ಬೆಂಗಳೂರು(ಅ.17): ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ಡ್ರಗ್ಸ್‌ ಜಾಲ ಭೇದಿಸಿರುವ ಕಸ್ಟಮ್ಸ್‌ ಅಧಿಕಾರಿಗಳು, ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದ ಸುಮಾರು 79 ಲಕ್ಷ ಮೌಲ್ಯದ ಮಾದಕ ವಸ್ತು ವನ್ನು ವಶಪಡಿಸಿಕೊಂಡಿದ್ದಾರೆ.

ವಿಮಾನದ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನು ಯಮಾರಿಸಿ ಆಸ್ಪ್ರೇಲಿಯಾಕ್ಕೆ ಸ್ಟೀಲ್‌ ಗ್ಯಾಸ್‌ ಸ್ಟೌನಲ್ಲಿ ಡ್ರಗ್ಸ್‌ ತುಂಬಿ ರವಾನಿಸಲು ಕೆಐಎ ಕೋರಿಯರ್‌ ಸೆಂಟರ್‌ಗೆ ಕಿಡಿಗೇಡಿಗಳು ಯತ್ನಿಸಿದ್ದರು. ಆದರೆ ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಸ್ಟಮ್ಸ್‌ ಗುಪ್ತಚರ ವಿಭಾಗದ ಅಧಿಕಾರಿಗಳು, ಕೋರಿಯರ್‌ ಸೆಂಟರ್‌ಗೆ ದಾಳಿ ನಡೆಸಿ ಸ್ಟೀಲ್‌ ಗ್ಯಾಸ್‌ ಸ್ಟೌಅನ್ನು ವಶಪಡಿಸಿಕೊಂಡಿದ್ದಾರೆ. 

ಡ್ರಗ್ಸ್‌ ಕೇಸ್ ಉರುಳು : ಪ್ರಿಯಾಂಕಾ ವಿಚಾರಣೆಗೆ ಗೈರು

ಆಗ ಸ್ಟೌಕಾಲಿನ ಭಾಗ ತುಂಡು ಮಾಡಿ ಶೋಧಿಸಿದಾಗ ಪುಡಿ ರೂಪದಲ್ಲಿ 79 ಲಕ್ಷ ಮೌಲ್ಯದ 1984 ಗ್ರಾಂ ಎಫೆಡ್ರೇನ್‌ ಡ್ರಗ್ಸ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈಗ ಪಾರ್ಸಲ್‌ ವಾರಸುದಾರರ ಪತ್ತೆಗೆ ತನಿಖೆ ನಡೆದಿದೆ.