ಕುಡುಕ ಗಂಡ ಹೆಂಡತಿಯ ಹೆಣ ಮಲಗಿಸಿದ, ಪಾಪ ಪ್ರಜ್ಞೆಯಲ್ಲಿ ನೇಣಿಗೆ ಶರಣಾದ!
ಬೆಳಗಾವಿಯಲ್ಲಿ ಆಸಾಮಿಯೊಬ್ಬ ಎಣ್ಣೆಗಾಗಿ ಹಪಹಪಿಸುತ್ತಿದ್ದ ಆತ ಮನೆಗೆ ಬಂದು ಹೆಂಡತಿಯ ಬಳಿ ಹಣ ಕೇಳಿದ್ದಾನೆ. ಹಣ ನೀಡೊಲ್ಲ ಎಂದಿದ್ದ ಹೆಂಡತಿಯನ್ನ ಕೊಂದು ಪಾಪ ಪ್ರಜ್ಞೆಯಲ್ಲಿ ನೇಣಗೆ ಶರಣಾಗಿದ್ದಾನೆ.
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಮೇ.13): ಆತನದ್ದು ಒಂದೇ ಚಟ ದಿನದ 24 ಗಂಟೆಯೂ ಸಹ ಅವನಿಗೆ ಎಣ್ಣೆಯದ್ದೆ ಚಿಂತೆ. ಎಣ್ಣೆಯಾಗಿ ಆತ ಮಾಡದ ಕೆಲಸ ಇಲ್ಲ ಅಡವಿಡದ ವಸ್ತು ಇಲ್ಲ. ಹೀಗೆ ಎಣ್ಣೆಗಾಗಿ ಹಪಹಪಿಸುತ್ತದ್ದ ಆತ ಮನೆಗೆ ಬಂದು ಹೆಂಡತಿಯ ಬಳಿ ಹಣ ಕೇಳಿದ್ದಾನೆ. ಹಣ ನೀಡೊಲ್ಲ ಎಂದು ಎದುತ್ತರ ನೀಡಿದ ಹೆಂಡತಿಯನ್ನ ಕೊಂದು ಪಾಪ ಪ್ರಜ್ಞೆಯಲ್ಲಿ ನೇಣಗೆ ಶರಣಾದ ಪತಿ!
ಬೆಳಗಾವಿ (Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದ ಬಾಳವ್ವ ಮುತ್ತಪ್ಪ ಬಿರಾಜ್ (33) ತೋಟದ ವಸತಿಯಲ್ಲಿ ತನ್ನ ಮೂರು ಮಕ್ಕಳು ಮತ್ತು ಗಂಡನೊಂದಿಗೆ ವಾಸವಾಗಿದ್ದಳು. ಈ ಫೋಟೊದಲ್ಲಿ ಕಾಣ್ತಿರೋ ಈ ಆಸಾಮಿಯ ಹೆಸರು ಮುತ್ತಪ್ಪ ಬಿರಾಜ್ ಅಂತ ಈ ನರತದೃಷ್ಠ ಹೆಣ್ಣುಮಗಳ ಗಂಡ. ಕಳೆದ ಮಂಗಳವಾರ ಮುತ್ತಪ್ಪ ಸಂಜೆ ಹೊತ್ತಿಗೆ ಎಣ್ಣೆ ಏರಿಸಿಕೊಂಡು ಅರೆಬರೆ ನಶೆಯಲ್ಲಿ ಮನೆಯ ಹಾದಿ ಹಿಡಿದಿದ್ದ ಸಂಬಂಧಿಕರೊಬ್ಬರು ಅಪಘಾತದಲ್ಲಿ ತೀರಿ ಹೋಗಿದ್ದರಿಂದ ಅವರ ಅಂತ್ಯಸ್ಕಾರಕ್ಕಾಗಿ ಸಂಬಂಧಿಕರು ಅಕ್ಕಪಕ್ಕದ ಮನೆಯವರು ಹೋಗಿದ್ದರು.
Cyclone Asani ಹೊತ್ತು ತಂದ ಬೂತಾಯಿ ಮೀನು, ಕರಾವಳಿಗರಿಗೆ ಹಬ್ಬ!
ಮನೆಯಲ್ಲಿ ಮಗ ಹೆಂಡತಿ ಮಾತ್ರ ಇದ್ರು. ಈ ಸಮಯಕ್ಕೆ ಮನೆಗೆ ಬಂದ ಮುತ್ತಪ್ಪ ಹೆಂಡತಿನ್ನ ಹಣ ಕೊಡುವಂತೆ ಕಾಡಲು ಆರಂಭಿಸಿದ್ದಾನೆ. ಯಾವುದೇ ಕಾರಣಕ್ಕೂ ಹಣ ನೀಡಲ್ಲ ಅಂತ ಬಾಳವ್ವ ಮುತ್ತಪ್ಪನೊಂದಿಗೆ ವಾದಿಸಿದ್ದಾಳೆ ಮೊದಲೇ ಅರೆ ಬರೆ ನಶೆಯಲ್ಲಿದ್ದ ಮುತ್ತಪ್ಪ ಪಕ್ಕದಲ್ಲಿಯೇ ಇದ್ದ ಒನಕೆ ತೆಗೆದುಕೊಂಡು ಬಾಳವ್ವನ ತಲೆಗೆ ಗಂಭೀರವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಬಾಳವ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ..
ಕೊಲೆಯಾದ ಬಾಳವ್ವ ಮತ್ತು ಮುತ್ತಪ್ಪ ದಂಪತಿಗಳಿಗೆ ಮೂವರು ಮಕ್ಕಳು ಅದರಲ್ಲಿ ದೊಡ್ಡ ಮಗ ಹಾಗೂ ಕಿರಿಯ ಮಗ ಸಂಬಂಧಿಕರೊಬ್ಬರ ಮನೆಯಲ್ಲಿ ಊಟ ಮಾಡಲಿಕ್ಕೆ ಹೋಗಿದ್ದರು. ಇನ್ನು ಎರಡನೇ ಮಗ ಮನೆಯಲ್ಲಿಯೇ ಇದ್ದ. ತನ್ನ ಎರಡನೇ ಮಗನಿಗೆ ಮುತ್ತಪ್ಪ ಹೊರಗೆ ಕಟ್ಟಿರುವ ಎಮ್ಮೆಗಳಿಗೆ ಮೇವು ಹಾಕಿ ಬಾ ಅಂತ ಹೊರಗೆ ಕಳಿಸಿ ಬಾಳವ್ವನ ತಲೆಗೆ ಗಂಭೀರವಾಗಿ ಹೊಡೆದು ಕೊಲೆ ಮಾಡಿ ಅಲ್ಲಿಂದ ಕಬ್ಬಿನ ಗದ್ದೆಯಲ್ಲಿ ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾನೆ.
Cyclone Asani ಬಿರುಗಾಳಿ ಮಳೆಗೆ ಮೆಕ್ಕೆಜೋಳ ನಾಶ, ಚಿತ್ರದುರ್ಗ ರೈತ ಕಂಗಾಲು
ಹಾಗೆ ತಲೆ ಮರೆಸಿಕೊಂಡ ಮುತ್ತಪ್ಪ ಮಾರನೇ ದಿನ ತಮ್ಮ ತೋಟದಿಂದ ತುಸು ದೂರವಿರುವ ಮೊತ್ತೊಬ್ಬರ ಗದ್ದೆಯಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತಪ್ಪ ಕುಡುಕನಾಗಿದ್ದರೂ ಸಹ ಮನೆ ಮಕ್ಕಳನ್ನು ಬಾಳವ್ವ ಸಲಹುತ್ತಿದ್ದಳು. ಸದ್ಯ ಅಪ್ಪ ಅಮ್ಮ ಇಲ್ಲದೆ ಮಕ್ಕಳ ಸ್ಥಿತಿ ಈ ರೀತಿ ಆಗಿರುವುದಕ್ಕೆ ಮನೆ ಮಂದಿಯಲ್ಲ ಕಣ್ಣೀರಾಗುತ್ತಿದ್ದಾರೆ.
ಎಣ್ಣೆ ಮತ್ತಲ್ಲಿ ಕಟ್ಟಿಕೊಂಡ ಹೆಂಡತಿಯ ಕೊಂದ ಅವನಿಗೆ ಪಾಪಪ್ರಜ್ಞೆ ಕಾಡಿ ಆತನೂ ಸಹ ನೇಣಿಗೆ ಶರಣಾಗಿದ್ದಾನೆ. ಸುಂದರವಾಗಿ ಬಾಳಿ ಬದುಕುವ ಕನಸು ಕಂಡಿದ್ದ ಬಾಳವ್ವನ ಬದುಕು ಸಹ ಅರ್ಧಕ್ಕೆ ಮುಗಿದು ಹೋಗಿದೆ. ಇತ್ತ ಬಾಳವ್ವ ಮತ್ತು ಮುತ್ತೆಪ್ಪನಿಗಿದ್ದ ಮೂವರು ಮಕ್ಕಳು ಮಾತ್ರ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.