Asianet Suvarna News Asianet Suvarna News

ಡ್ರಗ್ಸ್‌ ಕೇಸ್‌: ಆದಿತ್ಯ ಆಳ್ವಗೆ ಡೋಪ್‌ ಟೆಸ್ಟ್‌

ರಕ್ತ, ತಲೆಕೂದಲು, ಉಗುರು, ಮೂತ್ರ ಸಂಗ್ರಹ| ವೈದ್ಯಾ​ಧಿ​ಕಾ​ರಿ​ಗಳ ಸಮ್ಮು​ಖ​ದಲ್ಲಿ ಆರೋಪಿಯಿಂದ ಉದ್ದೀ​ಪನ ಮದ್ದು ಸೇವನೆ ಪರೀ​ಕ್ಷೆ| 

Doping Test to Aditya Alva on Drug Mafia Case grg
Author
Bengaluru, First Published Jan 15, 2021, 8:19 AM IST

ಬೆಂಗಳೂರು(ಜ.15): ಮಾದಕ ವಸ್ತು ಮಾರಾಟ ಜಾಲ ಪ್ರಕ​ರ​ಣಕ್ಕೆ ಸಂಬಂಧಿಸಿದಂತೆ ಬಂಧ​ನ​ಕ್ಕೊ​ಳ​ಗಾ​ಗಿ​ರುವ ಮಾಜಿ ಸಚಿವ ಜೀವ​ರಾಜ್‌ ಆಳ್ವ ಅವರ ಪುತ್ರ ಆದಿತ್ಯ ಆಳ್ವ​ನನ್ನು ಡೋಪಿಂಗ್‌(ಉ​ದ್ದೀ​ಪನ ಮದ್ದು ಸೇವನಾ​) ಪರೀ​ಕ್ಷೆ​ಗೆ ಒಳ​ಪ​ಡಿ​ಸ​ಲಾಗಿದೆ. 

ಬುಧವಾರ ಮಲ್ಲೇ​ಶ್ವ​ರ​ದ​ಲ್ಲಿ​ರುವ ಕೆ.ಸಿ.​ಜ​ನ​ರಲ್‌ ಆಸ್ಪ​ತ್ರೆಗೆ ಸಿಸಿಬಿ ಇನ್‌​ಸ್ಪೆ​ಕ್ಟರ್‌ ಪುನೀತ್‌ ನೇತೃ​ತ್ವದ ತಂಡ ಆರೋಪಿಯನ್ನು ಕರೆದೊಯ್ಯಿತು. ಹಿರಿಯ ವೈದ್ಯಾ​ಧಿ​ಕಾ​ರಿ​ಗಳ ಸಮ್ಮು​ಖ​ದಲ್ಲಿ ಆರೋಪಿಯಿಂದ ಉದ್ದೀ​ಪನ ಮದ್ದು ಸೇವನೆ ಪರೀ​ಕ್ಷೆಗೆ ಬೇಕಾ​ಗಿ​ರುವ ರಕ್ತದ ಮಾದರಿ, ತಲೆ​ಕೂ​ದಲು, ಉಗುರು ಹಾಗೂ ಮೂತ್ರ ಸಂಗ್ರ​ಹಿ​ಸ​ಲಾ​ಗಿದೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ, 4 ತಿಂಗಳ ಬಳಿಕ ಆರೋ​ಪಿ ಸಿಕ್ಕಿ​ಬಿ​ದ್ದಿದ್ದಾನೆ. ಈಗ ಡೋಪಿಂಗ್‌ ಪರೀ​ಕ್ಷೆ​ಗೊ​ಳ​ಪ​ಡಿ​ಸು​ತ್ತಿ​ರು​ವು​ದ​ರಿಂದ ಆರೋ​ಪಿ ಮಾದಕ ವಸ್ತು ಸೇವಿಸಿರುವುದು ದೃಢಪಡುವುದು ಅನು​ಮಾನ ಎಂದು ಹೇಳ​ಲಾ​ಗಿದೆ.

ಡ್ರಗ್ಸ್ ಕೇಸ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವಾ ಬಂಧನ

ಆದರೆ, ತಲೆ​ಮ​ರೆ​ಸಿ​ಕೊಂಡಿದ್ದ ಸಂದ​ರ್ಭ​ದಲ್ಲೂ ಆದಿತ್ಯ ಆಳ್ವ ಡ್ರಗ್ಸ್‌ ಸೇವನೆ ಮಾಡು​ತ್ತಿದ್ದ ಎಂದು ಹೇಳ​ಲಾ​ಗಿದೆ. ಜತೆಗೆ ಕೆಲ​ ಸಂದ​ರ್ಭ​ದಲ್ಲಿ ಆರೋ​ಪಿಗಳ ದೇಹ​ದಲ್ಲಿ ಕನಿಷ್ಠ ಆರು ತಿಂಗ​ಳು ಕಾಲ ಡ್ರಗ್ಸ್‌ನ ಅಂಶ ಪತ್ತೆ​ಯಾ​ಗಿ​ರು​ವ ಉದಾ​ಹ​ರ​ಣೆ​ಗ​ಳಿವೆ. ಹೀಗಾಗಿ ಆರೋ​ಪಿ​ಯನ್ನು ಪರೀ​ಕ್ಷೆ​ಗೊ​ಳ​ಪ​ಡಿ​ಸ​ಲಾ​ಗಿದೆ ಎಂದು ಮೂಲ​ಗಳು ತಿಳಿ​ಸಿ​ವೆ.

ನಾಲ್ಕು ತಿಂಗಳ ಕಾಲ ನಾಪ​ತ್ತೆ​ಯಾ​ಗಿದ್ದ ಆದಿತ್ಯ ಆಳ್ವ​ ತಮಿ​ಳು​ನಾ​ಡಿನ ಚೆನ್ನೈ ಹೊರವಲ​ಯದ ಓಲ್ಡ್‌ ಮಹಾ​ಬ​ಲಿ​ಪುರಂ ರಸ್ತೆಯ ಕಣ​ತ್ತೂರು ಬಳಿಯ ರೆಸಾ​ರ್ಟ್‌​ವೊಂದ​ರಲ್ಲಿ 15 ದಿನ​ಗ​ಳಿಂದ ವಾಸ​ವಾ​ಗಿದ್ದ. ಇತ್ತೀ​ಚೆಗೆ ಬೆಂಗ​ಳೂ​ರಿ​ನ​ಲ್ಲಿದ್ದ ತನ್ನ ಮನೆಯ ಬಾಣ​ಸಿ​ಗ​ನಿಗೆ ಕರೆ ಮಾಡಿ ಚೆನ್ನೈನ ರೆಸಾ​ರ್ಟ್‌ಗೆ ಬರು​ವಂತೆ ಹೇಳಿದ್ದ. ಬಾಣ​ಸಿ​ಗನ ಮೇಲೆ ನಿಗಾ​ವ​ಹಿ​ಸಿದ್ದ ಪೊಲೀ​ಸರು ಏಕಾ​ಏಕಿ ಚೆನ್ನೈಗೆ ಹೊರಟ ಬಾಣ​ಸಿ​ಗ​ನನ್ನು ಹಿಂಬಾ​ಲಿ​ಸಿದಾಗ ರೆಸಾ​ರ್ಟ್‌​ನಲ್ಲಿ ಆದಿತ್ಯ ಆಳ್ವ ಸಿಕ್ಕಿ​ ಬಿ​ದ್ದಿ​ದ್ದ.

ಎರಡು ತಿಂಗ​ಳ ​ಹಿಂದೆ ಕೋರ್ಟ್‌ ಅನು​ಮತಿ ಪಡೆದು ನಟಿ ರಾಗಿಣಿ, ಸಂಜನಾ ಗಲ್ರಾ​ನಿಯ ಕೂದಲು ಪಡೆದು ಡೋಪಿಂಗ್‌ ಪರೀ​ಕ್ಷೆಗೊಳ​ಪ​ಡಿ​ಸ​ಲಾ​ಗಿತ್ತು. ಆದರೆ, ಇದು​ವ​ರೆಗೂ ವರದಿ ಬಂದಿಲ್ಲ. ಇಂತಹ ವರ​ದಿ​ಗೆ ಕನಿಷ್ಠ ಮೂರಿಂದ ನಾಲ್ಕು ತಿಂಗಳು ಬೇಕಾ​ಗು​ತ್ತ​ದೆ. ಅನಂತ​ರವೇ ಪರೀಕ್ಷಾ ವರ​ದಿ​ಯನ್ನು ಕೋರ್ಟ್‌ಗೆ ಸಲ್ಲಿ​ಸ​ಬೇಕು. ಇದೀಗ ಆದಿತ್ಯ ಆಳ್ವನ ಮಾದರಿ ಪಡೆ​ದುಕೊಳ್ಳ​ಲಾ​ಗಿದ್ದು, ವರದಿಗೆ ಕನಿಷ್ಠ ನಾಲ್ಕು ತಿಂಗಳು ಬೇಕಾ​ಗು​ತ್ತದೆ ಎಂದು ಮೂಲ​ಗಳು ತಿಳಿ​ಸಿ​ವೆ.
 

Follow Us:
Download App:
  • android
  • ios