ಕಲಬುರಗಿ: ಕುರಿ ದೊಡ್ಡಿಯಲ್ಲಿ ಕೋಟ್ಯಂತರ ರು. ಗಾಂಜಾ ಇಟ್ಟವನ ಹಿಸ್ಟರಿಯೇ ಬಲು ರೋಚಕ..!

ಚಂದ್ರಕಾಂತ ಹಿಂದಿವೆ ಕಾಣದ ದೊಡ್ಡ ದೊಡ್ಡ ಕೈಗಳು|  ಕಲಬುರಗಿ ಜಿಲ್ಲೆಯಲ್ಲಿ ಇನ್ನು ಎಲ್ಲಿಲ್ಲಿ ಸುಟ್ಟಿಕೊಳ್ಳುತ್ತೋ ಈ ಗಾಂಜಾ ಘಾಟು?| ಮುಂಬೈ, ತೆಲಂಗಾಣ, ಒಡಿಶಾದ ರಾಜ್ಯದವರೆಗೂ ಗಾಂಜಾ ದಂಧೆಯ ನೆಟ್‌ವರ್ಕ್ ವಿಸ್ತರಣೆ| 

Drugs Mafia Case Accused Chandrakant Chauhan History

ಕಲಬುರಗಿ(ಸೆ.11): ಜಿಲ್ಲೆಯ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ ತಾಂಡಾದ ಕುರಿ ದೊಡ್ಡಿಯ ನೆಲ ಮಾಳಿಗೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 6 ಕೋಟಿ ರೂ. ಮೌಲ್ಯದ ಗಾಂಜಾ ಸಿಕ್ಕ ಸುದ್ದಿ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಹೀಗೆ ಕುರಿ ದೊಡ್ಡಿಯಲ್ಲಿ ಗಾಂಜಾ ಇಟ್ಟ ಚಂದ್ರಕಾಂತ ಚೌಹಾಣ್‌ನ ಹಿಸ್ಟರಿಯೇ ಬಲು ರೋಚಕವಾಗಿದೆ. 

"

ಹೌದು, ಲಕ್ಷ್ಮಣ ನಾಯಕ ತಾಂಡಾದ ನಿವಾಸಿ ಚಂದ್ರಕಾಂತ ಚೌಹಾಣ್ ಹುಟ್ಟಿದ್ದು ಕಲಬುರಗಿಯಲ್ಲಿ ಬೆಳೆದಿದ್ದು ಮಾತ್ರ ಮುಂಬೈನಲ್ಲಿ. ಕಳೆದ‌ ಆರು ವರ್ಷಗಳ ಹಿಂದೆ ಚಂದ್ರಕಾಂತ ಮುಂಬೈ ಬಿಟ್ಟು ಕಲಬುರಗಿ ಸೇರಿಕೊಂಡಿದ್ದನು. ಕಲಬುರಗಿಗೆ ಬಂದ ಆರಂಭದಲ್ಲಿ ಟೆಂಪೋ ಟ್ರಾವೆಲರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.  

ಅಪಘಾತದವೊಂದರಲ್ಲಿ  ಟೆಂಪೋ ಟ್ರಾವೆಲರ್ ನುಜ್ಜು ಗುಜ್ಜಾಗಿ ಹಣಕಾಸಿನ ವಹಿವಾಟಿನಲ್ಲಿ ಚಂದ್ರಕಾಂತ ಚೌಹಾಣ್‌ ಕೈ ಸುಟ್ಟುಕೊಂಡಿದ್ದನು. ಬಳಿಕ ಕೋಳಿ ಮತ್ತು ಕುರಿ ಫಾರ್ಮ್‌ವೊಂದನ್ನು ತೆರೆದಿದ್ದ, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಚಂದ್ರಕಾಂತ ಹಲವು ವರ್ಷಗಳಿಂದ ಸುಧಾರಿಸಿದ್ದ ಎಂದು ಹೇಳಲಾಗುತ್ತಿದೆ.  

ತಾಂಡಾದಲ್ಲಿಯೂ ರಹಸ್ಯ : ಕುರಿ ಶೆಡ್‌ ನೆಲಮಾಳಿಗೆಯಲ್ಲಿ ಕ್ವಿಂಟನ್‌ಗಟ್ಟಲೆ ಗಾಂಜಾ!

ಹೆಸರಿಗೆ ಮಾತ್ರ ಕೊಳಿ ಕುರಿ ಫಾರ್ಮ್...

ಹೆಸರಿಗೆ ಮಾತ್ರ ಕೊಳಿ ಕುರಿ ಫಾರ್ಮ್ ಆದ್ರೆ ಒಳಗಡೆ ನೆಡಯುತ್ತಿದ್ದು ಮಾತ್ರ ಗಾಂಜಾ ದಂಧೆಯಾಗಿತ್ತು. ಚಂದ್ರಕಾಂತ ಲಾಸ್ ಆಗಿದ್ದ ಹಣವನ್ನ ಗಾಂಜಾ ದಂಧೆಯಲ್ಲಿ ರಿಕವರಿ ಮಾಡೋದಕ್ಕೆ ಮುಂದಾಗಿದ್ದನಂತೆ. ಚಂದ್ರಕಾಂತ ಒಡಿಶಾದ ಮೂಲಕ ತೆಲಂಗಾಣಕ್ಕೆ ಗಾಂಜಾ ತರಿಸಿಕೊಂಡು ಬಳಿಕ ತೆಲಂಗಾಣದಿಂದ ತರಕಾರಿ ತರುವ ವಾಹನದಲ್ಲಿ ಗಾಂಜಾ ತಂದು ಕಲಬುರಗಿಯ ಕುರಿ ದೊಡ್ಡಿಯಲ್ಲಿ ಶೇಖರಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 
ಕಲಬುರಗಿ ಜಿಲ್ಲೆಯ ಕಾಳಗಿಯಿಂದಲೇ ಚಂದ್ರಕಾಂತ ರಾಜ್ಯದ ಮೂಲೆ ಮೂಲೆಗೆ ಗಾಂಜಾ ಸಪ್ಲೈ ಮಾಡುತ್ತಿದ್ದ, ಕಳೆದ ಎರಡು ವರ್ಷಗಳಿಂದ ಬಿಂದಾಸ್ ಆಗಿ ಗಾಂಜಾ ಮಾರಾಟ ಮಾಡಿಕೊಂಡಿದ್ದ ಚಂದ್ರಕಾಂತ್, ಈ ದಂಧೆಯಿಂದಲೇ 18 ಲಕ್ಷ ರೂ. ಸಾಲ ತೀರಿಸಿದ್ದನಂತೆ. 

ಮುಂಬೈ, ತೆಲಂಗಾಣ, ಒಡಿಶಾದವರೆಗೂ ಗಾಂಜಾ ದಂಧೆ ವಿಸ್ತರಣೆಸ

ಹೀಗೆ ಗಾಂಜಾ ದಂಧೆ ಚೆನ್ನಾಗಿ ನಡೆಯುತ್ತಿದ್ದ ಹಾಗೆ ಜೆಸಿಬಿ, ಟಿಪ್ಪರ್‌ಗಳನ್ನ ಖರಿದಿಸಿ, ತನ್ನ ಗಾಂಜಾ ದಂಧೆಯ ನೆಟ್ ವರ್ಕ್ ಮುಂಬೈ, ತೆಲಂಗಾಣ, ಒಡಿಶಾದ ರಾಜ್ಯದವರೆಗೂ ವಿಸ್ತರಿಸಿಕೊಂಡಿದ್ದನು. ಚಂದ್ರಕಾಂತನ ಹಿಂದೆ ಮುಂಬೈ ಮತ್ತು ತೆಲಂಗಾಣದ ದೊಡ್ಡ ದೊಡ್ಡ ಕುಳಗಳ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಇದರ ಅಸಲಿ ಕಹಾನಿ ಪೊಲೀಸರ ವಿಚಾರಣೆಯಿಂದ ಬಯಲಾಗಬೇಕಿದೆ. 
 

Latest Videos
Follow Us:
Download App:
  • android
  • ios