bike to Traffic Police in Bengaluru grg

ಬೆಂಗಳೂರು(ಮಾ.13): ಬೈಕ್ ಸವಾರನೊಬ್ಬ ಮದ್ಯಪಾನ ಮಾಡಿ ಟ್ರಾಫಿಕ್(Traffic Police) ಎಎಸ್‌ಐಗೆ ಗುದ್ದಿದ ಘಟನೆ ನಗರದ ಪೀಣ್ಯ ಫ್ಲೈ ಓವರ್ ಬಳಿ ನಡೆದಿದೆ. ಪ್ಲೈ ಓವರ್ ಕ್ಲೋಸ್ ಇದ್ದಿದ್ದು ತಿಳಿಯದೇ ವೇಗವಾಗಿ ಬಂದು ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಶೇಖರಯ್ಯ ಅವರಿಗೆ ಗುದ್ದಿದ್ದಾನೆ. 

ಅತನನ್ನ ನಿಲ್ಲಿಸಲು ಹೋದಾಗ ಎಎಸ್‌ಐ ರಾಜಶೇಖರಯ್ಯ ಬೈಕ್ ಡಿಕ್ಕಿ ಹೊಡೆದಿದೆ. ಎಎಸ್‌ಐ ರಾಜಶೇಖರಯ್ಯ ಅವರ ಕೈಗೆ ಗಂಭೀರವಾದ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ರಾಜಶೇಖರಯ್ಯಗೆ ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ. ಯಶವಂತಪುರ ಸಂಚಾರ ಪೊಲೀಸರು(Police) ಬೈಕ್ ಸವಾರನನ್ನ ವಶಕ್ಕೆ ಪಡೆದಿದ್ದಾರೆ. 

Bengaluru Drug Bust: ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್‌ ತುಂಬಿಸಿ ಮಾರಾಟ..!

ನೈಸ್ ರಸ್ತೆಯಲ್ಲಿ ಮೃತದೇಹ ಪತ್ತೆ

ಬೆಂಗಳೂರು: ನೈಸ್ ರಸ್ತೆಯ ಚನ್ನಸಂದ್ರ ಬ್ರಿಡ್ಜ್ ಬಳಿ ಸುಟ್ಟ ಮೃತದೇಹ(Deadbody) ಪತ್ತೆಯಾದ ಘಟನೆ ನಿನ್ನೆ(ಶನಿವಾರ) ರಾತ್ರಿ ಸುಮಾರು 10:30 ರ ಆಸುಪಾಸಿನಲ್ಲಿ ನಡೆದಿದೆ. ಕಾರು ಹೊತ್ತಿ ಉರಿದ ಪರಿಣಾಮ ವ್ಯಕ್ತಿ ಕಾರಿನಲ್ಲೇ ಸುಟ್ಟು ಕರಕಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಯಾಂಟ್ರೋ ಕಾರಿನಲ್ಲಿ ಸುಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನ ದರ್ಶನ್(40) ಎಂದು ಗುರುತಿಸಲಾಗಿದೆ. ಆರ್‌ಆರ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಮೃತ ದರ್ಶನ್ ತುಮಕೂರು ರಸ್ತೆ ಬಳಿ ಸಂಬಂಧಿಕರೊಬ್ಬರ ಫಂಕ್ಷನ್‌ಗೆ ಹೋಗಿ ಬರುವುದಾಗಿ ಹೇಳಿಬಂದಿದ್ದರು. ದರ್ಶನ್ ತ್ಯಾಗರಾಜನಗರದ ಖಾಸಗಿ ಕಂಪನಿಯಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.  ಘಟನಾ ಸ್ಥಳಕ್ಕೆ ಉತ್ತರ ವಿಭಾಗ ಸಂಚಾರ ಡಿಸಿಪಿ ಸವಿತಾ ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಇನ್ನು ಇದೇ ವೇಳೆ ಮಾತನಾಡಿದ ಡಿಸಿಪಿ ಸವಿತಾ, ವ್ಯಕ್ತಿಯ ಮೃತದೇಹ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡು ಬಂದಿದೆ. ಕಾರು ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದನ್ನ ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ್ದರು. ನೈಸ್ ರಸ್ತೆ ಸಿಬ್ಬಂದಿ ಕೂಡಲೇ ಬೆಂಕಿ(Fire) ನಂದಿಸಲು ಯತ್ನಿಸಿದ್ದಾರೆ. ಕಾರಿನ ಒಳಭಾಗದಲ್ಲಿ ವ್ಯಕ್ತಿಯ ಮೃತದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ದರ್ಶನ್ ಉತ್ತರಹಳ್ಳಿ ನಿವಾಸಿಯಾಗಿದ್ದು ಕುಟುಂಬದವರ ಸಂಪರ್ಕ ಮಾಡಿದ್ದೇವೆ. ಸದ್ಯ ಘಟನೆ ಅನುಮಾನಾಸ್ಪದ ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಅಂತ ಮಾಹಿತಿ ನೀಡಿದ್ದಾರೆ.  

ನೇಣು ಹಾಕಿಕೊಂಡು ವೃದ್ಧ ಆತ್ಮಹತ್ಯೆ

ಬೆಂಗಳೂರು: ವೃದ್ಧನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ನಿನ್ನೆ(ಶನಿವಾರ) ಮಧ್ಯರಾತ್ರಿ 1.30 ರ ವೇಳೆಗೆ ಜೀವನ್ ಭೀಮ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವೃದ್ಧನನ್ನ ಕೋದಂಡರಾಮ ವೆಂಕಟ (70) ಎಂದು ಗುರುತಿಸಲಾಗಿದೆ. ಕೋದಂಡರಾಮ ಮನೆಯ ಮುಂದಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮರದಲ್ಲಿ ನೇತಾಡುತ್ತಿದ್ಧ ಮೃತದೇಹವನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಕೋದಂಡರಾಮ ಅವರು ಮಗ ಮತ್ತು ಸೊಸೆ ಜೊತೆ ವಾಸವಾಗಿದ್ದರು. ಮನೆಯಲ್ಲಿ ತಂದೆ ಜೊತೆ ಮಕ್ಕಳನ್ನ ಬಿಟ್ಟು ದೇವಸ್ಥಾನಕ್ಕೆ ತೆರಳಿದ್ದರು ಮಗ ಸೊಸೆ. ಈ ವೇಳೆ ಕೋದಂಡರಾಮ ಅವರು ಮನೆ ಮುಂದಿನ ಮರಕ್ಕೆ  ನೇಣು ಹಾಕಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜೀವನಭೀಮ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಡಿಸೇಲ್‌ ಕದಿಯಲು ಬಂದವರ ಕಾಲಿಗೆ ಗುಂಡೇಟು

ಆನೇಕಲ್(Anekal): ಡಿಸೇಲ್‌ ಕದಿಯಲು ಬಂದವರ ಪೊಲೀಸರು ಗುಂಡಿನ ದಾಳಿ(Firing) ಮಾಡಿದ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಸಮೀಪದಲ್ಲಿ ಇಂದು(ಭಾನುವಾರ) ಬೆಳಿಗ್ಗೆ ನಡೆದಿದೆ. ಡಿಸೇಲ್‌ ಕದಿಯಲು ಬಂದವರ ಕಾಲಿಗೆ ಜಿಗಣಿ ಇನ್ಸ್‌ಪೆಕ್ಟರ್ ಸುದರ್ಶನ್‌ ಗುಂಡು ಹೊಡೆದಿದ್ದಾರೆ. 

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ವೇಳೆ ರಸ್ತೆ ಬದಿ ನಿಲ್ಲಿಸಿಕೊಂಡು ಗಾಢ ನಿದ್ರೆಯಲ್ಲಿರುವವರ ಲಾರಿಗಳಲ್ಲಿ ಕಳ್ಳರು(Thieves) ಡೀಸೆಲ್ ಕದಿಯುತ್ತಿದ್ದರು. ಈ ಖತರ್ನಾಕ್ ಗ್ಯಾಂಗ್ ಟಾಟಾ ಸುಮೋದಲ್ಲಿ ಬಂದು ಲಾರಿಗಳಲ್ಲಿ ಡೀಸೆಲ್(Diesel) ಕದಿಯುತ್ತಿದ್ದರು. 

Bengaluru Crime: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ದಂಧೆ: ಮಹಿಳೆಯರಿಂದಲೇ ಹೇಯ ಕೃತ್ಯ..!

ಆನೇಕಲ್‌ನ ಜಿಗಣಿಯ ಕೆಇಬಿ ಸರ್ಕಲ್ ಬಳಿ ಲಾರಿಯೊಂದರಲ್ಲಿ ಡೀಸೆಲ್ ಕದಿಯುತ್ತಿದ್ದ ವೇಳೆ ಪೊಲೀಸರ ದಾಳಿ ಮಾಡಿದ್ದಾರೆ. ಪೊಲೀಸರ ದಾಳಿಯ ವೇಳೆ ಡೀಸೆಲ್ ಕಳ್ಳರು ಪೊಲೀಸರ ಮೇಲೆಯೇ ಲಾಂಗ್‌ನಿಂದ ಹಲ್ಲೆಗೆ(Assault) ಮುಂದಾಗಿದ್ದರು. ಜಿಗಣಿ ಪೊಲೀಸ್ ಕಾನಸ್ಟೇಬಲ್ ಕೋಟೇಶ್‌ಗೆ ಲಾಂಗ್ ಬೀಸಿ ಹಲ್ಲೆ ಮಾಡಿದ್ದರು ಕಳ್ಳರು. 

ಈ ವೇಳೆ ಜಿಗಣಿ ಇನ್ಸ್‌ಪೆಕ್ಟರ್‌ ಸುದರ್ಶನ್ ಆತ್ಮರಕ್ಷಣೆಗಾಗಿ ಕಳ್ಳರ ಕಾಲಿಗೆ ಗುಂಡು ಹಾರಿಸಿದ್ದಾರೆ. ಶ್ರೀನಿವಾಸ್ ಅಲಿಯಾಸ್ ರಾಜು ಎಡಗಾಲಿಗೆ ಗುಂಡು ಹೊಡೆದು ಬಂಧಿಸಿಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡಿರುವ ಪೊಲೀಸ್ ಕಾನಸ್ಟೇಬಲ್ ಅವರನ್ನೂ ಕೂಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಳಿ ವೇಳೆ ಮಲ್ಲನಗೌಡ ಎಂಬುವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಖದೀಮರು ಪರಾರಿಯಾಗಿದ್ದು‌ ಅವರಿಗಾಗಿ ಪೊಲೀಸರು‌ ಶೋಧ ಕಾರ್ಯ ಆರಂಭಿಸಿದ್ದಾರೆ. 
 

Latest Videos
Follow Us:
Download App:
  • android
  • ios