ಕೋಲಾರ ಸಮೀಪದ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯ ಕೆಂದಟ್ಟಿ ಬಳಿ ನಡೆದ ಘಟನೆ 

ಕೋಲಾರ(ನ.17): ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಗುವಿನೊಂದಿಗೆ ತಂದೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಕೋಲಾರ ಸಮೀಪದ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯ ಕೆಂದಟ್ಟಿ ಬಳಿ ನಡೆದಿದೆ. ಕೋಲಾರ ಸಮೀಪದ ಕೆಂದಟ್ಟಿಕೆರೆಯಲ್ಲಿ ಸುಮಾರು 3 ವರ್ಷದ ಜಿಯಾ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ. ತಂದೆ ರಾಹುಲ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಹೊಸಕೋಟೆ ತಾಲೂಕಿನ ಬಾಗಲೂರಿನ ಕಣ್ಣೂರಿನ ನಿವಾಸಿ ರಾಹುಲ್‌ ಮತ್ತು ಜಿಯಾ ಮಂಗಳವಾರದಿಂದ ಮನೆಯಿಂದ ಕಾಣೆಯಾಗಿದ್ದಾರೆ, ಇವರು ಗುಜರಾತ್‌ನವರಾಗಿದ್ದು, ಹೊಸಕೋಟೆ ಸಮೀಪದ ಎನ್‌ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 6 ತಿಂಗಳಿನಿಂದ ಬಾಗಲೂರಿನ ಕಣ್ಣೂರು ಸಮೀಪದ ಮನೆ ಮಾಡಿಕೊಂಡು ವಾಸವಿದ್ದರೆನ್ನಲಾಗಿದೆ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ರಾಹುಲ್‌ ಮನೆಯಲ್ಲಿದ್ದ ಒಡವೆಗಳನ್ನು ಅಡವಿಟ್ಟಿದ್ದ ಎನ್ನಲಾಗಿದೆ. ಈ ಸಂಬಂಧ ಬಾಗಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ರಾಹುಲ್‌ನನ್ನು ವಿಚಾರಣೆಗೆ ಮಂಗಳವಾರ ಕರೆದಿದ್ದರು, ರಾಹುಲ್‌ ತನ್ನ ಮಗಳನ್ನು ಶಾಲೆಗೆ ಬಿಟ್ಟು ಹಾಗೆ ವಿಚಾರಣೆಗೆ ಹೋಗುವುದಾಗಿ ಕಾರಿನಲ್ಲಿ ಹೊರಟವರು ಸಂಜೆಯಾದರೂ ಮನೆಗೆ ವಾಪಸ್ಸು ಬಂದಿಲ್ಲ.

Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ರಾಹುಲ್‌ ಕುಟುಂಬದವರು ಮೊಬೈಲ್‌ ಜಾಡು ಹಿಡಿದು ಬಂದಾಗ ಕೆಂದಟ್ಟಿಕೆರೆ ಸಮೀಪ ಕಾರು ಪತ್ತೆಯಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ರಾಹುಲ್‌ ಶವಕ್ಕಾಗಿ ಹುಡುಗಾಟ ನಡೆಸಲಾಗುತ್ತಿದೆ.

ರಾಹುಲ್‌ ಕುಟುಂಬದ ಪ್ರಕಾರ ಮಗುವನ್ನು ಕೊಲೆ ಮಾಡಿ ಕೆರೆಗೆ ಎಸೆದು ತಂದೆ ಪರಾರಿಯಾಗಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ರಾಹುಲ್‌ ಕಳೆದ 6 ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲಿದ್ದ ಎನ್ನಲಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.