Asianet Suvarna News Asianet Suvarna News

ಗರ್ಲ್ ಫ್ರೆಂಡ್, ಐಷಾರಾಮಿ ಜೀವನಕ್ಕೆ ಸ್ಯಾಲರಿ ಸಾಲುತ್ತಿಲ್ಲ, ಸರಗಳ್ಳತನಕ್ಕೆ ಇಳಿದ ಸಿವಿಲ್ ಎಂಜನಿಯರ್!

  • ಸಂಬಳ ಸಾಕಾಗುತ್ತಿಲ್ಲ ಎಂದು ಸರಗಳ್ಳತನಕ್ಕೆ ಇಳಿದ ಎಂಜಿನಿಯರ್ ಕತೆ ಇದು
  • ಗರ್ಲ್‌ಫ್ರೆಂಡ್ ಜೊತೆ ಸುತ್ತಾಟಕ್ಕೆ ಸರಗಳ್ಳತನದ ದುಡ್ಡು ಬಳಕೆ
  • 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ, ಇದೀಗ ಪೊಲೀಸರ ಅತಿಥಿ
Dissatisfaction with salary Nagpur Young civil engineer turns to chain snatcher ckm
Author
Bengaluru, First Published Nov 2, 2021, 3:53 PM IST

ನಾಗ್ಪುರ (ನ.02): ಸಂಬಳ(Salary) ಸಾಕಾಗುತ್ತಿಲ್ಲ ಎಂದು ಕಳ್ಳತನ ಅಥವಾ ಕಾನೂನು ಬಾಹಿರ ಚಟುವಟಿಕೆ ಮೂಲಕ ಆದಾಯ ಗಳಿಸಿ ಕೊನೆಗೆ ಪೊಲೀಸರ ಅತಿಥಿಯಾದ ಹಲವು ಘಟನೆಗಳು ವರದಿಯಾಗಿದೆ. ಇದೀಗ ಸಿವಿಲ್ ಎಂಜಿನಿಯರ್(civil engineer) ತನ್ನ ಐಷಾರಾಮಿ ಜೀವನಕ್ಕೆ ಗೆಳತಿ ಜೊತೆ ಸುತ್ತಾಡಲು ಸರಗಳ್ಳತನಕ್ಕೆ(chain snatching) ಇಳಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಬೆಂಗಳೂರು; ಕೊರೋನಾ ಲೀಲೆ.. ಒಂದು ಕಾಲದ ಐಟಿ ಮ್ಯಾನೇಜರ್ ಈಗ ಚೈನ್ ಸ್ನಾಚರ್!

27ರ ಹರೆಯದ ಉಮೇಶ್ ಪಾಟೀಲ್ 2015ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ಕಾಂಟ್ರಾಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಬರುವ ಸಂಬಳದಲ್ಲಿ ತನ್ನ ಖರ್ಚು, ಐಷಾರಾಮಿ ಜೀವನ, ಗೆಳತಿಯ ಖರ್ಚಿ ಸಾಗುತ್ತಿರಲಿಲ್ಲ. ಹೀಗಾಗಿ ಮತ್ತೊಂದು ಕೆಲಸ ಮಾಡುವಷ್ಟು ಶ್ರಮಜೀವಿ ಅಲ್ಲ, ಕೆಲಸ ಬಿಟ್ಟು ಉತ್ತಮ ವೇತನದ ಕೆಲಸ ಹುಡುಕುವಷ್ಟು  ಪ್ರತಿಭೆಯೂ ಇಲ್ಲ. ಆದರೆ ಸುಲಭ ವಿಧಾನದಲ್ಲಿ ಆದಾಯ ಗಳಿಸಬೇಕು ಅನ್ನೋದು ಉಮೇಶ್ ಪಾಟೀಲ್ ಲೆಕ್ಕಾಚಾರ.

ತುಷಾರ್ ದಿಲ್ಕೆ ಅನ್ನೋ ವ್ಯಕ್ತಿ ಜೊತೆಗೂಡಿ 20ಕ್ಕೂ ಹೆಚ್ಚು ಚಿನ್ನದ ಸರ ಎಗರಿಸಿ ಹಣ ಸಂಪಾದಿಸಿದ್ದಾರೆ. ಆದರೆ ಹಣ ಹಂಚಿಕೆ ವಿಚಾರದಲ್ಲಿ ತುಷಾರ್ ಹಾಗೂ ಉಮೇಶ್ ಪಾಟೀಲ್ ನಡುವೆ ಬಿರುಕು ಮೂಡಿದೆ. ಹೀಗಾಗಿ ಉಮೇಶ್ ಸರಗಳ್ಳತನವನ್ನು ಏಕಾಂಗಿಯಾಗಿ ಮಾಡಿ ಮುಗಿಸಲು ನಿರ್ಧರಿಸಿದ್ದಾರೆ.

2020ರ ನವೆಂಬರ್ ತಿಂಗಳಲ್ಲಿ ತುಷಾರ್‌ ಜೊತೆ ಸೇರಿ ನಡೆಸುತ್ತಿದ್ದ ಸರಗಳ್ಳತನಕ್ಕೆ ಬ್ರೇಕ್ ಹಾಕಿದ ಉಮೇಶ್, ಸ್ವಂತವಾಗಿ ಸರಗಳ್ಳತನಕ್ಕೆ ಮುಂದಾದ. ಏಕಾಂಗಿಯಾಗಿ 36 ಸರಗಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸಿದ್ದ. ಇದರಿಂದ ಲಕ್ಷ ಲಕ್ಷ ರೂಪಾಯಿ ಆದಾಯ ಪಡೆದ ಉಮೇಶ್ ಪಾಟೀಲ್, ಹೆಸರಿಗೆ ಮಾತ್ರ ಸಿವಿಲ್ ಎಂಜಿನಿಯರಿಂಗ್ ಕಾಟ್ಪಾಂಕ್ಟ್ ಕೆಸವೊಂದನ್ನು ಇಟ್ಟುಕೊಂಡಿದ್ದ.

ಬೆಂಗಳೂರು; ಒಂದೇ ದಿನ 19 ಕಡೆ ಸರಗಳ್ಳತ ಮಾಡಿದ್ದ ಶಾಮ್ಲಿ ಗ್ಯಾಂಗ್ ಅರೆಸ್ಟ್!

ಅಕ್ಟೋಬರ್ ತಿಂಗಳ ಆರಂಭದಲ್ಲಿ ಉಮೇಶ್ ಪಾಟೀಲ್ ಎಂದಿನಂತೆ ಸಗಳ್ಳತನಕ್ಕೆ ಇಳಿದಿದ್ದ. ಈತನ ನಡೆ ಗಮನಿಸಿದ ಪೊಲೀಸರು ಉಮೇಶ್ ಪಾಟೀಲ್ ಬೈಕ್ ಹಿಂಬಾಲಿಸಿದ್ದಾರೆ. ದಿಢೀರ್ ಯು ಟರ್ನ್ ಪಡೆದ ಉಮೇಶ್ ಪಾಟೀಲ್ ಮಹಿಳೆಯ ಬಳಿ ವಿಳಾಸ ಕೆಳುವಂತೆ ನಟೆಸಿದ್ದಾನೆ. ಮಹಿಳೆ ಸರದ ಮೇಲೆ ಕಣ್ಣಿಟ್ಟದ್ದ ಸಿವಿಲ್ ಎಂಜನಿಯರ್, ಇನ್ನೇನು ಸರ ಕದ್ದು ಎಗರಿಸಬೇಕು ಅನ್ನುವಷ್ಟರಲ್ಲೆ ಪೊಲೀಸರು ಉಮೇಶ್ ಪಾಟೀಲ್ ವಾಹನವನ್ನು ಅಡ್ಡಗಡಿ ನೆಲಕ್ಕುರಳಿಸಿದ್ದಾರೆ.

ಈ ಸಾಹಸದಲ್ಲಿ ಪೊಲೀಸರಿಗೂ ಗಾಯವಾಗಿದೆ. ಆದರೆ ಗಾಯ ಲೆಕ್ಕಿಸದ ಪೊಲೀಸರು ಉಮೇಶ್ ಪಾಟೀಲ್ ಸೆರೆ ಹಿಡಿದ್ದಾರೆ. ಎರಡು ಜಾಕೆಟ್ ಹಾಕಿ ಸುಲಭವಾಗಿ ಸರಗಳ್ಳತನ ಮಾಡಿ ಜಾಕೆಟ್ ಒಳಗಡೆ ಇಟ್ಟುಕೊಳ್ಳುತ್ತಿದ್ದ. ಇತ್ತ ಈತನ ಬೈಕ್ ನಂಬರ್ ಪ್ಲೇಟ್ ಕೂಡ ನಕಲಿಯಾಗಿತ್ತು. ಈ ಮೂಲಕ ಯಾರ ಕಣ್ಣಿಗೂ ಬೀಳದೆ ಸರಾಗವಾಗಿ ಸರಗಳ್ಳತನ ಮಾಡಿ ಕಾಲ ಕಳೆಯುತ್ತಿದ್ದ.

ಸಿಸಿಟಿವಿ ಆಧಾರದಲ್ಲಿ ಸರಗಳ್ಳರ ಪತ್ತೆ ಮಾಡಿದ  ಬೆಂಗಳೂರು ಪೊಲೀಸರು

ಉಮೇಶ್ ಪಾಟೀಲ್ ಮನೆಗೆ ತೆರಳಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ 2.5 ಲಕ್ಷ ರೂಪಾಯಿ ನಗದು ಹಾಗೂ 27 ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಸರಗಳ್ಳತನ ಮಾಡಿದ ಹಣದಿಂದ 45 ಲಕ್ಷ ರೂಪಾಯಿ ನೀಡಿ ಫ್ಯಾಟ್ ಖರೀದಿಸಿದ್ದ. ಇತ್ತ ಈತನ ಖಾತೆಯಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್ ಕೂಡ ಪತ್ತೆಯಾಗಿದೆ.

ಗೆಳತಿ ಜೊತೆ ಸುತ್ತಾಡಲು, ಐಷಾರಾಮಿ ಜೀವನಕ್ಕೆ ವೇತನ ಸಾಲುತ್ತಿರಲಿಲ್ಲ. ಹೀಗಾಗಿ ಸರಗಳ್ಳತನಕ್ಕೆ ಇಳಿದಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ. ಕದ್ದ ಚಿನ್ನದ ಸರಗಳನ್ನು ಈತ ಪರಿಚಯಸ್ಥ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ . ಚಿನ್ನದ ಅಂಗಡಿಯಾ ಅದೆ ಸರಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಹೀಗಾಗಿ ಉಮೇಶ್ ಪಾಟೀಲ್ ಜೊತೆ ಚಿನ್ನದ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ.
 

Follow Us:
Download App:
  • android
  • ios