Asianet Suvarna News Asianet Suvarna News

ಶೀತ ಕೆಮ್ಮುವಿಗೆ ಆಡ್ಮಿಟ್, ವೈದ್ಯರ ನಿರ್ಲಕ್ಷ್ಯಕ್ಕೆ 10 ತಿಂಗಳ ಕಂದಮ್ಮ ಸಾವು

10 ತಿಂಗಳ ಕಂದಮ್ಮ, ಶೀತ ಕೆಮ್ಮು ಅನ್ನೋ ಕಾರಣಕ್ಕೆ ವೈದ್ಯರ ಬಳಿ ಬಂದಿದ್ದಾರೆ.  ಮಗುವನ್ನು ಆಡ್ಮಿಟ್ ಮಾಡಲು ಸೂಚಿಸಿದ್ದಾರೆ. ವೈದ್ಯರ ಸೂಚನೆಯಂತೆ ಆಡ್ಮಿಟ್ ಮಾಡಿದರೆ ಆಗಿದ್ದು ಘನಘೋರ ದುರಂತ. ವೈದ್ಯರ ನಿರ್ಲಕ್ಷ್ಯ, ಸಿಬ್ಬಂದಿಗಳ ಅಸಡ್ಡೆಗೆ 10 ತಿಂಗಳ ಪುಟ್ಟ ಕಂದಮ್ಮ ಮೃತಪಟ್ಟಿದೆ.

Doctor Nurse and management booked for negligence after10 month old boy died during treatment for cold and cough Chhattisgarh ckm
Author
First Published Nov 17, 2022, 7:08 PM IST

ಚತ್ತೀಸಘಡ(ನ.17):  ಒಂದು ತಿಂಗಳಿಗೂ ಹೆಚ್ಚು ಕಾಲ ಶೀತ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಶೀತ ಕೆಮ್ಮು ಸಾಮಾನ್ಯವಾಗಿದ್ದರೂ ಹತ್ತಿರದ ಕ್ಲೀನಿಕ್‌ನಿಂದ ಔಷಧಿ ಪಡೆದಿದ್ದಾರೆ. ಆದರೆ ಕಡಿಮೆಯಾಗಿಲ್ಲ ಹೀಗಾಗಿ 10 ತಿಂಗಳ ಕಂದಮ್ಮನ ಸಮೀಪದ ಆಸ್ಪತ್ರೆಯ ವೈದ್ಯರ ಬಳಿಕ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತಪಾಸಣೆ ನಡೆಸಿ ಆಸ್ಪತ್ರೆ ದಾಖಲಿಸಲು ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ದುಡ್ಡು ಪಾವತಿಸಿ ಕಂದನ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಾದ ಬಳಿಕ ವೈದ್ಯರು, ಸಿಬ್ಬಂದಿಗಳ ವರಸೆ ಬದಲಾಗಿದೆ. ನೆಪ ಮಾತ್ರಕ್ಕೆ ತಪಾಸಣೆ, ಔಷಧಿಗಳು ಸರಿಯಾದ ಸಮಯಕ್ಕೆ ನೀಡದೇ ಇರುವ ಹಲವು ಘಟನಗಳು ನಡೆದಿದೆ. ಸಿಕ್ಕ ಸಿಕ್ಕ ಔಷಧಿಗಳನ್ನು ಕಂದಮ್ಮಗೆ ನೀಡಿದ್ದಾರೆ. ಇದರ ಪರಿಣಾಮ ಪುಟ್ಟ ಕಂದ ಮೃತಪಟ್ಟಿದೆ. ಈ ಘಟನೆ ನಡೆದ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಆಸ್ಪತ್ರೆ ಲೈಸೆನ್ಸ್ ರದ್ದಾಗಿದೆ, ಆಡಳಿತ ಮಂಡಳಿಗೆ 20,000 ರೂಪಾಯಿ ದಂಡ ವಿಧಿಸಲಾಗಿದೆ.  ನಡೆದಿರುವುದು ಚತ್ತೀಸಘಡದ ಬಿಲಾಲಿ ವಲಯದ ಸಿರ್ಸಾ ಗೇಟ್ ಬಳಿ ಈ ಘಟನೆ ನಡೆದಿದೆ . 

ಶೀತ ಕೆಮ್ಮುವಿನ ಕಾರಣ 10 ತಿಂಗಳ ಮಗುವನ್ನು ಸಿದ್ದಿ ವಿನಿಯಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸಿದ ಮರುದಿನವೂ ಮಗು ಆರೋಗ್ಯವಾಗಿತ್ತು. ಶೀತ ಕೆಮ್ಮು ಸಮಸ್ಯೆ ಹೊರತುಪಡಿಸಿದರೆ ಇನ್ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ವೈದ್ಯರು ಹೈಡೋಸ್ ಮದ್ದು, ಹೈಡೋಸ್ ಇಂಜೆಕ್ಷನ್ ನೀಡಿದ್ದಾರೆ. ಇಷ್ಟೇ ಅಲ್ಲ ಆಸ್ಪತ್ರೆ ಸಿಬ್ಬಂದಿಗಳು ತಪ್ಪಾಗಿ ಬೇರೆ ಔಷಧಿಗಳನ್ನು ನೀಡಿದ್ದಾರೆ. ಇದರಿಂದ ಮಗುವಿನ ಆರೋಗ್ಯ ಏರುಪೇರಾಗಿದೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು ಮಗುವಿನ ಅಜ್ಜ ಮಹೇಶ್ ವರ್ಮಾ ದೂರಿನಲ್ಲಿ ಹೇಳಿದ್ದಾರೆ.

ತುಮಕೂರು: ತಾಯಿ, ಸೋದರರ ಸಾವಿನಿಂದ ಅನಾಥವಾದ ಬಾಲಕಿಗೆ 10 ಲಕ್ಷ, ಸಚಿವ ಸುಧಾಕರ್‌

ದೂರಿನ ಬೆನ್ನಲ್ಲೇ ಮೆಡಿಕಲ್ ಹಾಗೂ ಹೆಲ್ತ್ ಆಫೀಸರ್ ಜೆಪಿ ಮೇಶ್ರಾಮ್ ತನಿಖೆಗೆ ಆದೇಶಿಸಿದ್ದಾರೆ. ಎಸ್‌ಪಿ ಪ್ರಭಾತ್ ಕುಮಾರ್ ನೇೃತ್ವದ ತಂಡ ತುರ್ತು ತನಿಖೆ ನಡೆಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು, ವೈದ್ಯರು ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ವರದಿ ಆಧರಿಸಿ ಅಧಿಕಾರಿಗಳು ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಿದ್ದಾರೆ. ಜೊತೆಗೆ 20,000 ರೂಪಾಯಿ ದಂಡ ವಿಧಿಸಿದ್ದಾರೆ. ಇತ್ತ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 

ಕೂಸು- ಬಾಣಂತಿ ಸಾವು- ಜನವಾದಿ ಮಹಿಳೆಯರ ಖಂಡನೆ
ತುಮಕೂರು ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಹಸು ಗೂಸುಗಳ ಸಾವಿಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿಯ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.

ಕೋಲಾರ: ಮಗು ಕೊಂದು ತಂದೆಯೂ ಆತ್ಮಹತ್ಯೆ

ಸಂಘಟನೆಯ ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಪ್ರ ಕಾರ್ಯದರ್ಶಿ ದೇವಿ, ಉಪಾಧ್ಯಕ್ಷ ಕೆ ನೀಲಾ, ಜಿಲ್ಲಾ ಅಧ್ಯಕ್ಷ ಚಂದಮ್ಮ ಗೋಳಾ ಹಾಗೂ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಈ ಕುರಿತು ಹೇಳಿಕೆ ನೀಡಿ, ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರನ್ನು ತಾಯಿ ಕಾರ್ಡು. ಆರ್ಧಾ ಕಾರ್ಡು ಇಲ್ಲ ಎಂಬ ಕಾರಣದಿಂದ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರು ಆಸ್ಪತ್ರೆಗೆ ದಾಖಲಿಸಿ ಕೊಳ್ಳದೆ ಚಿಕಿತ್ಸೆಯನ್ನು ನೀಡದೆ ವಾಪಸ್‌ ಕಳುಹಿಸಿದ ಅಮಾನವೀಯ ಘಟನೆ ಉಗ್ರವಾಗಿ ಖಂಡಿಸಲೇಬೇಕು.

Follow Us:
Download App:
  • android
  • ios