ನಾಯಿ ಕಚ್ಚಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದವರ ಬೈಕ್ ಸುಟ್ಟ ಭೂಪ!
ನಾಯಿ ಕಚ್ಚಿದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದರೆಂದು ವ್ಯಕ್ತಿಯೊಬ್ಬ ದೂರು ನೀಡಿದವರ ಬೈಕ್ ಗಳಿಗೆ ಬೆಂಕಿ ಹಚ್ಚಿ ಸುಟ್ಟಹಾಕಿದ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ. ನಾಯಿ ಮಾಲೀಕ ನಂಜುಂಡಬಾಬು ಎಂಬಾತನೇ ಬೈಕ್ ಸುಟ್ಟ ಆರೋಪಿ.

ಬೆಂಗಳೂರು (ಅ.26): ನಾಯಿ ಕಚ್ಚಿದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದರೆಂದು ವ್ಯಕ್ತಿಯೊಬ್ಬ ದೂರು ನೀಡಿದವರ ಬೈಕ್ ಗಳಿಗೆ ಬೆಂಕಿ ಹಚ್ಚಿ ಸುಟ್ಟಹಾಕಿದ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ.
ನಾಯಿ ಮಾಲೀಕ ನಂಜುಂಡಬಾಬು ಎಂಬಾತನೇ ಬೈಕ್ ಸುಟ್ಟ ಆರೋಪಿ. ಆರೋಪಿಯನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳು(ಅ.23) ರಂದು ನಡೆದಿದ್ದ ಘಟನೆ. ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯಯಲ್ಲಿರುವ ಆರೋಪಿಯ ಮನೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಗೆ ನಂಜುಂಡಬಾಬು ಸಾಕಿದ ನಾಯಿ ಕಚ್ಚಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು.
ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ ‘ಹುಲಿ ಉಗುರು’: ದರ್ಶನ್, ವಿನಯ್ ಗುರೂಜಿಗೂ ಶುರುವಾಗುತ್ತಾ ಸಂಕಷ್ಟ..?
ಇದಕ್ಕೂ ಮೊದಲು ದೂರುದಾರ ಮಹಿಳೆ ಹಾಗೂ ಆರೋಪಿ ನಂಜುಂಡಬಾಬು ಎಂಬುವವರ ನಡುವೆ ಚೀಟಿ ವ್ಯವಹಾರವಿತ್ತು. ನಾಯಿ ಕಚ್ಚಿದ್ದರಿಂದ ಚೀಟಿ ಹಣವನ್ನು ಆಸ್ಪತ್ರೆ ಚಿಕಿತ್ಸೆಗೆ ಬಳಸಿಕೊಂಡಿದ್ದ ಮಹಿಳೆ. ಇದರಿಂದ ಕೋಪಗೊಂಡಿದ್ದ ಆರೋಪಿ ನಂಜುಂಡಬಾಬು. ದೂರು ಕೊಟ್ಟವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಅದರಂತೆಯೇ ಮಹಿಳೆಯ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಆರೋಪಿ. ಎರಡೂ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಆರೋಪಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ. ಮಹಿಳೆ ದೂರು ನೀಡಿದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು. ಪ್ರಕರಣ ಸಂಬಂಧ ಕೊತ್ತನೂರು ಪೊಲೀಸರಿಂದ ತನಿಖೆ ಮುಂದುವರಿದಿದೆ.
ಅಜ್ಜನ ರಿವಾಲ್ವರ್ ಹಿಡಿದು ಮನೆಮೇಲೆ ಎರ್ರಾಬಿರ್ರಿ ಫೈರಿಂಗ್ ಮಾಡಿದ ಮೊಮ್ಮಗ!