ಬೆಂಗಳೂರು[ಜ. 13] ಸೆಲ್ಫಿ ವಿಡಿಯೋ ಮಾಡಿ ವಿವಾಹಿತರೊಬ್ಬರು ಆತ್ಮಹತ್ಯೆ ಯತ್ತಿಸಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ರಂಗನಾಥ್ ಅಲಿಯಾಸ್ ಕೇಬಲ್ ರಂಗ (30) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಕೆ.ಆರ್. ಪುರಂ ದೇವಸಂದ್ರ ಪ್ರಿಯದರ್ಶಿನಿ ಲೇಔಟ್ ನಲ್ಲಿ ಘಟನೆ  ನಡೆದಿದೆ. ಕೌಟುಂಬುಕ ಕಲಹದ ಕಾರಣಕ್ಕೆ ಪತ್ನಿ ಇವರಿಂದ ದೂರ ಆಗಿದ್ದರು. ಮೈಸೂರು ಮೂಲದ ಭವ್ಯಶ್ರೀ ಎಂಬುವರನ್ನು ರಂಗನಾಥ್ ವಿವಾಹ ಆಗಿದ್ದರು. ಮೂರು ವರ್ಷದ ಹಿಂದೆ ಇಬ್ಬರು ಲವ್ ಮ್ಯಾರೇಜ್ ಆಗಿದ್ದರು. 

ಶೀಲ ಶಂಕಿಸಿದ ಪ್ರಿಯತಮ: ಸುಳ್ಳೆಂದು ಪ್ರೂವ್ ಮಾಡಲು ಹೋದ ಪ್ರಿಯತಮೆ

ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಹಾಕಿಕೊಳ್ಳಲು ಯತ್ನಿಸಿ ಅಸ್ವಸ್ಥಗೊಂಡಿದ್ದ ರಂಗ ಅವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಂಗನಾಥ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.