ಬಾಯ್ಬಿಟ್ಟ ರಿಯಾ, 25 ಬಾಲಿವುಡ್ ಖ್ಯಾತ ತಾರೆಯರಿಗೆ ನಡುಕ!
25 ಬಾಲಿವುಡ್ ತಾರೆಗಳಿಗೆ ಡ್ರಗ್ಸ್ ಕಂಟಕ?| ಹೆಸರು ಬಾಯ್ಬಿಟ್ಟಸುಶಾಂತ್ ಮಾಜಿ ಪ್ರೇಯಸಿ ರಿಯಾ| ಸೆಲೆಬ್ರಿಟಿಗಳಿಗೆ ನಡುಕ
ಮುಂಬೈ(ಸೆ.10): ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಸುಶಾಂತ್ ಸಿಂಗ್ ರಜಪೂತ್‌ನ ಪ್ರೇಯಸಿ ರಿಯಾ ಚಕ್ರವರ್ತಿ ಬಂಧನಕ್ಕೊಳಗಾದ ಬೆನ್ನಲ್ಲೇ ಹಿಂದಿ ಚಿತ್ರರಂಗದ ಖ್ಯಾತನಾಮರಲ್ಲಿ ಭಾರೀ ನಡುಕ ಆರಂಭವಾಗಿದೆ. ಮಂಗಳವಾರ ಬಂಧನಕ್ಕೊಳಗಾಗುವ ಮುನ್ನ 3 ದಿನ ಎನ್‌ಸಿಬಿ ವಿಚಾರಣೆಗೆ ಒಳಪಟ್ಟಿದ್ದ ರಿಯಾ, ಈ ವೇಳೆ ಬಾಲಿವುಡ್‌ನಲ್ಲಿ ಮಾದಕ ವಸ್ತು ಸೇವನೆ ಅಭ್ಯಾಸ ಹೊಂದಿರುವ 25 ಸೆಲೆಬ್ರೆಟಿಗಳ ಹೆಸರನ್ನು ಬಹಿರಂಗಪಡಿಸಿದ್ದಾಳೆ ಎನ್ನಲಾಗಿದೆ.
ರಿಯಾ ಹೀಗೆ ಹೆಸರು ಬಹಿರಂಗ ಮಾಡಿರುವವರಲ್ಲಿ ಹಲವು ಖ್ಯಾತ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದ್ದಾರೆ ಎನ್ನಲಾಗಿದೆ. ಹೀಗೆ ಹೆಸರುಗಳು ಬೆಳಕಿಗೆ ಬಂದ ಬೆನ್ನಲ್ಲೇ ಅಧಿಕಾರಿಗಳು ಸೆಲೆಬ್ರಿಟಿಗಳ ಮಾದಕ ವಸ್ತು ಸೇವನೆಯ ಪೂರ್ವಾಪರ ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಅವರಿಗೆಲ್ಲಾ ಶೀಘ್ರವೇ ಎನ್‌ಸಿಬಿ ನೋಟಿಸ್ ಜಾರಿ ಮಾಡಲಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಹೀಗಾಗಿ ರಿಯಾ ನಂಟು ಹೊಂದಿರುವ ಮತ್ತು ಬಾಲಿವುಡ್‌ನಲ್ಲಿ ಮಾದಕ ವಸ್ತು ಸೇವನೆಯ ಇತಿಹಾಸ ಹೊಂದಿರುವ ಸೆಲೆಬ್ರೆಟಿಗಳ ಎದೆಯಲ್ಲಿ ಢವ ಢವ ಆರಂಭವಾಗಿದೆ.
ಮುಂಬೈ: ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಸುಶಾಂತ್ ಸಿಂಗ್ ರಜಪೂತ್‌ನ ಪ್ರೇಯಸಿ ರಿಯಾ ಚಕ್ರವರ್ತಿ ಬಂಧನಕ್ಕೊಳಗಾದ ಬೆನ್ನಲ್ಲೇ ಹಿಂದಿ ಚಿತ್ರರಂಗದ ಖ್ಯಾತನಾಮರಲ್ಲಿ ಭಾರೀ ನಡುಕ ಆರಂಭವಾಗಿದೆ. ಮಂಗಳವಾರ ಬಂಧನಕ್ಕೊಳಗಾಗುವ ಮುನ್ನ 3 ದಿನ ಎನ್‌ಸಿಬಿ ವಿಚಾರಣೆಗೆ ಒಳಪಟ್ಟಿದ್ದ ರಿಯಾ, ಈ ವೇಳೆ ಬಾಲಿವುಡ್‌ನಲ್ಲಿ ಮಾದಕ ವಸ್ತು ಸೇವನೆ ಅಭ್ಯಾಸ ಹೊಂದಿರುವ 25 ಸೆಲೆಬ್ರೆಟಿಗಳ ಹೆಸರನ್ನು ಬಹಿರಂಗಪಡಿಸಿದ್ದಾಳೆ ಎನ್ನಲಾಗಿದೆ.
ರಿಯಾ ಹೀಗೆ ಹೆಸರು ಬಹಿರಂಗ ಮಾಡಿರುವವರಲ್ಲಿ ಹಲವು ಖ್ಯಾತ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದ್ದಾರೆ ಎನ್ನಲಾಗಿದೆ. ಹೀಗೆ ಹೆಸರುಗಳು ಬೆಳಕಿಗೆ ಬಂದ ಬೆನ್ನಲ್ಲೇ ಅಧಿಕಾರಿಗಳು ಸೆಲೆಬ್ರಿಟಿಗಳ ಮಾದಕ ವಸ್ತು ಸೇವನೆಯ ಪೂರ್ವಾಪರ ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಅವರಿಗೆಲ್ಲಾ ಶೀಘ್ರವೇ ಎನ್‌ಸಿಬಿ ನೋಟಿಸ್ ಜಾರಿ ಮಾಡಲಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಹೀಗಾಗಿ ರಿಯಾ ನಂಟು ಹೊಂದಿರುವ ಮತ್ತು ಬಾಲಿವುಡ್‌ನಲ್ಲಿ ಮಾದಕ ವಸ್ತು ಸೇವನೆಯ ಇತಿಹಾಸ ಹೊಂದಿರುವ ಸೆಲೆಬ್ರೆಟಿಗಳ ಎದೆಯಲ್ಲಿ ಢವ ಢವ ಆರಂಭವಾಗಿದೆ.
ಜಾಮೀನು ಅರ್ಜಿ:
ಈ ನಡುವೆ ಜಾಮೀನು ಕೋರಿ ರಿಯಾ ಮತ್ತು ಆಕೆಯ ಸೋದರ ಶೋವಿಕ್ ಸಲ್ಲಿಸಿರುವ ಅರ್ಜಿ ಗುರುವಾರ ವಿಚಾರಣೆಗೆ ಬರಲಿದೆ.
ಈ ನಡುವೆ ಜಾಮೀನು ಕೋರಿ ರಿಯಾ ಮತ್ತು ಆಕೆಯ ಸೋದರ ಶೋವಿಕ್ ಸಲ್ಲಿಸಿರುವ ಅರ್ಜಿ ಗುರುವಾರ ವಿಚಾರಣೆಗೆ ಬರಲಿದೆ.