Asianet Suvarna News Asianet Suvarna News

ಬೆಂಗಳೂರು: ಬಾತ್ಮಿದಾರನ ಹತ್ಯೆಗೆ ರಸ್ತೆಯಲ್ಲೇ ಲಾಂಗ್‌ ಹಿಡಿದು ಪೆಡ್ಲರ್‌ ರೌಂಡ್ಸ್‌

ರಾಜಗೋಪಾಲ ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಬಂದಿದ್ದ ಹುಡುಗರ ಜೊತೆ ಸೇರಿ ಆಯುಬ್‌ ದಂಧೆ ಶುರು ಮಾಡಿದ್ದ. ಈ ಬಗ್ಗೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. 

Drugs Peddlers Arrested for Attempt to Murder Messenger in Bengaluru grg
Author
First Published Dec 14, 2022, 12:00 PM IST

ಬೆಂಗಳೂರು(ಡಿ.14):  ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯನ್ನು ಪೊಲೀಸರಿಗೆ ನೀಡಿದ ಭಾತ್ಮಿದಾರನ ಹತ್ಯೆಗೆ ಪುಂಡರು ಲಾಂಗು ಹಿಡಿದು ಓಡಾಡಿದ ಘಟನೆ ಪೀಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಆಯೂಬ್‌ ಹಾಗೂ ಆತನ ಸಹಚರರು ಬಂಧಿತರು. ಈ ಹಿಂದೆ ಆಯೂಬ್‌ ಹಾಗೂ ರೋಷನ್‌ ಡ್ರಗ್‌ ಕೇಸ್‌ನಲ್ಲಿ ಜೈಲು ಸೇರಿದ್ದರು. ಒಂದು ವರ್ಷದಿಂದ ಗಾಂಜಾ ದಂಧೆ ಬಿಟ್ಟಿದ್ದ ಆಯೂಬ್‌ ಮತ್ತೆ ದಂಧೆ ಶುರು ಮಾಡಿದ್ದ. ರಾಜಗೋಪಾಲ ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಬಂದಿದ್ದ ಹುಡುಗರ ಜೊತೆ ಸೇರಿ ಆಯುಬ್‌ ದಂಧೆ ಶುರು ಮಾಡಿದ್ದ. ಈ ಬಗ್ಗೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. 

Vijayapura: ಒಂಟಿಯಾಗಿ ವಾಸಿಸುವವರೇ ಹುಷಾರ್, ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಅಂದರ್

ಈ ವಿಚಾರ ಗೊತ್ತಾದ ಆಯೂಬ್‌ ‘ನನ್ನ ಬಗ್ಗೆಯೇ ಪೊಲೀಸರಿಗೆ ಹೇಳ್ತೀರಾ?’ ಎಂದು ಲಾಂಗ್‌ ಹಿಡಿದು ಮಾಹಿತಿ ಕೊಟ್ಟವರ ನೆತ್ತರು ಹರಿಸಲು ಏರಿಯಾದಲ್ಲಿ ಹುಡುಕಾಟ ಶುರು ಮಾಡಿದ್ದ. ಆದರೆ ಬೇರೆ ಹುಡುಗರನ್ನು ಏರಿಯಾದಲ್ಲಿ ಅಟ್ಟಾಡಿಸಿದ್ದ ಪುಂಡರ ಕಂಡು ಆತಂಕಗೊಂಡಿದ್ದ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ರಾಜಗೋಪಾಲ ನಗರ ಠಾಣೆಯ ಪೊಲೀಸರು ಆಯೂಬ್‌ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios