ಬೆಂಗಳೂರು(ಜ. 06) ಜಗಳ ಮಾಡ್ಬೇಡಿ ಎಂದು ಬುದ್ಧಿ ಹೇಳಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗದೆ. ಬಿಯರ್ ಬಾಟಲ್ ನಿಂದ ಹೊಡೆದು, ಡ್ರ್ಯಾಗರ್ ನಿಂದ ಚುಚ್ಚಿ ಹಲ್ಲೆ ಮಾಡಲಾಗಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಡಿದ ಆಮಲಿನಲ್ಲಿ ಈ ಎಲ್ಲ ಘಟನೆಗಳು ನಡೆದಿವೆ. ಜಗಳ‌ ಮಾಡುತ್ತಿದ್ದ ಮಂಜುಗೆ ಬುದ್ಧಿ ಹೇಳಿದ ಗಿರೀಶ್ ಎಂಬುವರು ಬುದ್ಧಿಮಾತು ಹೇಳಿದ್ದಾರೆ. ಬುದ್ಧಿ ಹೇಳಿದಕ್ಕೆ ಕೋಪಗೊಂಡ ಮಂಜು ಹುಡುಗರನ್ನು ಕರೆಯಿಸಿಕೊಂಡು ಬಿಯರ್ ಬಾಟೆಲ್ ನಿಂದ ಹಲ್ಲೆ ಮಾಡಿಸಿದ್ದಾನೆ.

ಬಿಯರ್ ಬಾಟಲ್ ನಿಂದ ಹೊಡೆದು, ಡ್ರ್ಯಾಗರ್‌ನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ‌ಗೆ ಒಳಗಾದ ವ್ಯಕ್ತಿ  ವಿನಾಯಕ ನಗರದ ಗಿರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿನಾಯಕ‌‌ ನಗರದಲ್ಲಿರುವ ಶ್ರೀನಿವಾಸ ಬಾರ್ ಬಳಿ ಘಟನೆ ನಡೆದಿದೆ.

ಆರೋಪಿ ಮಂಜು  ಕುಡಿದ ಆಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಅಲ್ಲೇ ಇದ್ದ ಗಿರೀಶ್, ಪರಿಚಿತನಾಗಿದ್ದ ಮಂಜುಗೆ ಬುದ್ಧಿ ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡು ಸಹಚರರನ್ನು ಕರೆಯಿಸಿಕೊಂಡು ಗಿರೀಶ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.