Asianet Suvarna News Asianet Suvarna News

ಜೀವನದಲ್ಲಿ ಜುಗುಪ್ಸೆ; ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ!

ಯುವಕನೊಬ್ಬ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಯ್ಕಿಣಿಯ ಬಾಕಡಕೇರಿಯಲ್ಲಿ ನಡೆದಿದೆ.

Disgust in life  young men committed suicide by hanging himself at uttara kannada rav
Author
First Published Jun 1, 2023, 11:18 AM IST

ಭಟ್ಕಳ (ಜೂ.1) : ಯುವಕನೊಬ್ಬ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಯ್ಕಿಣಿಯ ಬಾಕಡಕೇರಿಯಲ್ಲಿ ನಡೆದಿದೆ.

ಶಿರಾಲಿ ಮಣ್ಣೊಂಡದ ನಿವಾಸಿ ದಿನೇಶ ಮಂಜಪ್ಪ ನಾಯ್ಕ (28) ಆತ್ಮಹತ್ಯೆ ಮಾಡಿಕೊಂಡವನು. ಈತ ಸಣ್ಣಪುಟ್ಟಗುತ್ತಿಗೆ ಕೆಲಸವನ್ನು ನಿರ್ವಹಿಸುತ್ತಿದ್ದು, ಮನೆಯಿಂದ ಹೊರಗೆ ಹೋದ ಈತ ವಾಪಸ್‌ ಮನೆಗೆ ಬರದೇ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬಾಕಡಕೇರಿ ಸ್ಮಶಾನದ ಸಮೀಪ ಗೇರು ಮರಕ್ಕೆ ನೈಲಾನ್‌ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಮೃತನ ಸಹೋದರ ಸುಬ್ರಾಯ ನಾಯ್ಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಗರ ಕೋರ್ಟ್‌ ಬೆರಳಚ್ಚುಗಾರ ನಿತ್ಯಾನಂದ ಆತ್ಮಹತ್ಯೆ: ಸಾಯುವಂತಹ ಸಮಸ್ಯೆಯಾದ್ರೂ ಏನಿತ್ತು?

ನಲ್ಲೂರು: ಹೋಟೆಲ್‌ ಕಾರ್ಮಿಕ ಆತ್ಮಹತ್ಯೆ

ಕಾರ್ಕಳ: ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಗಾಂಧಿನಗರ ಎಂಬಲ್ಲಿ ಫೆ.4ರಂದು ನಡೆದಿದೆ.

ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮದ ಹರಿಖಂಡಿಗೆ ಕೆರೆಹಾಡಿ ಮನೆ ನಿವಾಸಿ ಮಹೇಶ್‌ ಬಿ. ಹೆಗ್ಡೆ (47) ಆತ್ಮಹತ್ಯೆ ಮಾಡಿಕೊಂಡವರು. ಇವರು ಕಳೆದ ಒಂದು ವರ್ಷದಿಂದ ಗಾಂಧಿ ನಗರದಲ್ಲಿರುವ ಶ್ರೀ ಓಂ ಹೋಟೆಲ್‌ ನಲ್ಲಿ ಕೆಲಸ ಮಾಡುತಿದ್ದರು. ಅವರು ಅಲ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕಾಯಿಲೆ ಗುಣವಾಗದೆ ದಿನದಿಂದ ದಿನಕ್ಕೆ ದೇಹ ಸ್ಥಿತಿ ಕ್ಷೀಣಿಸುತ್ತಿರುವುದರಿಂದ ಮಾನಸಿಕವಾಗಿ ನೊಂದಿದ್ದರು.

ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಶನಿವಾರ ಮುಂಜಾನೆ ವೇಳೆಗೆ ತಾನು ಕೆಲಸ ಮಾಡುತ್ತಿದ್ದ ಕ್ಯಾಂಟೀನ್‌ ಒಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಮಾನಸಿಕ ಅಸ್ವಸ್ಥ ತಾಯಿ ಕೊಂದು ಮಗಳೂ ಆತ್ಮಹತ್ಯೆಗೆ ಶರಣು..!

Follow Us:
Download App:
  • android
  • ios