ಡ್ರಗ್ಸ್ ಕೇಸ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವಾ ಬಂಧನ
ಕಾಟನ್ ಪೇಟೆ ಡ್ರಗ್ಸ್ ಕೇಸ್ ಪ್ರಕರಣ| ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವಾ ಬಂಧನ| ಸಿಸಿಬಿ ಪೊಲೀಸರಿಂದ ಬಂಧನ| ನಿನ್ನೆ ರಾತ್ರಿ ಚೆನೈ ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು.
ಚೆನ್ನೈ(ಜ.12): ಕಾಟನ್ ಪೇಟೆ ಡ್ರಗ್ಸ್ ಕೇಸ್ ಪ್ರಕರಣದ A6 ಆರೋಪಿ, ಕಳೆದ ನಾಲ್ಕು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾರನ್ನು ಸೋಮವಾರ ರಾತ್ರಿ ಸಿಸಿಬಿ ಪೊಲೀಸರು ಚನ್ನೈನಲ್ಲಿ ಬಂಧಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಆದಿತ್ಯನಿಗಾಗಿ ಬಲೆ ಬೀಸಿದ ಸಿಸಿಬಿ ಪೊಲೀಸರು, ಲುಕ್ ಔಟ್ ನೋಟಿಸ್ ಕೂಡಾ ಹೊರಡಿಸಿದ್ದರು. ಅನೇಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂಬ ಆರೋಪ ಇವರ ಮೇಲಿತ್ತು.
"
ಪಾರ್ಟಿ ಆಯೋಜನೆಯಲ್ಲಿ ಆದಿತ್ಯ ಪಾತ್ರ:
ಪೇಜ್ ತ್ರಿ ಪಾರ್ಟಿ ಆಯೋಜಕ ಕಿಂಗ್‌ಪಿನ್ ವೀರೇನ್ ಸಹವಾಸದಿಂದ ಆದಿತ್ಯ ಆಳ್ವ ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದಾರೆ. ಆದಿತ್ಯ, ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಉದ್ಯಮ ನಡೆಸುತ್ತಿದ್ದು, ವೀರೇನ್ ಜತೆ ಸೇರಿ ನಗರಗಳಲ್ಲಿ ಪಾರ್ಟಿಗಳನ್ನು ಸಂಘಟಿಸುತ್ತಿದ್ದರು. ತನ್ನ ಭಾವ ವಿವೇಕ್ ಒಬೆರಾಯ್ ಮೂಲಕ ಆತನಿಗೆ ಚಲನಚಿತ್ರ ರಂಗದ ನಂಟು ಬೆಳೆದಿತ್ತು. ಈ ಗೆಳೆತನದಲ್ಲೇ ಆದಿತ್ಯ ತಾನು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಗ್ರಾಹಕರನ್ನು ಸೆಳೆಯಲು ಸಿನಿಮಾ ನಟಿ-ನಟರನ್ನು ಆಹ್ವಾನಿಸುತ್ತಿದ್ದರ ಎಂದು ತಿಳಿದುಬಂದಿದೆ.
ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವ
ಜನತಾ ಪರಿವಾರದ ಹಿರಿಯ ರಾಜಕಾರಣಿ ಜೀವರಾಜ್ ಆಳ್ವ ಅವರು 80ರ ದಶಕದಲ್ಲಿ ಪ್ರಭಾವಿ ಮುಖಂಡರಾಗಿದ್ದರು. ರಾಜ್ಯ ಜನತಾ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಪತ್ನಿ ನಂದಿನಿ ಆಳ್ವ ಖ್ಯಾತ ನೃತ್ಯಗಾತಿಯಾಗಿದ್ದು, ಬೆಂಗಳೂರು ಉತ್ಸವ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ತೊಡಗಿದ್ದಾರೆ. ಈ ದಂಪತಿಗೆ ಆದಿತ್ಯ ಆಳ್ವ ಮತ್ತು ಪ್ರಿಯಾಂಕ ಆಳ್ವ ಮಕ್ಕಳು. ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಪ್ರಿಯಾಂಕ ಆಳ್ವ ಮದುವೆಯಾಗಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ