ಕಾರು ಮತ್ತು ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ/ ಭೀಕರ ರಸ್ತೆ ಅಪಘಾತಕ್ಕೆ ಓರ್ವ ಮಹಿಳೆ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ/ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಾಸ್ತಿಕಟ್ಟಾ ಬಳಿ ಘಟನೆ/ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು/ ಧಾರವಾಡ ಮೂಲದ ರೇಖಾ ಸಾವು

ಕಾರವಾರ(ಜ. 31) ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಾಸ್ತಿಕಟ್ಟಾ ಬಳಿ ದುರ್ಘಟನೆ ನಡೆದಿದೆ. ಧಾರವಾಡ ಮೂಲದ ರೇಖಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗೋವಾಕ್ಕೆ ಹೊರಟ ಬಾಲ್ಯ ಗೆಳತಿಯರೆಲ್ಲರ ದುರ್ಮರಣ

ಮೇಘಾ, ಯು.ಬಿ.ಮೇಸ್ತಾ, ಮುಲ್ಲಾ‌ ಗಾಯಗೊಂಡಿದ್ದಾರೆ ರಿಟ್ಜ್ ಕಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಅಪಘಾತಕ್ಕೆ ಗುರಿಯಾದವರೆಲ್ಲರೂ ಧಾರವಾಡ ಮೂಲದವರು. ಕಾರು ಅಂಕೋಲಾದಿಂದ ಹುಬ್ಬಳ್ಳಿಯತ್ತ ಹೋಗುತ್ತಿತ್ತು ಗದಗದಿಂದ ಕಾರವಾರಕ್ಕೆ ಬರುತ್ತಿದ್ದ ಸರಕಾರಿ ಬಸ್ ಗೆ ಡಿಕ್ಕಿಯಾಗಿದೆ. 

ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಕಾರು ಸಹ ಅಂಕೋಲಾ ಬಳಿಯೇ ಅಪಘಾತಕ್ಕೆ ಗುರಿಯಾಗಿತ್ತು. ಕೇಂದ್ರ ಸಚಿವರ ಪತ್ನಿ ದುರಂತಕ್ಕೆ ಬಲಿಯಾಗಿದ್ದರು.