ನಮಾಜ್‌ಗೆ ಹೋಗುತ್ತಿದ್ದ ಬಾಲಕನ ಮೇಲೆ 15 ನಾಯಿಗಳು ದಾಳಿ: ಸಾವು ಬುದುಕಿನ ನಡುವೆ ಹೋರಾಟ

ಬಾಲಕನೊಬ್ಬ ನಮಾಜ್‌ಗೆ ಹೋಗುವಾಗ ಸುಮಾರು 15ರಿಂದ 20 ಬೀದಿ ನಾಯಿಗಳು ಸೇರಿಕೊಂಡು ಮನಸೋ ಇಚ್ಛೆ ದಾಳಿ ಮಾಡಿ ಕಚ್ಚಿ ಎಳೆದಿರುವ ದುರ್ಘಟನೆ ಕೋಲಾರ ನಗರದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

Dogs attacked Kolar boy was going for Namaz sat

ಕೋಲಾರ (ಏ.21): ಬಾಲಕನೊಬ್ಬ ನಮಾಜ್‌ಗೆ ಹೋಗುವಾಗ ಸುಮಾರು 15ರಿಂದ 20 ಬೀದಿ ನಾಯಿಗಳು ಸೇರಿಕೊಂಡು ಮನಸೋ ಇಚ್ಛೆ ದಾಳಿ ಮಾಡಿ ಕಚ್ಚಿ ಎಳೆದಿರುವ ದುರ್ಘಟನೆ ಕೋಲಾರ ನಗರದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಈಗ ಮುಸ್ಲಿಂ ಸಮುದಾಯದ ದೊಡ್ಡ ಹಬ್ಬವಾದ ರಂಜಾನ್‌ ಮಾಸದ ಅವಧಿಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ಉಪವಾಸ ಆಚರಣೆ ಮಾಡುವುದು ಸಾಮಾನ್ಯ. ಬೆಳಗ್ಗಿನ ಜಾವ ಸೂರ್ಯೋದಯಕ್ಕೂ ಮುನ್ನವೇ ಊಟವನ್ನು ಮಾಡಿ, ಹಲಗಲು ಹೊತ್ತಿನಲ್ಲಿ ಉಪವಾಸ ಇದ್ದು ಕೊನೆಗೆ ಸೂರ್ಯಾಸ್ತದ ನಂತರ ಉಪವಾಸ ಕೊನೆಗೊಳಿಸುತ್ತಾರೆ. ಜೊತೆಗೆ, ದಿನಕ್ಕೆ ಐದು ಬಾರಿ ಮಸೀದಿಗೆ ತೆರಳಿ ನಮಾಜ್‌ ಮಾಡುವುದು ಕೂಡ ಅವರ ಸಂಪ್ರದಾಯವಾಗಿರುತ್ತದೆ. ಇನ್ನು ಪ್ರತಿನಿತ್ಯ ತಮ್ಮ ಪಾಲಕರೊಂದಿಗೆ ನಾಮಜ್‌ಗೆ ಹೋಗುತ್ತಿದ್ದ ಬಾಲಕ ಇಂದು ಬೆಳಗ್ಗೆ ಪಾಲಕರು ಬೇಗನೇ ಮಸೀದಿಗೆ ಹೋಗಿದ್ದಾರೆ. ಹೀಗಾಗಿ, ಬಾಲಕ ಒಬ್ಬನೇ ಬೆಳಗಿನ ಜಾವ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಬೀದಿ ನಾಯಿಗಳ ಹಿಂಡು ಬಂದು ಬಾಲಕನ ಮೇಲೆ ದಾಳಿ ಮಾಡಿವೆ.

ಆಟವಾಡುತ್ತಿದ್ದ ಮಕ್ಕಳ ದಾರುಣ ಸಾವು! ಬೇಸಿಗೆ ರಜೆಯಲ್ಲಿ ಮಕ್ಕಳ ಬಗ್ಗೆ ಕಾಳಜಿಯಿರಲಿ

ರಕ್ತದೋಕುಳಿಯಂತೆ ರಕ್ತಸ್ರಾವ:  ಬೀದಿ ನಾಯಿ ದಾಳಿಯಿಂದ ನರಳುತ್ತಿದ್ದ ಬಾಲಕನನ್ನು ಬಾಬು (9) ಎಂದು ಗುರುತಿಸಲಾಗಿದೆ. ನಾಯಿ ದಾಳಿಯಿಂದ ನರಳಾಡುತ್ತಿದ್ದ ಬಾಲಕನನ್ನು ರಾತ್ರಿ ಬೀಟ್‌ನಲ್ಲಿದ್ದ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ರಾಜಣ್ಣ ಅವರು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಬರೋಬ್ಬರಿ 15ಕ್ಕೂ ಅಧಿಕ ನಾಯಿಗಳು ದಾಳಿ ಮಾಡಿ ಕಚ್ಚಿದ್ದರಿಂದ ಬಾಲಕನ ದೇಹವೆಲ್ಲವೂ ರಕ್ತದೋಕುಳಿಯಂತೆ ರಕ್ತಸ್ರಾವ ಉಂಟಾಗುತ್ತಿತ್ತು. ಬಾಲಕನ ಹೊಟ್ಟೆ,ಕೈ, ಕಾಲು ಮುಖ ಹಾಗೂ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಬಾಲಕನನ್ನು ಆರ್.ಎಲ್ ಜಾಲಪ್ಪ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದಾರೆ. ಬಾಲಕನಿಗೆ ಚಿಕಿತ್ಸೆ ಮುಂದುವರೆದಿದೆ.

ಪೋಷಕರು ನಿಗಾವಹಿಸಿ: ಬೀದಿ ನಾಯಿಗಳ ಹಾವಳಿಗೆ ಚಿಕ್ಕ ಮಕ್ಕಳು ಬಲಿಯಾಗುತ್ತಿರುವ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ, ಚಿಕ್ಕ ಮಕ್ಕಳನ್ನು ಒಬ್ಬಂಟಿಯಾಗಿ ಹೊರಗೆ ಕಳುಹಿಸಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಆದರೆ, ಈಗ ಕೋಲಾರದ ರೆಹಮತ್  ನಗರದಲ್ಲಿಯೂ ಕೂಡ ಇಂತಹದ್ದೇ ಒಂದು ಅವಘಡ ಸಂಭವಿಸಿದ್ದು, ಬಾಲಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈಗಲಾದರೂ ಚಿಕ್ಕ ಮಕ್ಕಳನ್ನು ಜನನಿಬಿಡ ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ಕಳುಹಿಸುವುದನ್ನು ಪೋಷಕರು ನಿಲ್ಲಿಸಬೇಕು. ಮಕ್ಕಳು ಹೋಗುವಾಗ ಅವರ ಜೊತೆಗೆ ಒಬ್ಬರು ಪಾಲಕರು ಇದ್ದರೆ ಅವರ ರಕ್ಷಣೆಗೆ ಅನುಕೂಲ ಆಗಲಿದೆ.

ಆಟವಾಡುವುದಾಗಿ ಹೇಳಿ ಮೀನು ಹಿಡಿಯಲು ಹೋದ ಮಕ್ಕಳು: ಕೆರೆಯಲ್ಲಿ ಮುಳುಗಿ ಸಾವು

ನಿನ್ನೆ ತುಮಕೂರಲ್ಲಿ ವಿದ್ಯುತ್‌ ಶಾಕ್‌ ಉಂಟಾಗಿ ಇಬ್ಬರು ಮಕ್ಕಳ ಸಾವು:  ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಯಲ್ಲಿ ಹಿಡಿದಿಡುವುದು ಸಾಧ್ಯವಾಗಲೇ ಮನೆಯ ಮೇಲೆ ಆಟವಾಡಿಕೊಳ್ಳಿ ಎಂದು ಕಳುಹಿಸಿದರೆ, ಮನೆಯ ಪಕ್ಕದಲ್ಲಿಯೇ ಹಾದು ಹೋಗಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ತುಮಕೂರು ನಗರದ ಬೆಳಗುಂಬಾದ ಸಿದ್ದರಾಮಶ್ವರ ಬಡಾವಣೆಯಲ್ಲಿ ನಡೆದಿದೆ. ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಮಕ್ಕಳನ್ನು ಪ್ರಜ್ವಲ್ (14) ಹಾಗೂ ಯತೀಶ್ (14) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಮಕ್ಕಳು 8 ತರಗತಿ ಓದುತ್ತಿದ್ದರು. ಮೃತ ಯತೀಶ್, ವೀರಭದ್ರಯ್ಯ ಎಂಬುವ ಮಗನಾಗಿದ್ದು, ಪ್ರಜ್ವಲ್‌ ಪಕ್ಕದ ಮನೆಯ ಸಿದ್ದಲಿಂಗಯ್ಯ ಎಂಬುವ ಮಗನಾಗಿದ್ದಾನೆ. ಇಬ್ಬರು ಅಕ್ಕಪಕ್ಕದ ಮನೆ ನಿವಾಸಿಗಳು. ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಆಟವಾಡುತ್ತಿದ್ದರು. ಆದರೆ, ಮನೆಯೊಳಗೆ ಬಿಟ್ಟು ಹೊರಗೆ ಹೋಗಿ ಆಟವಾಡಿಕೊಳ್ಳುವಂತೆ ಮನೆಯವರು ಕಳುಹಿಸಿದ್ದಾರೆ. ಹೀಗಾಗಿ, ಮನೆಯ ಮೇಲೆ ಹೋಗಿ ಆಟವಾಡುವಾಗ ವಿದ್ಯುತ್‌ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios