ಬೆಂಗಳೂರು, (ಸೆ.04):  ಡ್ರಗ್ಸ್‌ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ನಟಿ ರಾಗಿಣಿ ದ್ವಿವೇದಿಯವರನ್ನ  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

"

ಮೊಬೈಲ್ ಮುಟ್ಟಿದ್ದಕ್ಕೆ ಪೊಲೀಸರಿಗೆ ರಾಗಿಣಿ ವಾರ್ನಿಂಗ್!

ಇಂದು (ಶುಕ್ರವಾರ) ರಾಗಿಣಿ ನಿವಾಸದ ಮೇಲೆ ಸಿಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ನಂತರ ಸಿಸಿಬಿ ಕಚೇರಿಗೆ ಕರೆದೊಯ್ದು ವಿಚಾರಣೆಗೊಳಪಡಸಲಾಗಿತ್ತು. ಇದೀಗ ಅವರನ್ನ ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ಇದಕ್ಕೂ ಮೊದಲು ರಾಗಿಣಿ ಆಪ್ತ ರವಿಶಂಕರ್​ನನ್ನು ಸಿಸಿಬಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಸಾಕಷ್ಟು ಮಾಹಿತಿಯನ್ನು ರವಿಶಂಕರ್ ನೀಡಿದ್ದ. ನಾನು ರಾಗಿಣಿ ಜತೆ ಲಿವಿಂಗ್ ಟುಗೆದರ್ ಶಿಪ್​ನಲ್ಲಿದ್ದೀನಿ ಎಂದು ಒಪ್ಪಿಕೊಂಡಿದ್ದ.

ಆರ್​ಟಿಒ ಅಧಿಕಾರಿಯಾಗಿ ತಿಂಗಳಿಗೆ 30 ರಿಂದ 35 ಸಾವಿರ ರೂ. ಸಂಬಳ ಪಡೆಯುವ ರವಿಶಂಕರ್​, ರಾಗಿಣಿಗೆ ಒಂದು ಲಕ್ಷ ರೂ. ಖರ್ಚು ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಹೇಳಿದ್ದ. ಹೀಗಾಗಿ ಆತನ ಆದಾಯದ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು.
ಬೆಂಗಳೂರು, (ಸೆ.04):  ಡ್ರಗ್ಸ್‌ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ನಟಿ ರಾಗಿಣಿ ದ್ವಿವೇದಿಯವರನ್ನ  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.